ಮುಧೋಳ : ರಾಜಕೀಯ ದುರುದ್ದೇಶದಿಂದ ನಿರಾಣಿ ಕಾರ್ಖಾನೆ ವಿರುದ್ಧ ಆರೋಪ ; ಕಬ್ಬು ಬೆಳೆಗಾರರ ಸ್ಪಷ್ಟೀಕರಣ



ಮುಧೋಳ : ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಕಾರ್ಖಾನೆಯಿಂದ ಪರಿಸರಕ್ಕೆ ಹಾನಿಯಾಗುತ್ತಿ ಎಂದು ಜ.10 ರಂದು ನಗರದಲ್ಲಿ ನಡೆಸಿದ ಪ್ರತಿಭಟನೆ ರಾಜಕೀಯ ದುರುದ್ದೇಶದಿಂದ ಕೂಡಿದೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಕಬ್ಬು ಬೆಳೆಗಾರ ಪ್ರತಿನಿಧಿಗಳು ನಿರಾಣಿ ಕಾರ್ಖಾನೆಯ ರೈತ ಭವನದಲ್ಲಿ ನಡೆದ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಕೆಲವರು ಕಾರ್ಖಾನೆಗೆ ತೊಂದರೆ ಕೊಡುವ ಉದ್ದೇಶದಿಂದ ನಿರಂತರ ತಪ್ಪು ಮಾಹಿತಿ ಹರಡುತ್ತಿದ್ದಾರೆ. ಕಾರ್ಖಾನೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ರೂಪಿಸಿದ ಪರಿಸರಕ್ಕೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದಾರೆ. ಪರಿಸರ ಅಧಿಕಾರಿಗಳು ನಿಯಮಿತವಾಗಿ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇದು ಕಡ್ಡಾಯ ನಿಯಮ. ಅವರು ಭೇಟಿ ನೀಡಿ ಲಿಖಿತವಾಗಿ ತಿಳಿಸಿದ ಎಲ್ಲಾ ಸಲಹೆಗಳನ್ನು ಕಾರ್ಖಾನೆ ಪಾಲಿಸುತ್ತಿರು ವುದು ತಮಗೆ ಮನವರಿಕೆಯಾಗಿದೆ ಎಂದು ರೈತ ಪ್ರತಿನಿಧಿಗಳು ತಿಳಿಸಿದ್ದಾರೆ.
ಪರಿಸರ ಇಲಾಖೆ ರೂಪಿಸಿದ ಎಲ್ಲಾ ಪರವಾನಿಗೆ ಪತ್ರಗಳನ್ನು ಕಾರ್ಖಾನೆ ಪಡೆದುಕೊಂಡಿದೆ. ಬೇಕಾದವರು ಈ ಪರವಾನಿಗೆಗಳನ್ನು ಪರಿಶೀಲಿಸಬಹುದಾಗಿದೆ ಎಂದು ಅವರು ಹೇಳಿದರು.
ವಿಶ್ವನಾಥ ಉದಗಟ್ಟಿ ಮೇಲೆ ನಡೆದಿದೆ ಎನ್ನಲಾದ ಹಲ್ಲೆಗೂ ನಿರಾಣಿ ಕಾರ್ಖಾನೆಗೂ ಯಾವುದೇ ಸಂಬಂಧವಿಲ್ಲ. ಈ ವಿಷಯಕ್ಕೆ ಸಂಬಂಧಿಸಿದ ಮುಧೋಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾನೂನು ರೀತಿ ಕ್ರಮಗಳು ಜರುಗುತ್ತವೆ ಎಂದು ತಿಳಿಸಿದರು.
ರೈತ ಪ್ರಮುಖರಾದ ಮಲ್ಲಪ್ಪ ಪೂಜಾರಿ, ಗುರುಪಾದ ಕುಳಲಿ, ಬಸವರಾಜ ಮಹಾಲಿಂಗೇಶ್ವರಮಠ, ಹನಮಂತ ಬರಬಾಗಿ, ರಾಚಪ್ಪಣ್ಣಾ ಕರೆಹೊನ್ನ, ಮಹಾದೇವಪ್ಪ ಹೊಸಕೋಟಿ, ಶಿವು ಸ್ವತಂತ್ರಮಠ, ಅಜೀತ ಹೊನವಾಡ, ಶಂಕರ ಗಿಡ್ಡಸನ್ನವರ, ಮಹಾದೇವ ಸದಲಗಿ, ಜೆ.ಸಿ.ಗಣಾಚಾರಿ, ಅಪ್ಪಾಸಾಹೇಬ ಘೋರ್ಪಡೆ, ಬಸವರಾಜ ಜಮಖಂಡಿ, ರುದ್ರಪ್ಪ ಅಡವಿ, ರಮೇಶ ದೇಸಾಯಿ, ಗುರಬಸಪ್ಪ ಶಿವಾಪೂರ ಮುಂತಾದವರು ಉಪಸ್ಥಿತರಿದ್ದರು.
ನವೀನ ಹಳೆಯದು