ಮಹಾರುದ್ರಯಜ್ಞ ಡಿ.17ರಿಂದ

ಮಹಾರುದ್ರಯಜ್ಞ ಡಿ.17ರಿಂದ

ಬಾಗಲಕೋಟೆ: ಜಿಲ್ಲೆಯ ಮುಧೋಳ ನಗರದ ರನ್ನ ಕ್ರೀಡಾಂಗಣದಲ್ಲಿ ಡಿ. 17, 18, 19 ರಂದು 4ನೇ ಬೃಹತ್ ಮಹಾರುದ್ರಯಜ್ಞ ಹಾಗೂ ವಿಶ್ವಶಾಂತಿಗಾಗಿ ಸರ್ವಧರ್ಮ ಸಮ್ಮೇಳನ ಮತ್ತು 551 ಮಂಟಪ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗೋಕಾಕ ತಾಲ್ಲೂಕಿನ ಹಳ್ಳೂರನ ಡಾ. ಅಲ್ಲಮಪ್ರಭು ಸ್ವಾಮೀಜಿ ತಿಳಿಸಿದರು.

ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಹಾರುದ್ರಯಜ್ಞ ಹಾಗೂ ಸರ್ವಧರ್ಮ ಸಮ್ಮೇಳನಕ್ಕೆ ಉತ್ತರ ಭಾರತದ ಹರಿದ್ವಾರ, ಹೃಷಿಕೇಶ, ಜಮ್ಮು, ಹಿಮಾಲಯ, ಉತ್ತರಪ್ರದೇಶ, ಮಧ್ಯಪ್ರದೇಶ, ಹರಿಯಾಣ, ಪಂಜಾಬ, ಮಹಾರಾಷ್ಟ್ರ ಸೇರಿದಂತೆ ವಿವಿಧ ಪುಣ್ಯಕ್ಷೇತ್ರಗಳಿಂದ ಸಾಧು ಸಂತರು, ಶರಣರು, 551 ನಾಗಾ ಸಾಧುಗಳು, ಅಘೋರಿಗಳು,  ತಪಸ್ವಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಯುವಕರು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಅವರನ್ನು ಆ ಚಟಗಳಿಂದ ಮುಕ್ತಿಗೊಳಿಸುವುದು ಹಾಗೂ ವಿಶ್ವಶಾಂತಿಗಾಗಿ ಸಮ್ಮೇಳನ ಆಯೋಜಿಸಲಾಗಿದೆ.  ಸಮ್ಮೇಳನದಲ್ಲಿ 551 ನಾಗಾಸಾಧುಗಳ ಮಂಟಪ ಪಾದಪೂಜೆ, 12 ಜ್ಯೋತೀರ್ಲಿಂಗಗಳ ದರ್ಶನ, ಕುಂಭಮೇಳ ಹಾಗೂ ಗಂಗಾರತಿ, ಸಾವಯವ ಕೃಷಿಮೇಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿದೆ ಎಂದರು.

551 ನಾಗಾಸಾಧುಗಳು ರಾಜ್ಯಕ್ಕೆ ಬರುತ್ತಿರುವುದು ಪ್ರಥಮ ಸಲ. ಅವರು ನಮ್ಮ ದೇಶದ ಪರಂಪರೆಗೆ ಸಾಕ್ಷಿಯಾಗಿರುವ ಶ್ರೇಷ್ಠ ಯೋಗಿಗಳು. ಅಂತವರು ನಮ್ಮ ಜಿಲ್ಲೆಗೆ ಕರೆದುಕೊಂಡು ಬಂದು ಅವರಿಂದ ಈ ಭಾಗದ ಜನರಿಗೆ ಒಳ್ಳೇಯದಾಗಲಿ ಎಂಬ ಸಂಕಲ್ಪದಿಂದ ಈ ಯಜ್ಞವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯ ಹಾಗೂ ರಾಷ್ಟ್ರದ ವಿವಿಧ ಇಲಾಖೆಗಳ ಸಚಿವರು, ಸಂಸದರು, ಶಾಸಕರು, ಅಧಿಕಾರಿಗಳು ಸಮ್ಮೇಳನಕ್ಕೆ ಆಗಮಿಸುತ್ತಿರುವುದು ಮತ್ತೊಂದು ವಿಶೇಷ ಎಂದು ಹೇಳಿದರು.ಗೋಷ್ಠಿಯಲ್ಲಿ ಚಂದ್ರಶೇಖರ ಹಿರೇಮಠ ಹಾಜರಿದ್ದರು.

ನವೀನ ಹಳೆಯದು