ಪ್ರತಿ ಕ್ವಿಂಟಲ್ ಕಬ್ಬಿನ ಬೆಂಬಲ ಬೆಲೆ ರೂ320 ನಿರ್ಧರಿಸಲಾಗಿದೆ
ಚಂಡೀಗಢ, ಡಿಸೆಂಬರ್ 13: ಹರಿಯಾಣ ಸರಕಾರ ರೈತರ ಕಬ್ಬಿಗೆ ದೇಶದಲ್ಲಿಯೇ ಅತ್ಯಂತ ದುಬಾರಿ ಧಾರಣೆ ಘೋಷಣೆ ಮಾಡಿದ್ದಾರೆ. ಹರಿಯಾಣ ಮುಖ್ಯಮಂತ್ರಿ ಶ್ರೀ ಮನೋಹರ ಲಾಲ ರವರ ಹೇಳಿಕೆಯಂತೆ ರೈತರಿಗೆ 2016-17 ನೇಯ ಸಾಲಿನ ಕಡಿಮೆ ಅವಧಿ ತಳಿಯ ಕಬ್ಬಿನ ಬೆಳೆಯನ್ನು ಪ್ರತಿ ಕ್ವಿಂಟಲ ಗೆರೂ 320 ನಿರ್ಧರಿಸಲಾಗಿದೆ. ಮಧ್ಯಮ ಅವಧಿ ತಳಿಯ ಕಬ್ಬಿಗೆ ಪ್ರತಿ ಕ್ವಿಂಟಲ ಗೆ ರೂ 315 ಮತ್ತು ದೀರ್ಘಾವಧಿ ತಳಿಯ ಕಬ್ಬಿಗೆ ಪ್ರತಿ ಕ್ವಿಂಟಲ ಗೆ ರೂ310 ಧಾರಣೆ ದೊರೆಯಲಿದೆ .
ಈ ಮೊದಲು ಕಡಿಮೆ ಅವಧಿ ತಳಿಯ ಕಬ್ಬಿನ ಬೆಲೆಯನ್ನು ಪ್ರತಿ ಕ್ವಿಂಟಲ ಗೆ ರೂ 310,. ಮಧ್ಯಮ ಅವಧಿ ತಳಿಯ ಕಬ್ಬಿಗೆ ಪ್ರತಿ ಕ್ವಿಂಟಲ ಗೆ ರೂ 305ಮತ್ತು ದೀರ್ಘಾವಧಿ ತಳಿಯ ಕಬ್ಬಿಗೆ ಪ್ರತಿ ಕ್ವಿಂಟಲ ಗೆ ರೂ 300 ಧಾರಣೆಯನ್ನು ನೀಡಲಾಗಿತ್ತು. ಈ ಧಾರಣೆಯ ಹೆಚ್ಚಳದಿಂದ 2016-17 ನೇಯಸಾಲಿನಲ್ಲಿ ಕಬ್ಬು ಬೆಳೆಗಾರರಿಗೆ ಸುಮಾರು 60 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಲಾಭವಾಗಲಿದೆ.
ಹರಿಯಾಣ ರಾಜ್ಯದ ಪಕ್ಕದ ರಾಜ್ಯಗಳಾದ ಪಂಜಾಬ ಮತ್ತು ಉತ್ತರ ಪ್ರದೇಶಗಳಲ್ಲಿ ಕಬ್ಬು ಬೆಳೆಗಾರರಿಗೆ ಕಬ್ಬಿನ ಧಾರಣೆಯನ್ನು ಕಡಿಮೆ ಅವಧಿ ತಳಿಗೆ ಪ್ರತಿಕ್ವಿಂಟಲ ಗೆ ರೂ 315. ಮಧ್ಯಮ ಅವಧಿ ತಳಿಯ ಕಬ್ಬಿಗೆ ಪ್ರತಿ ಕ್ವಿಂಟಲ ಗೆ ರೂ 310 ಮತ್ತು ದೀರ್ಘಾವಧಿ ತಳಿಯ ಕಬ್ಬಿಗೆ ಪ್ರತಿ ಕ್ವಿಂಟಲ ಗೆ ರೂ 305ಧಾರಣೆಯನ್ನು ನೀಡಲಾಗುತ್ತಿದೆ. ಕೇಂದ್ರ ಸರಕಾರ ಸಕ್ಕರೆ ಖಾರ್ಕಾನೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಲ ಗೆ ರೂ 230 ನಿರ್ಧರಿಸಿದೆ.
ಈಗ ಸಿ ಓ - 238 ಕಬ್ಬಿನ ತಳಿಯನ್ನು ಶಾಶ್ವತವಾಗಿ ಕಡಿಮೆ ಅವಧಿ ತಳಿಗಳಲ್ಲಿ ಸೇರಿಸಲಾಗಿದೆ:
ಹರಿಯಾಣ ಸರಕಾರ ಸಿ ಓ - 238 ಕಬ್ಬಿನ ತಳಿಯಲ್ಲಿನ ಸಕ್ಕರೆ ಅಂಶ ಮತ್ತು ಗುಣ ಮಟ್ಟವನ್ನು ನೋಡಿಕೊಂಡು ಈ ತಳಿಯನ್ನು ಶಾಶ್ವತವಾಗಿ ಕಡಿಮೆಅವಧಿಯ ತಳಿಗಳಲ್ಲಿ ಸೇರಿಸಲಾಗಿದೆ ಎಂದು ಘೋಷಣೆ ಮಾಡಿದೆ. ಕೈತಲ್ ಸಹಕಾರಿ ಸಕ್ಕರೆ ಖಾರ್ಕಾನೆ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಕ್ತಿ ಸಿಂಗರವರು ಈ ವಿಷಯವನ್ನು ತಿಳಿಸುತ್ತಾ ಕಳೆದ ಸಾಲಿನಲ್ಲಿ ಈ ತಳಿಯನ್ನು ಒಂದು ವರ್ಷದ ಮಟ್ಟಿಗೆ ಮಾತ್ರ ಕಡಿಮೆ ಅವಧಿಯ ತಳಿಗಳಲ್ಲಿ ಸೇರಿಸಲಾಗಿತ್ತುಎಂದು ತಿಳಿಸಿದ್ದಾರೆ.