ಸಾಧಕರ ಸಾಧನೆ ಹೊಗಳಿಕೆಯೊಂದಿಗೆ ನಮ್ಮ ದಾರಿಗೆ ಸ್ಪೂರ್ತಿ ಆಗಬೇಕು


ಒಂದು ಯುದ್ಧದಿಂದಾಗಿ ತಿಮ್ಮಪ್ಪ ನಾಯಕ ಕನಕದಾಸನಾಗಿ ಬದಲಾದ

ನಾರದನ ಭೇಟಿಯಿಂದ ಕ್ರೂರನಾಗಿದ್ದ ವ್ಯಕ್ತಿ ವಾಲ್ಮೀಕಿಯಾದ
Image result for Valmiki



ಎಂಟನೆಯ ವಯಸ್ಸಿಗೆ ಉಪನಯನವನ್ನು ತಿರಸ್ಕರಿಸಿ
ಬಸವಣ್ಣ
ಜಗಜ್ಯೋತಿಯಾದ
Image result for Basavanna Modi



ಸತತ ಪ್ರಯತ್ನ ಪ್ರಾಮಾಣಿಕ ಪರಿಶ್ರಮದಿಂದ ಅಂಬೇಡ್ಕರ್ ಸಂವಿಧಾನ ಶಿಲ್ಪಿಯಾದ
Image result for Ambedkara



ತನ್ನ ಅದ್ಬುತ ವಿಚಾರದಾರೆಗಳಿಂದ ಜಗತ್ತನ್ನು ಗೆದ್ದ ನರೇಂದ್ರ ವಿವೇಕಾನಂದನಾದ
Image result for Vivekananda



ತನ್ನ ಮಗನಿಗೆ ಊಟ ಹಾಕಲಾಗದೆ ತನ್ನ ಮಗನನ್ನೇ ವಿಷ ಹಾಕಿ ಕೊಲ್ಲಲು ತಾಯಿ ನಿರ್ಧರಿಸಿದ್ದಳು.
ಅಂದು ಅಚಾನಕ್ ಬದುಕುಳಿದ ವ್ಯಕ್ತಿ ಇಂದು ಕನ್ನಡದ ಸೂಪರ್ ಸ್ಟಾರ್ ಉಪೇಂದ್ರನಾದ
Image result for Upendra



ತನ್ನ ಬಡತನ ಹಸಿವುಗಳನ್ನು ಮೆಟ್ಟಿ ನಿಂತು ಸತತ ಅಬ್ಯಾಸದಿಂದ ರವಿ ಚನ್ನಣ್ಣನವರ್ ಇಂದು ಐಪಿಎಸ್ ಅಧಿಕಾರಿಯಾದ
Image result for Channannavar


ಅಧಿಕಾರದ ವ್ಯಾಮೋಹಕ್ಕೆ ಬಲಿಯಾಗದೆ. ಎಸ್.ಆರ್.ಕಂಠಿಯವರು ಮುಖ್ಯಮಂತ್ರಿಯ ಸ್ಥಾನ ಬಿಟ್ಟು ಕೊಟ್ಟು ರಾಜಕೀಯದ ಭರತನಾದ.
Image result for Anna Hazare



ಇಳಿವಯಸ್ಸಿನಲ್ಲಿಯೂ ಸರ್ಕಾರದ ತಪ್ಪು ನಿರ್ದಾರ, ಭ್ರಷ್ಟಾಚಾರದ ವಿರುದ್ಧ ಚಾಟಿ ಬೀಸಿ ಸತ್ಯಾಗ್ರಹ ನಡೆಸಿದ ಅಣ್ಣಾ ಹಜಾರೆ ಆಧುನಿಕ ಗಾಂಧಿ ಯಾದರು
Image result for Vishweshwarayya



ಬೀದಿ ದೀಪದಲ್ಲಿ ಓದಿದ ವಿಶ್ವೇಶ್ವರಯ್ಯ ಭಾರತ ರತ್ನನಾದ


ಎಂಟನೇ ತರಗತಿ ಫೇಲ್ ಆದ ಸಚಿನ್ ಇಂದು ಕ್ರಿಕೆಟ್ ಲೋಕದ ದೇವರಾದ
Image result for Sachin Tendulkar


ಪೆಟ್ರೋಲ್ ಹಾಕುತ್ತಿದ್ದ ಮುಖೇಶ್ ಅಂಬಾನಿ ಇಂದು ಭಾರತದ ನಂಬರ್ ಒನ್ ಶ್ರೀಮಂತನಾದ
Image result for Dhirubhai ambani


ಗೋಪಾಲ್ ಕೃಷ್ಣ ರೋಲಂಕಿ ಎಂಬ ಆಂಧ್ರದ ಯುವಕ ಇಂಗ್ಲಿಷ್ ಮತ್ತು
ಹಿಂದಿ ಬರದಿದ್ದರೂ ಐಎಎಸ್ ಪರೀಕ್ಷೆಯಲ್ಲಿ ಮೂರನೇ ರ್ಯಾಂಕ್ ಬಂದ
Image result for Gopal krishna ronanki


ಚಪ್ಪಲಿ ಹೋಲಿಯುತ್ತಿದ್ದ ಕುಟುಂಬದಿಂದ ಬಂದ ಅಬ್ರಹಾಂ ಲಿಂಕನ್ ಸತತ ಸೋಲು ಕಂಡರು ಕೊನೆಗೆ ಅಮೆರಿಕದ ಅಧ್ಯಕ್ಷನಾದ...

