ಲಕ್ಷಾನಟ್ಟಿ ಆದರ್ಶ ಶಾಲೆ ಕಟ್ಟಡದಲ್ಲಿ ಪೂಜೆ

ಲೋಕಾಪುರ:ಲಕ್ಷಾನಟ್ಟಿ ಗ್ರಾಮದಲ್ಲಿ ನಿರ್ಮಿಸಿರುವ ಆದರ್ಶ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಾಲಕರು, ವಿದ್ಯಾರ್ಥಿಗಳು ಶಾಲೆಯನ್ನು ಅಲಂಕರಿಸಿ, ಸತ್ಯನಾರಾಯಣ ಪೂಜೆ ನೆರವೇರಿಸಿ, ಹೋಮ ಹವನ ಮಾಡಿ ಸಂಭ್ರಮಿಸಿದರು.
ಸಾರ್ವಜನಿಕ ಶಿಕ್ಷ ಣ ಇಲಾಖೆ ಉಪನಿರ್ದೇಶಕರು ಜೂ.23 ರಂದು ಲಕ್ಷಾನಟ್ಟಿ ಗ್ರಾಮದಲ್ಲಿ ನಿರ್ಮಿಸಿರುವ ಆದರ್ಶ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡದಲ್ಲಿ ತರಗತಿಗಳು ಪ್ರಾರಂಭವಾಗಲಿವೆ ಎಂದು ಆದೇಶ ಹೊರಡಿಸಿರುವುದು ಗ್ರಾಮಸ್ಥರ ಖುಷಿಗೆ ಕಾರಣವಾಗಿತ್ತು.
ಎಸ್‌ಡಿಎಂಸಿ ಸದಸ್ಯೆ ಗೀತಾ ಜಂಬಗಿ ಮಾತನಾಡಿ ಜೂ.23 ರಂದು ಸಾರ್ವಜನಿಕ ಶಿಕ್ಷ ಣ ಇಲಾಖೆಯವರು ನೂತನ ಕಟ್ಟಡದಲ್ಲಿ ತರಗತಿಗಳನ್ನು ಪ್ರಾರಂಭಿಸಲಾಗುವುದೆಂದು ತಿಳಿಸಿದ್ದರಿಂದ ಪೂಜೆ ನೇರವೇರಿಸಲಾಗಿದೆ. ಇನ್ನು ಮಕ್ಕಳನ್ನು ನೂತನ ಶಾಲೆಗೆ ಕಳುಹಿಸುತ್ತೇವೆಂದು ತಿಳಿಸಿದರು.
ಸದ್ಯ ಮುಧೋಳದಲ್ಲಿ ನಡೆಯುತ್ತಿದ್ದ ಆದರ್ಶ ಶಾಲೆಯನ್ನು ಸ್ಥಾಳಂತರಿಸುವ ವಿಷಯದಲ್ಲಿ ಗೊಂದಲವುಂಟಾಗಿ ಲೋಕಾಪುರದಲ್ಲಿ ಶಾಲೆ ಪ್ರಾರಂಭಿಸಬೇಕೆಂದು ಪ್ರತಿಭಟನೆ ನಡೆಸಿದರೆ, ಮುಧೋಳದಲ್ಲಿ ಇಲ್ಲಿಯೇ ಶಾಲೆ ಇರಬೇಕು ಸ್ಥಳಾಂತರ ಮಾಡಬಾರದೆಂದು ಪಾಲಕರು ಪ್ರತಿಭಟನೆ ನಡೆಸಿದ್ದರು. ಆದರೆ ಕಟ್ಟಡಪೂರ್ಣಗೊಂಡಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆಂದು ಲೋಕಾಪುರ ಸುತ್ತಲಿನ ನಾಗರಿಕರು ಖುಷಿ ಹಂಚಿಕೊಂಡು, ಪೂಜೆಯಲ್ಲಿ ಭಾಗವಹಿಸಿದ್ದರು.
ಜಿಪಂ ಸದಸ್ಯ ಮಹಾಂತೇಶ ಉದಪುಡಿ, ಗ್ರಾಪಂ ಸದಸ್ಯ ಲೋಕಣ್ಣ ಕತ್ತಿ, ಭೀಮಶೆಪ್ಪ ಹಲಕಿ, ಯಮನಪ್ಪ ಹೊರಟ್ಟಿ, ಪಿಡಿಒ ಆರ್‌.ಕೆ.ಮಹೇಂದ್ರಕರ, ''ಠ್ಠಲ ಗಿರಿಸಾಗರ, ಆರ್‌.ಪಿ.ಕುಲಕರ್ಣಿ, ಸುರೇಶ ಜಂಬಗಿ, ಸಾಗರ ಮುದ್ನೂರ, ನಾರಾಯಣ ಜೋಶಿ, ಶ್ರೀಶೈಲ ಪಲ್ಲೇದ, ನಮಿತಾ ಕುಲಕರ್ಣಿ, ಸುರೇಶ ಮಾಳಿ, ನಾಗನಗೌಡ ಪಾಟೀಲ, ನಿಂಗಣ್ಣ ಜಂಬಗಿ, ಮಲ್ಲಪ್ಪ ದೊಡಮನಿ ಪಾಲಕರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನವೀನ ಹಳೆಯದು