ದಿನಾಚರಣೆಗಳು

ವ್ಯಾಲಂಟೈನ್ಸ್ ದಿನ

ಫೆಬ್ರವರಿ 14 ದಿನವನ್ನು ಸಂತ ವ್ಯಾಲಂಟೈನ್’ರ ದಿನ ಅಥವ ಫೀಸ್ಟ್ ಆಫ್ ಸೈಂಟ್ ವ್ಯಾಲಂಟೈನ್ ಎಂದು ಕರೆಯಲಾಗುತ್ತದೆ. ಪಾಶ್ಚಿಮಾತ್ಯ ಕ್ರಿಶ್ಚಿಯನ್ನರ ಆಚರಣೆಯಾದ ಇದನ್ನು ವ್ಯಾಲಂಟಿನಸ್ ಎಂಬ ಸಂತರ ಪರಂಪರೆಗೆ ಗೌರವ ಸೂಚಕವಾದ ದಿನವೆಂದು ಭಾವಿಸಲಾಗಿದ್ದು, ಕ್ರೈಸ್ತ ಮತವಿರುವ ಬಹುತೇಕ ರಾಷ್ಟ್ರಗಳಲ್ಲಿ ಆಚರಿಸುವ ಪದ್ಧತಿಯಿದೆ.
ವ್ಯಾಲಂಟೈನ್ ದಿನಕ್ಕೆ ಹೊಂದಿಕೊಂಡಂತೆ ಕೆಲವೊಂದು ಹುತಾತ್ಮ ಭಾವಗಳುಳ್ಳ ಕತೆಗಳು ಪ್ರಚಲಿತದಲ್ಲಿದ್ದು, ಅವುಗಳಲ್ಲಿ ಪ್ರಮುಖವಾದದ್ದು ರೋಮ್ ನಗರದ ಸೈಂಟ್ ವ್ಯಾಲಂಟೈನ್ ಎಂಬ ಸಂತನ ಕತೆ. ಅಂದಿನ ರೋಮನ್ ಆಡಳಿತದಲ್ಲಿ ಸೈನಿಕರಾಗಿದ್ದವರಿಗೆ ಮದುವೆ ಆಗುವುದಕ್ಕೆ ಅವಕಾಶ ಇರಲಿಲ್ಲ. ಜೊತೆಗೆ ಈ ಆಡಳಿತ ಬಹುಜನರಿಗೆ ಕಿರುಕುಳ ನೀಡುತ್ತಿತ್ತು. ಇಂತಹ ಸಂದರ್ಭದಲ್ಲಿ ಸಂತ ವ್ಯಾಲಂಟೈನನಿಗೆ ಯುವ ಸೈನಿಕರಿಗೆ ಮದುವೆ ಮಾಡಿಸುತ್ತಿದ್ದ ಮತ್ತು ಜನರನ್ನು ಆಡಳಿತ ವ್ಯವಸ್ಥೆಯ ವಿರುದ್ಧ ಎತ್ತಿಕಟ್ಟುತ್ತಿದ್ದ ಎಂಬ ಆಪಾದನೆಯ ಮೇರೆಗೆ ಮರಣದಂಡನೆ ವಿಧಿಸಿ ಸೆರೆಮನೆ ವಾಸ ವಿಧಿಸಲಾಯಿತು. ನೇಣು ಬೀಳುವ ಮೊದಲಿನ ಕೆಲವೇ ಕೆಲವು ದಿನಗಳಲ್ಲಿ ಸೆರೆಮನೆಯಲ್ಲಿದ್ದ ಸಂದರ್ಭದಲ್ಲಿ ಈತ ಸೆರೆಮನೆಯ ಅಧಿಕಾರಿಯಾಗಿದ್ದವನ ಮಗಳಾದ ಆಸ್ಟೇರಿಯಸ್ ಅನ್ನು ಕಾಯಿಲೆಯಿಂದ ಗುಣಪಡಿಸಿದನಂತೆ. ಕಡೆಗೆ ಅವನನ್ನು ನೇಣು ಹಾಕುವ ಸಂದರ್ಭದಲ್ಲಿ ಆಸ್ಟೇರಿಯಸ್ಸಳಿಗೆ ಬರೆದ ಪತ್ರದಲ್ಲಿ ಕೊನೆಗೆ ‘ನಿನ್ನ ವ್ಯಾಲೆಂಟೈನ್’ ಎಂದು ಬರೆದಿದ್ದನಂತೆ.
ಘಟನೆಗಳು:


