|
ಬೆಳಗಾವಿ
ಕರ್ನಾಟಕದ ಅವಿಭಾಜ್ಯ ಅಂಗ. ಜಿಲ್ಲೆಯು ಕರ್ನಾಟಕದ ಆರ್ಥಿಕತೆಗೆ ಅಪಾರ ಕೊಡುಗೆ ನೀಡಿದೆ ವ್ಯಾಪಾರ,
ಪ್ರವಾಸೋದ್ಯಮ ಮತ್ತು ರಾಜಕಾರಣದಲ್ಲೂ ತನ್ನದೇ ಆದ ಛಾಪು ಮುಡಿಸಿದ ಜಿಲ್ಲೆ. ಇನ್ನೊಂದು ಪ್ರಮುಖ
ವಿಷಯವೆಂದರೆ ಫೌಂದರಿ ವ್ಯವಹಾರದಲ್ಲಿ ದೇಶದಲ್ಲೇ ಅತ್ತ್ಯುತ್ತಮ ಹೆಸರ ಹೊಂದಿದೆ ಮತ್ತು
ರಾಜ್ಯದಲ್ಲೇ ದೊಡ್ಡ ಜಿಲ್ಲೆ ಅಷ್ಟೇ ಅಲ್ಲದೆ ಪ್ರಾಧೆಷಿಕ
ವಿಭಾಗಿಯ ಪ್ರಧಾನ ಕಚೇರಿ ಕೂಡ ಇರೋದು ಇಲ್ಲಿಯೇ
ಆದರೆ ಈ ಜಿಲ್ಲೆಗಾಗಿ ಅಷ್ಟೇ ತಂಟೆ ತಕರಾರಗಳು ಕೂಡ
ಇವೆ ಈ ಸಮಸ್ಯೆಗಳು ಸಾಮಾನ್ಯ ಜನರಲ್ಲಿ ಕೋಮುವಾದ ವನ್ನು ಬಿತ್ತುತ್ತಿವೆ ಇದರಿಂದ ಯಾರಿಗೂ ಲಾಭ
ಇಲ್ಲ ಯಾಕಂದ್ರೆ ಮಹಾರಾಷ್ಟ್ರ ದವರು ತಲೆ ಕೆಳಗಾಗಿ ನಿಂತರು ಅವರಿಗೂ ಸೇರೋದಿಲ್ಲ ಅದು ಅವರಿಗೂ
ಗೊತ್ತು ಆದರೆ ವಿನಾ ಕಾರಣ ಅವರು ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದ್ದಾರೆ
ಇನ್ನೊಂದು ಪ್ರಮುಖ ವಿಷಯವೆಂದರೆ ಕರ್ನಾಟಕದ ಸರ್ಕಾರ,
ಜನ ಮತ್ತು ಮಹಾರಾಷ್ಟ್ರ ಜನ,ಸರ್ಕಾರಕ್ಕೆ ಬೆಳಗಾವಿ ಗಾಗಿ ಯಾವುದೇ ಸಮಸ್ಯೆಗಳಿಲ್ಲ ಯಾಕಂದ್ರೆ
ಅಲ್ಲಿಯ ಸರ್ಕಾರ ಈ ವಿಷ್ಯವಾಗಿ ಎಂದು ಸರ್ಕಾರಿ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ. ನೀಡೋದು ಇಲ್ಲ
ಅಷ್ಟೇ ಯಾಕೆ ಅಲ್ಲಿಯ ಸರ್ಕಾರಕ್ಕೆ ನಮ್ಮ ರಾಜ್ಯದ ಅಧಿಕಾರಿಗಳು, ಶಾಸಕರು, ಮಂತ್ರಿಗಳು, ಪತ್ರ
ಬರೆದರೆ ಸಾಕು ಎಂಥ ಬೇಸಿಗೆ ಮತ್ತು ಬರಗಾಲದಲ್ಲೂ ಸಹ ಕೃಷ್ಣ ನದಿಗೆ ನದಿಗೆ ನಿರು ಹರಿಸುತ್ತಾರೆ
ಅಷ್ಟು ಸಾಕು ಅಲ್ಲಿಯ ಜನ, ಸರ್ಕಾರ ಮತ್ತು ಇಲ್ಲಯ ಜನ ಮತ್ತು ಸರ್ಕರದ ಉತ್ತಮ ಭಾಂದವ್ಯವನ್ನು
ತೋರಿಸುತ್ತದೆ
ಹಾಗಾದ್ರೆ ಸಮಸ್ಯೆ ಇರೋದು ಎಲ್ಲಿ
ಮಹಾರಾಷ್ಟ್ರ ದಲ್ಲಿರೋ ಎಲ್ಲ ಜನರು