Image result for Abraham lincoln


ಎನ್. ಅಂಬಿಕಾ ಎಂಬ ಕಾನ್ಸ್ಟೇಬಲ್ ನ ಹೆಂಡತಿ ತನ್ನ ಗಂಡ ಐಪಿಎಸ್ ಅಧಿಕಾರಿಗೆ ಕೊಡುವ ಗೌರವವನ್ನು ಕಂಡು ತಾನು ಹಾಗೆಯೇ ಅಧಿಕಾರಿಯಾಗಬೇಕೆಂದು ಛಲಬಿಡದೆ ಗೆದ್ದ ಮಹಿಳೆ (ಈಕೆಯ ಬದುಕು ತುಂಬಾ ರೋಚಕವಾಗಿದೆ ಮಿಸ್ ಮಾಡದೆ ತಿಳಿದುಕೊಳ್ಳಿ).
Image result for N Ambika


ನಮ್ಮ ಜಿಲ್ಲೆಯವನೊಬ್ಬ
ಐಎಎಸ್ ಅಧಿಕಾರಿಯಾದ
ನಮ್ಮ ತಾಲೂಕಿನವನೊಬ್ಬ
ಕೆ.ಎ.ಎಸ್ ಅಧಿಕಾರಿಯಾದ
ನಮ್ಮ ಊರಿನವನೊಬ್ಬ
ಪಿ.ಎಸ್.ಐ. ಆದ.
ನಮ್ಮ ಓಣಿಯವನೊಬ್ಬ
ಎಫ್.ಡಿ.ಎ.ಆದ.
ನಮ್ಮ ಮನೆಯ ಪಕ್ಕದವನೊಬ್ಬ
ಎಸ್.ಡಿ.ಎ ಆದ.
ಇದೆಲ್ಲವನ್ನು ನೋಡಿದರೂ ನಾವು ಏನು ಆಗಲಿಲ್ಲ...??!!_ _ಏಕೆಂದರೆ ನಮ್ಮಲ್ಲಿ ಸಾಧಿಸುವ ಛಲವೇ ಸತ್ತು ಹೋಗಿರಬಹುದೇನೋ ಅನ್ನಿಸುತ್ತಿದೆ ಮತ್ತೆ ಇನ್ನು ಮುಂದಾದರು ನಾವು ಓದಬೇಕೆನ್ನಿಸುತ್ತದೆ.
ಕಷ್ಟ ಯಾರಿಗಿಲ್ಲಾ...
ಅವಮಾನ ಯಾರಿಗಾಗಿಲ್ಲ...
ಸೋಲನ್ನ ಯಾರು ನೋಡಿಲ್ಲ...
ಕಷ್ಟಗಳನ್ನ ಮನುಷ್ಯ ಮೌನವಾಗಿ ದಾಟಬೇಕು._
ಪರಿಶ್ರಮ ಸದ್ದಿಲ್ಲದೆ ಸಾಗುತ್ತಿರಬೇಕು.
ಆಗ ಸಿಗುವ ಯಶಸ್ಸಿನ ಫಲ ಜಗತ್ತಿಗೆ ಕೇಳಿಸುವಷ್ಟು ಜೊರಾಗಿರುತ್ತದೆ.
ಜಗತ್ತಿನಲ್ಲಿ ಯಾವುದು ಬೇಕಾದರು ಮೋಸ ಮಾಡಬಹುದು.
ಆದರೆ ಪುಸ್ತಕ ಎಂದಿಗೂ ಮಾಡಲಾರದು._
ಎದೆಗೆ ಬಿದ್ದ ಅಕ್ಷರ
ಭೂಮಿಗೆ ಬಿದ್ದ ಬೀಜ..ಮುಂದೊಂದು ದಿನ ಫಲ ಕೊಡುವುದು ಎಂಬುವುದುಂಟು.
ಪುಸ್ತಕ ಗಳನ್ನ ಪ್ರೀತಿಸುವವನಿಗೆ ಸ್ನೇಹಿತರ ಅಗತ್ಯವಿಲ್ಲ.
ಕಠಿಣ ಪರಿಶ್ರಮ,ದೃಢ ಸಂಕಲ್ಪ,ತಾಳ್ಮೆ ಯೊಂದಿದ್ದರೆ ಏನನ್ನಾದರೂ ಸಾದಿಸಬಹುದು.
ಇಂತಹ ಸಂದೇಶಗಳು ಹಲವರಿಗೆ ಸ್ಫೂರ್ತಿಯಾಗಬಹುದು
ಕೆಲವರಿಗೆ ಅಸಡ್ಡೆಯಾಗಿ ಕಾಣಬಹುದು..!!
ಆದರೆ..
ಸಾಧನೆ ಮಾಡುವವನಿಗೆ ಸಾಧಿಸುವ ಛಲ ಬೇಕು ಅಷ್ಟೇ.
ಭವಿಷ್ಯದ ಬಗ್ಗೆ ಚಿಂತಿಸದ್ದರೆ ನಿಮಗೆ ಭವಿಷ್ಯವೇ ಇರುವುದಿಲ್ಲ ಎಂದು ಗಾರ್ಲ ವರ್ದಿರವರು ಹೇಳುತ್ತಾರೆ._
ಎಲ್ಲರಿಗೂ ಶುಭವಾಗಲಿ
ನವೀನ ಹಳೆಯದು