ಸ್ವೀಡನ್ ಎಂಬ ನಗದು ರಹಿತ ದೇಶ ಮತ್ತು ಭಾರತ…

ಸ್ವೀಡನ್ ಎಂಬ ನಗದು ರಹಿತ ದೇಶ ಮತ್ತು ಭಾರತ…

ನೋಟ್ ಬ್ಯಾನ್ ಕಾರಣ ದೇಶದ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಹೊತ್ತಲ್ಲಿ ನಗದು ರಹಿತ ವ್ಯವಹಾರದ ಅಗತ್ಯತೆ ಹೆಚ್ಚಿದೆ. ಆದ್ರೆ, ಕ್ಯಾಶ್ ಲೆಸ್ ಲೈಫ್ ನ  ಅಭ್ಯಾಸ ಹಾಗೂ ಅನುಭವ ಭಾರತೀಯರಿಗೆ ತೀರಾ ಕಡಿಮೆ. ಜಗತ್ತಿನ ಕೆಲವೇ ರಾಷ್ಟ್ರಗಳು ಮಾತ್ರ ಕ್ಯಾಶ್ ಲೆಸ್ ಲೈಫ್ ಗೆ ಒಗ್ಗಿಕೊಂಡಿವೆ. ಅದರಲ್ಲಿ ನೆಮ್ಮದಿಯ ತಾಣ ಸ್ವೀಡನ್ ದೇಶ ಮುಂಚೂಣಿಯಲ್ಲಿದೆ.

– ಸ್ವೀಡನ್ ದೇಶದಲ್ಲಿ ಚರ್ಚ್ಗೆ ಬರುವ ಕಾಣಿಕೆಗಳು ಸಹ ಆನ್ ಲೈನ್ನಲ್ಲೇ ಬರುತ್ತವೆ. ಅಲ್ಲಿನ ಒಟ್ಟು ವ್ಯವಹಾರದಲ್ಲಿ ಶೇಕಡಾ 2ರಷ್ಟು ನಗದು ಮಾತ್ರ ಇರುತ್ತೆ. ಉಳಿದಿದ್ದೆಲ್ಲ ಕ್ಯಾಶ್ ಲೆಸ್. ಅಂದರೆ, ಡೆಬಿಟ್, ಕ್ರೆಡಿಟ್ ಕಾರ್ಡ್ಗಳ ಮೂಲಕ ವ್ಯವಹಾರ ನಡೆಯುತ್ತದೆ.

– ಸ್ವೀಡನ್ ದೇಶದಲ್ಲಿ ಎಟಿಎಂಗಳು ಸಹ ಕಡಿಮೆ. ಯಾಕಂದ್ರೆ, ಅಲ್ಲಿನ ಪ್ರಜೆಗಳಿಗೆ ನಗದು ಡ್ರಾ ಮಾಡುವ ಅಗತ್ಯತೆಯೇ ಹೆಚ್ಚಾಗಿ ಕಂಡುಬರುವುದಿಲ್ಲ. ಎಲ್ಲಿ ಹೋದ್ರೂ ಕ್ಯಾಶ್ಲೆಸ್ ವ್ಯವಹಾರ.

– 2020ರ ವೇಳೆಗೆ, ಶೇಕಡಾ ಎರಡರಷ್ಟಿರುವ ನಗದು ವ್ಯವಹಾರವನ್ನು ಶೇಕಡಾ ಸೊನ್ನೆ ಪಾಯಿಂಟ್ 25ಕ್ಕೆ ಇಳಿಸಿ, ಶೇಕಡಾ 99.75ಕ್ಕೆ ಆನ್ ಲೈನ್ ವ್ಯವಹಾರ ಹೆಚ್ಚಿಸಬೇಕೆನ್ನುವ ಉದ್ದೇಶದಿಂದ ಅಲ್ಲಿನ ಸರ್ಕಾರ ಕೆಲಸ ಮಾಡುತ್ತಿದೆ.

– ಸ್ವೀಡನ್ ದೇಶದಲ್ಲಿ ಎಲ್ಲಾ ಬ್ಯಾಂಕ್ ಗಳನ್ನು ಸೇರಿಸಿಕೊಂಡು ಒಂದು ಆ್ಯಪ್ ರೂಪಿಸಿಲಾಗಿದೆ. ಅದರ ಹೆಸರು ಸ್ವಿಸ್. ಇದರ ಮೂಲಕ ಕ್ಷಣಾರ್ಧಧಲ್ಲಿ ಹಣಕಾಸು ವ್ಯವಹಾರನ್ನು ಮಾಡಿಕೊಳ್ಳಬಹುದು.

– ಆದರೆ, ಆನ್ಲೈನ್ ವ್ಯವಸ್ಥೆ ತುಂಬಾ ಬಲವಾಗಿದ್ದರೂ, ನಮ್ಮ ಆರ್ಥಿಕತೆಗಿಂತ ಅಲ್ಲಿನ ಆರ್ಥಿಕತೆ ಬಲಿಷ್ಟವಾಗೇನಿಲ್ಲ.

– ಅಷ್ಟೇ ಅಲ್ಲ, ಒಂದು ಕಾಲದಲ್ಲಿ ಸ್ವೀಡನ್ ಅಂದ್ರೆ ಕಳ್ಳರ ಕಾರಸ್ಥಾನ. ಮನೆ- ಬ್ಯಾಂಕ್ ಗಳಲ್ಲಿ ಹಣ ದೋಚುವುದು ಸಾಮಾನ್ಯವಾಗಿತ್ತು. ಆದ್ರೆ, ಇದೀಗ ಅಲ್ಲಿ ಕಳ್ಳತನವೇ ನಡೆಯಲ್ಲ. ಯಾಕಂದ್ರೆ, ಅದು ಕ್ಯಾಶ್ ಲೆಸ್ ಕಂಟ್ರಿ ಅಲ್ವಾ..?

ನವೀನ ಹಳೆಯದು