ಜಿ ಡಿ ಪಿ ಬಗ್ಗೆ ನಿಮಗೆಷ್ಟು ಗೊತ್ತು?

ಮೊನ್ನೆಯಷ್ಟೇ, ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಬೆಲೆ ಒಂದೇ ದಿನದಲ್ಲಿ ಶೇ.4.7ರಿಂದ ಶೇ.6.9ಕ್ಕೆ ನೆಗೆಯಿತು. ಇದು ಹೇಗೆ? ಎಂಬ ಪ್ರಶ್ನೆ ಮೂಡುವುದು ಸಹಜ. ಕಾರಣ ಜಿಡಿಪಿ ಲೆಕ್ಕಾಚಾರದಲ್ಲಿ ಮೂಲವರ್ಷವನ್ನು ಬದಲಿಸಿದ್ದು. ಹೊಸ ಕ್ರಮದಿಂದಾಗಿ ಜಿಡಿಪಿಯಲ್ಲಿ ದರದಲ್ಲಿ ಏರಿಕೆ. ಹಾಗಿದ್ದರೆ, ಇದರಿಂದೇನಾದರೂ ಬದಲಾವಣೆಯಾಗುತ್ತದೆಯೇ? ಪರಿಣಾಮವೇನು? ಜಿಡಿಪಿ ಲೆಕ್ಕಾಚಾರ ಹೇಗೆ? ಇತ್ಯಾದಿಗಳ ಕುರಿತ ಮಾಹಿತಿ ಇಲ್ಲಿದೆ.





ಏನಿದು ಜಿಡಿಪಿ?
ದೇಶದ ಒಟ್ಟು ಆಂತರಿಕ ಉತ್ಪನ್ನವನ್ನು ಆಂಗ್ಲ ಭಾಷೆಯಲ್ಲಿ GDP ಎನ್ನುತ್ತಾರೆ. ಇದು ದೇಶದ ಅರ್ಥ ವ್ಯವಸ್ಥೆಯ ಆರೋಗ್ಯದ ಬಗ್ಗೆ ಹೇಳುತ್ತದೆ. ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶದಲ್ಲಿ ಉತ್ಪಾದನೆಯಾದ ಉತ್ಪನ್ನಗಳ ಮತ್ತು ಸೇವೆಗಳ ಒಟ್ಟು ಬೆಲೆಯನ್ನು ಇದು ಹೇಳುತ್ತದೆ. ಅಂದರೆ ಒಂದು ದೇಶದ ಅರ್ಥವ್ಯವಸ್ಥೆಯ ಗಾತ್ರವನ್ನು ಇದು ಪ್ರತಿನಿಧಿಸುತ್ತದೆ. ಭಾರತದಲ್ಲಿ ಇದುವರೆಗೆ ಉತ್ಪನ್ನವೊಂದರ ತಯಾರಿಕೆಗೆ ಉತ್ಪಾದಕರು ವೆಚ್ಚಮಾಡಿದ್ದನ್ನು ಗಣನೆಗೆ ತೆಗೆದುಕೊಂಡು ಜಿಡಿಪಿಯನ್ನು ಅಳೆಯುವ ಪರಿಪಾಠವಿತ್ತು. ಅಲ್ಲದೇ ಮೂಲ ವರ್ಷವನ್ನು 2004-05 ಎಂದು ಪರಿಗಣಿಸಲಾಗುತ್ತಿದ್ದು, ವರ್ಷ ದೇಶದಲ್ಲಿ ಉತ್ಪಾದನೆಯಾದ ಉತ್ಪನ್ನಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು.
ಜಿಡಿಪಿ ಲೆಕ್ಕಾಚಾರ: ಈಗಿನ ಬದಲಾವಣೆ ಏನು?
