ಸುಡುಬಿಸಲಲ್ಲೆ ಬಸ್ ಗಾಗಿ ಕಾಯುವ ಪ್ರಯಾಣಿಕರು

 ಮುಧೋಳ, - ಸ್ಥಳಿಯ ಶಿವಾಜಿ ಸರ್ಕಲ್  ಗ್ರಾಮೀಣ ಬ್ಯಾಂಕ ಬಳಿಯ ಬಸ್ ನಿಲ್ದಾಣ ದಿಂದ ಬಾಗಲಕೋಟೆ ಬೆಳಗಾಂವ ಹುಬ್ಬಳಿ ಕಡೆ ಪ್ರಯಾಣಿಸುವ ಪ್ರಯಾಣಿಕರು ಸುಡು ಬಿಸಲಿನಲ್ಲೆ ಕಾಯುತ್ತ ನಿಲ್ಲುವ ಪರಿಸ್ಥಿತಿಯಿದ್ದು ಕೂಡಲೇ ಬಸ್ ಶೆಲ್ಟರ್ ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಎಲ್ಲಿ ನೆರಳಿದೆ ಅಂತ ಅರಸಿ ನಿಂತರೆ ತಮ್ಮ  ಊರು ಗಳಿಗೆ ತೆರಳುವ ಬಸ್ಗಳನ್ನು ತಪ್ಪಿಸಿಕೂಳ್ಳುತ್ತೇವೆಂದು ಅಲ್ಲಿಯೆ ತಮ್ಮ ತಮ್ಮ ತಲೆಯಮೇಲೆ ಇಟ್ಟುಕೂಳ್ಳಲು ತಮ್ಮಬಳಿಯ ಕೈವಸ್ತ್ತ್ರ ಹಾಗೂ ಛತ್ರಿಗಳ ಮೋರೆ ಹೋಗುತ್ತಾರೆ. ವಯೋವೃದ್ದರು ಮಹಿಳೆಯರು ಮಕ್ಕಳು ಸುಡು ಬಿಸಲಲ್ಲಿಯೋ ಬಸ್ ಗಾಗಿ ಕಾಯುತ್ತಿರುತ್ತಾರೆ.
ಮುಧೋಳ ಪಟ್ಟಣ ದಿನೆದಿಂದ ದಿನಕ್ಕೆ ಬೆಳೆಯುತ್ತಿದ್ದರೂ. ಸಿಗುವ ಕೆಲ ಸೌಲಭ್ಯಗಳು ಮರೀಚಿಕೆಯಾಗುತ್ತಿವೆ.ಸ್ಥಳಿಯ ನಗರ ಸಭೆ ಅಗತ್ಯ ಸೌಲಭ್ಯ ಒದಗಿಸುವತ್ತ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಪಟ್ಟಣದಲ್ಲಿ ಪ್ರತಿದಿನ ಸಂಚಾರ ದಟ್ಟಣೆ ಆಗುತ್ತಿರುವುದನ್ನು ಗಮನಿಸಿದ ಪೂಲೀಸ ಅಧಿಕಾರಿಗಳು ಸಂಚಾರ ನಿಯಮ ಪಾಲಿಸುವ ಉದ್ದೇಶದಿಂದ ಗ್ರಾಮಿಣ ಬ್ಯಾಂಕ   ಬಳಿ ಬಸ್ ನಿಲ್ದಾಣ ಮಾಡಿದ್ದಾರೆ. ಆದರೆ ದೂರದ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಬಸ್ ಸೆಲ್ಟರ್ ನಿರ್ಮಾಣ ಮಾಡಲು ಇನ್ನುವರೆಗೆ ಯಾರೂ ಮುಂದಾಗಿಲ್ಲ ಜನಪ್ರತಿನಿಧಿಗಳು.ಸಕ್ಕರೆ ಸಿಮೇಂಟ್ ಕಾರ್ಖಾನೆಯವರು ಸ್ಥಳಿಯ ಸಂಘ ಸಂಸ್ಥೆಗಳು ಈ ಬಸ್ ಶೆಲ್ಟರ್ ನಿರ್ಮಾಣ ಮಾಡಿದಲ್ಲಿ ಸಾರ್ವಜನಿಕರಿಗೆ ಬಹಳ ಅನುಕೂಲ ಮಾಡಿದಂತಾಗುತ್ತದೆ.
ನವೀನ ಹಳೆಯದು