ಮುಧೋಳ : ಕಬ್ಬು ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾಗಿ ತಾಯಿ-ಮಗ ಸಾವು



ಮುಧೋಳ :  ಕಬ್ಬು ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾಗಿ ತಾಯಿ-ಮಗ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಪಲ್ಟಿಯಾದ ಟ್ರ್ಯಾಕ್ಟರ್ ಅಡಿ ಸಿಲುಕಿದ ಐವರಲ್ಲಿ, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ರನ್ನಬೆಳಗಲಿ ಗ್ರಾಮದಲ್ಲಿ ನಡೆದ ಅವಘಡದಲ್ಲಿ ಸವಿತಾ ತೇಲಿ(40), ಮಗ ಪ್ರವೀಣ (6) ಸಾವನ್ನಪ್ಪಿದ್ದಾರೆ. ಗಾಯಗೊಂಡ ಮೂವರನ್ನು ಮಹಾಲಿಂಗಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಬ್ಬಿನ ಅಡಿ ಸಿಲುಕ್ಕಿದ್ದವರನ್ನು ಎರಡು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ.
ನವೀನ ಹಳೆಯದು