ಜಿಡಿಪಿಯ ಮೂಲ ವರ್ಷ ಯಾವುದಿರಬೇಕು ಎಂದು ನಿರ್ಧರಿಸುವುದು ಯೋಜನೆ ಅನುಷ್ಠಾನ ಮತ್ತು ಸಾಂಖೀÂ ಸಚಿವಾಲಯ. ಪ್ರತಿ ಐದು ವರ್ಷಗಳಿಗೊಮ್ಮೆ ಸಾಮಾನ್ಯವಾಗಿ ಮೂಲ ವರ್ಷವನ್ನು ಬದಲಾಯಿಸಲಾಗುತ್ತದೆ. ಅದರಂತೆ 2004-05ರಿಂದ 2011-12ನ್ನು ಮೂಲವರ್ಷವಾಗಿ ಪರಿಗಣಿಸಲಾಗಿದೆ. ಅಲ್ಲದೇ ಹಿಂದಿನ ಉತ್ಪನ್ನದ ಮೂಲ ಬೆಲೆಯನ್ನು ಪರಿಗಣಿಸದೇ ಗ್ರಾಹಕರಿಗೆ ಮಾರಾಟವಾಗುವ ವೇಳೆ ಸಬ್ಸಿಡಿ, ತೆರಿಗೆಗಳನ್ನು ಹೊರತು ಪಡಿಸಿದ ಉತ್ಪನ್ನದ ಮೂಲ ಬೆಲೆಯನ್ನು ಪರಿಗಣಿಸುವಂತೆ ಜಿಡಿಪಿ ಅಳತೆ ಕ್ರಮವನ್ನು ಬದಲಾಯಿಸಲಾಗಿದೆ.
ಮೂಲ ವರ್ಷ ಬದಲಾವಣೆ ಎಂದರೆ ಏನು?
ಇದುವರೆಗೆ ಜಿಡಿಪಿ ಅಳೆವಾಗ 2004-05ನ್ನು ಮೂಲವರ್ಷವನ್ನು ಪರಿಗಣಿಸಲಾಗಿತ್ತು. ಅಂದರೆ ವರ್ಷದಲ್ಲಿ ದೇಶದಲ್ಲಿ ಏನೆಲ್ಲ ಉತ್ಪನ್ನಗಳು ಉತ್ಪಾದನೆಯಾಗುತ್ತಿದ್ದವೋ, ಅಷ್ಟನ್ನು ಮಾತ್ರ ಪರಿಗಣಿಸಿ, ಬಳಿಕ ವರ್ಷ ವರ್ಷ ಜಿಡಿಪಿ ಅಳೆಯುವುದು. ವರ್ಷದಲ್ಲಿ 2500 ಕಂಪನಿಗಳ ಉತ್ಪನ್ನಗಳನ್ನು ಮಾತ್ರ ಪರಿಗಣಿಸಲಾಗಿತ್ತು. ಹೊಸ ವಿಧಾನದಲ್ಲಿ ಇದನ್ನು 5 ಲಕ್ಷ ಕಂಪನಿಯ ಉತ್ಪನ್ನಗಳನ್ನು ಪರಿಗಣೀಸಲಾಗಿದೆ. ಅಂದರೆ ಇದೀಗ ಜಿಡಿಪಿ ಲೆಕ್ಕಾಚಾರದಲ್ಲಿ ದೇಶದಲ್ಲಿ ಉತ್ಪಾದನೆಯಾಗುವ ಸ್ಮಾರ್ಟ್ಫೋನ್‌, ಎಲ್ಸಿಡಿ, ಮರುಬಳಕೆ ಕ್ಷೇತ್ರ ಮುಂತಾದುವುಗಳನ್ನೂ ಜಿಡಿಪಿಗೆ ಪರಿಗಣಿಸಲಾಗುತ್ತಿದೆ. 2004-05 ಸಾಲಿನಲ್ಲಿ ಉತ್ಪನ್ನಗಳನ್ನು ಪರಿಗಣಿಸಲಾಗುತ್ತಿರಲಿಲ್ಲ.
ಜಿಡಿಪಿ ಲೆಕ್ಕಾಚಾರ ಯಾಕೆ ಮುಖ್ಯ?
