ಮುಧೋಳ (ಬಾಗಲಕೋಟೆ) :ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಕಳ್ಳರನ್ನು ಬಂಧಿಸಿರುವ ಪೊಲೀಸರು ಬಂಧಿತರಿಂದ 7 ಲಕ್ಷ ಮೌಲ್ಯದ 240 ಗ್ರಾಂ. ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ
ನಗರದ ಇಂಗಳಗಿ ರಸ್ತೆಯ ರಾಯಲ್ ಕಾಲೋನಿ ನಿವಾಸಿ ಸುವರ್ಣ ಗೋಲಶೆಟ್ಟಿರವರ ಮನೆಯಲ್ಲಿ ಜ.12 ರಂದು ಮನೆ ಬೀಗ ಮುರಿದು 80 ಗ್ರಾಂ ಚಿನ್ನಾಭರಣ ಕಳ್ಳತನವಾಗಿತ್ತು. ಕಳ್ಳತನ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ಸವದತ್ತಿ ತಾಲೂಕು ಯಡಹಳ್ಳಿ ನಿವಾಸಿಗಳಾದ ಬಸಯ್ಯ ಮಠಪತಿ (19) ಹಾಗೂ ವೀರಯ್ಯ ಮಠಪತಿ (21) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 240 ಗ್ರಾಂ ಚಿನ್ನಾಭರಣಗಳನ್ನು ವಶಪಡೆದುಕೊಳ್ಳಲಾಗಿದೆ.
ಜಿಲ್ಲಾ ಎಸ್.ಪಿ. ರಿಷ್ಯಂತ್ ಮಾರ್ಗದರ್ಶನದಲ್ಲಿ, ಸಿಪಿಐ ಕರಿಯಪ್ಪ ಬನ್ನಿ ನೇತೃತ್ವದಲ್ಲಿ, ಎಸ್.ಐ. ಶ್ರೀಶೈಲ್ ಬ್ಯಾಕೂಡ, ಆರ್.ಬಿ. ಕಟಗೇರಿ, ಬಿ.ವೈ. ಕರಾಬಿ, ಎಸ್.ಬಿ. ಹನಗಂಡಿ, ಎಚ್.ಕೆ. ಇಂಡಿಕರ, ಎಂ.ಎನ್. ಮಾಂಗ ಸಾಳಗುಂದಿ, ಟಿ.ಎಸ್. ಹರಲಕ್ಕಿ ಒಳಗೊಂಡ ಕ್ರೈಂ ತಂಡ ಆರೋಪಿಗಳನ್ನು ಬಂಧಿಸಿದೆ ಎಂದು ಡಿ.ವೈ.ಎಸ್.ಪಿ ರಾಮನಗೌಡ ಹಟ್ಟಿ ತಿಳಿಸಿದ್ದಾರೆ.