ಬೆಳಗಾವಿಗಾಗಿ ಎಂದು ತಕರಾರು ಮಾಡಿಲ್ಲ ಆದ್ರೆ ಕೆಲ ಅಲ್ಲಿಯ ಪುಡಾರಿಗಳು ತಮ್ಮ ರಾಜಕೀಯ ಬೇಳೆ
ಬೇಯುಸದಕ್ಕಾಗಿ ಈ ತರನಾದ ಹಾದಿಯನ್ನ್ನು ಹಿಡಿದಿದ್ದಾರೆ ಎಮ್ ಇ ಎಸ ಮತ್ತು ಶಿವಸೇನೆ ಈ
ವಿಷಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ೧೯೫೬ ಸಂವಿಧಾನಿಕ ವಾಗಿ ರಾಜ್ಯ ಪುನರ್ವಿಂಗಡನೆಯಾದಾಗ ಈ
ಎಲ್ಲ ರಾಜ್ಯಗಳು ಹುಟ್ಟಿದವು ಮತ್ತು ಅದು ವೈಜ್ನಾಕವಾಗಿತ್ತು. ಹಾಗೆ ಈಗಾಗಲೇ ಸರ್ವೋಚ್ಚ
ನ್ಯಾಯಾಲಯ ಈ ವಿಷಯವಾಗಿ ಮಹಾರಾಷ್ಟ್ರದ ಪುಡಾರಿಗಳಿಗೆ ಚೀಮಾರಿ ಹಾಕಿ ಬೆಳಗಾವಿ ಕರ್ನಾಟಕ್ಕೆ
ಸೇರಿದ್ದು ಅಂತ ಸಾರಿ ಸಾರಿ ಹೇಳಿದರು. ನಾಚಿಕೆಯಿಲ್ಲದ ಮಹಾರಾಷ್ಟ್ರ ಪುಡಾರಿಗಳು ಇನ್ನು ತಮ್ಮ
ಮಂಪರಿನಲ್ಲೇ ಇದ್ದಾರೆ
ಕರ್ನಾಟಕದ ಪಾತ್ರ ಏನು
ಕರ್ನಾಟಕ ಸರ್ಕಾರ
ಮನಸ್ಸು ಮಾಡಿದರೆ ಕಾನುನುತ್ಮಕವಾಗಿ ಈ ಪುದರಿಗಳನ್ನು ಬೇರು ಸಮೇತ ವಾಗಿಯೇ ನಿರ್ನಾಮ ಮಾಡಬಹುದು
ಆದರೆ ತೋರುತ್ತಿರುವ ಮೃಧು ಧೋರಣೆ ನೋಡಿದರೆ. ನಮ್ಮ ರಾಜಕೀಯ ನಾಯಕರು ಈ ವಿಷಯವನ್ನು ಬಳಸಿಕೊಂಡು
ತಾವು ಕೂಡ ಅವರೊಂದಿಗೆ ಒಳ ಸೇರಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಅನ್ನೋ ಅನುಮಾನ
ಮೂಡದೆ ಇರದು ಅಲ್ವ? ಅಲ್ಲದೆ ಬೆಳಗಾವಿಯ ರಾಜಕೀಯ ನಾಯಕರು ರಾಜ್ಯ ಮತ್ತು ರಾಷ್ಟ್ರದ ರಾಜಕಾರಣದಲ್ಲೂ
ಹಿಡಿತ ಹೊಂದಿದವರಿದ್ದರೆ, ಹಿರಿಯರಿದ್ದಾರೆ ಆದೆರೆ ಅವರ ನನಿರುತ್ಸಾಹ ಸಹ ಮರಾಠಿಗರ ಮುನ್ನಡೆಗೆ
ಕಾರಣವಾಗಿದೆ ಅನ್ನಬಹುದು
ಅಷ್ಟೇ ಯಾಕೆ ಯಾವ
ಶಿವಸೇನೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಕ್ಯಾತೆ ತೆಗೆಯುತ್ತಿದೆಯೋ ಅಂಥಹ ಶಿವಸೇನೆಗೆ
ನಮ್ಮ ರಾಜ್ಯದ ಅದೆಷ್ಟೋ ಕನ್ನಡಿಗರು ಅದರ ಸದಸ್ಯರಾಗಿದ್ದಾರೆ ಅನ್ನೋದೇ ದುರಾದೃಷ್ಟ