ನಗರದ ತ್ರಿವೇಣಿ ಶಿಕ್ಷಣ ಸಂಸ್ಥೆಯ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ದಶಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಾಯಕರವರು ಮಾತನಾಡಿದರು.
ವಿದ್ಯಾರ್ಥಿಗಳ ಹಿತಾಶಕ್ತಿಯನ್ನು ಮುಂದಿಟ್ಟುಕೊಂಡು ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರುವುದು ಅಭಿನಂದನಾರ್ಹ. ಮಕ್ಕಳಿಗೆ ಸುರಕ್ಷಿತ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಕೆ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಹೈಟೇಕ್ ಮಾದರಿಯಲ್ಲಿ ಸೌಲಭ್ಯ ಒದಗಿಸಲಾಗಿದೆ ಇದು ಅಭಿನಂದನಾರ್ಹ ಎಂದರು.
ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಮಲಘಾಣ ಮಾತನಾಡಿ, ವಿದ್ಯಾಸಂಸ್ಥೆಯು ಉತ್ತಮ. ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಸಾಧನೆಯ ಹೆಜ್ಜೆಯತ್ತ ದಾಪುಗಾಲು ಇಡುತ್ತಿದೆ ಎಂದರು.
ನ್ಯಾಯವಾದಿ ಎಂ.ಎಸ್.ಕಾಜಗಾರ, ಉರ್ಮಿಳಾ ಕಳಸದ, ಡಾ. ಸತೀಶ ಮಲಘಾಣ, ನಿರ್ಮಲಾ ಮಲಘಾಣ, ಮುಖ್ಯಶಿಕ್ಷಕ ಎಂ.ಯು. ಅಂತರಗೊಂಡ, ಡಾ.ಎಸ್.ಖಾನ್, ಮಲ್ಲು ಕಳ್ಳೆನ್ನವರ ಉಪಸ್ಥಿತರಿದ್ದರು.