ಜಾಗತಿಕ ರೀತಿಗನುಗುಣವಾಗಿ ಅನುಗುಣವಾಗಿ ಜಿಡಿಪಿ ಲೆಕ್ಕಾಚಾರ ಬದಲಾಗುತ್ತಿರಬೇಕು. ಉದಾಹರಣೆಗೆ: ವಿಶ್ವ ಬ್ಯಾಂಕ್ ಹೇಳುವಂತೆ ಭಾರತ-ಮತ್ತು ಚೀನಾದ ಲೆಕ್ಕಾಚಾರಗಳು ಹಿಂದೆ ಇರಲಿಲ್ಲ. ಅಂದರೆ ದೇಶದಲ್ಲಿ ಉತ್ಪಾದನೆಯಾದ ಉತ್ಪನ್ನದ ಮೂಲ ಬೆಲೆಯನ್ನು ಪರಿಗಣಿಸಲಾಗುತ್ತಿರಲಿಲ್ಲ. ಇದರಿಂದ ಪ್ರತಿ ದೇಶದಿಂದ ದೇಶಕ್ಕೆ ವ್ಯಾಪಕ ವ್ಯತ್ಯಾಸಗಳಿದ್ದವು. ಸದ್ಯ ಭಾರತ ಮೂಲವರ್ಷವನ್ನು ಬದಲಾವಣೆ ಮಾಡಿದ್ದರಿಂದ ಸದ್ಯದ ದೇಶದ ಆರ್ಥಿಕ ಪರಿಸ್ಥಿತಿಯನ್ನು ನೋಡಲು ಕಾರಣವಾಗುತ್ತದೆ. ಪ್ರಮುಖವಾಗಿ ರಿಸರ್ವ್ಬ್ಯಾಂಕಿಗೆ ಇದರಿಂದ ವಿತ್ತೀಯ ನೀತಿಯನ್ನು ಕೈಗೊಳ್ಳಲು ಜಿಡಿಪಿ ಲೆಕ್ಕಾಚಾರ ಅಗತ್ಯವಾಗಿದೆ. ಇದರೊಂದಿಗೆ ಜಾಗತಿಕ ಮಟ್ಟದಲ್ಲಿ ಬಂಡವಾಳ ಹೂಡಿಕೆದಾರರೂ ಇದನ್ನು ಗಮನಿಸುತ್ತಿರುತ್ತಾರೆ. ಜಿಡಿಪಿ ಬೆಲೆಯಲ್ಲಾದ ಏರಿಕೆ ಸ್ಥೂಲವಾಗಿ ಆರ್ಥಿಕ ಬೆಳವಣಿಗೆಯನ್ನು ಪ್ರತಿನಿಧಿಸುವುದರಿಂದ ಹೂಡಿಕೆಗೆ ಮನಸ್ಸು ಮಾಡುತ್ತಾರೆ. ಜಿಡಿಪಿಯನ್ನು ನೋಡಿಕೊಂಡು ಸರ್ಕಾರ ಕೂಡ ವಿತ್ತೀಯ ಕೊರತೆ ತುಂಬಲು ವಿವಿಧ ಕ್ಷೇತ್ರಗಳಿಗೆ ಪೂರಕವಾದ ವಾತಾವರಣ ಕಲ್ಪಿಸುವ ಸಾಧ್ಯತೆ ಇರುತ್ತದೆ.
ಜಿಡಿಪಿ ಲೆಕ್ಕಾಚಾರ ಕ್ರಮ ಬದಲಾದ ಕೂಡಲೇ ಆರ್ಥಿಕತೆ ಬದಲಾಗುತ್ತಾ..?

ಇಲ್ಲ. ಭಾರತದ ಒಟ್ಟು ಆರ್ಥಿಕತೆ 108 ಲಕ್ಷ ಕೋಟಿ ಆಗಿದೆ. ಜಿಡಿಪಿ ಅಳೆವ ಕ್ರಮ ಬದಲಾದ ಮಾತ್ರಕ್ಕೆ ವಿತ್ತೀಯ ಕೊರತೆ, ಚಾಲ್ತಿ ಖಾತೆ ಕೊರತೆಗಳಲ್ಲೇನೂ ಬದಲಾವಣೆಯಾಗುವುದಿಲ್ಲ. ಅಲ್ಲದೇ ದೇಶದ ಒಟ್ಟು ಆರ್ಥಿಕ ಗಾತ್ರದಲ್ಲೂ ಅದು ಬದಲಾವಣೆಗೆ ಕಾರಣವಾಗುವುದಿಲ್ಲ.
ನವೀನ ಹಳೆಯದು