  • 842: ಉಭಯ ಭಾಷೆಗಳಲ್ಲಿ ಪ್ರಮಾಣ ವಚನ
  • 1349: ಜ್ಯೂ ಜನಾಂಗೀಯರ ಸಜೀವ ದಹನ ಮತ್ತು ದೇಶದಿಂದ ಉಚ್ಛಾಟನೆ
  • 1400: ಇಂಗ್ಲೆಂಡಿನ ಎರಡನೇ ರಿಚರ್ಡ್ ಹಸಿವಿನಿಂದ ಸತ್ತ
  • 1778: ಅಮೆರಿಕದ ಧ್ವಜಕ್ಕೆ ಮೊಟ್ಟಮೊದಲ ಬಾರಿಗೆ ವಿದೇಶಿ ಗೌರವ
  • 1849: ಫೋಟೋಗೆ ಮೊದಲು ಮುಖ ತೋರಿಸಿದ ಅಮೆರಿಕದ ಅಧ್ಯಕ್ಷ ಜೇಮ್ಸ್ ನಾಕ್ಸ್ ಪೋಲ್ಕ್
  • 1852: ಒಳರೋಗಿಗಳಿಗೆ ಹಾಸಿಗೆ ವ್ಯವಸ್ಥೆ ಒದಗಿಸಿದ ಇಂಗ್ಲೆಂಡಿನ ಪ್ರಥಮ ಆಸ್ಪತ್ರೆ
  • 1855: ಟೆಕ್ಸಾಸ್ ನಗರವು ಅಮೆರಿಕದ ಎಲ್ಲ ಭಾಗಗಳಿಂದ ಟೆಲಿಗ್ರಾಫ್ ಸಂಪರ್ಕ ಪಡೆಯಿತು
  • 1876: ಅಲೆಗ್ಸಾಂಡರ್ ಗ್ರಹಾಂ ಬೆಲ್ ಅವರಿಂದ ಟೆಲಿಫೋನಿಗಾಗಿ ಪೇಟೆಂಟ್ ಅರ್ಜಿ ಸಲ್ಲಿಕೆ.
  • 1899: ಫೆಡರಲ್ ಚುನಾವಣೆಗಳಲ್ಲಿ ಮತಯಂತ್ರಗಳ ಬಳಕೆಗೆ ಅಮೆರಿಕದ ಕಾಂಗ್ರೆಸ್ ಅನುಮೋದನೆ
  • 1912: ಮೊದಲ ಡೀಸೆಲ್ ಚಾಲಿತ ಸಬ್ ಮೆರಿನ್ ಚಾಲನೆ
  • 1920: ಚಿಕಾಗೋದಲ್ಲಿ ಲೀಗ್ ಆಫ್ ವುಮೆನ್ ವೋಟರ್ಸ್ ಸ್ಥಾಪನೆ
  • 1924: ‘ಐ.ಬಿ.ಎಮ್’ ಆದ ಕಂಪ್ಯೂಟಿಂಗ್-ಟ್ಯಾಬ್ಯುಲೇಟಿಂಗ್-ರೆಕಾರ್ಡಿಂಗ್ ಕಂಪೆನಿ
  • 1929: ಸೈಂಟ್ ವ್ಯಾಲೆಂಟೈನ್ಸ್ ದಿನದ ಮಾರಣಹೋಮ
  • 1946: ರಾಷ್ಟ್ರೀಕರಣಗೊಂಡ ಬ್ಯಾಂಕ್ ಆಫ್ ಇಂಗ್ಲೆಂಡ್
  • 1956: ಸ್ಟಾಲಿನ್ನನ ದುಷ್ಕೃತ್ಯಗಳನ್ನು ಕಂಡಿಸಿದ ಸೋವಿಯೆತ್ ಅಧ್ಯಕ್ಷ ನಿಕಿತ ಕೃಶ್ಚೇವ್
  • 1981: ಡಕಾಯಿತ ರಾಣಿ ಫೂಲನ್ ದೇವಿಯಿಂದ 20 ಮಂದಿ ಠಾಕೂರರ ಕಗ್ಗೊಲೆ
  • 1989: ‘ಸಟಾನಿಕ್ ವರ್ಸಸ್' ಬರೆದ ಸಾಹಿತಿ ಸಲ್ಮಾನ್ ರಷ್ದಿ ಮೇಲೆ ಮರಣದಂಡನೆ ಶಿಕ್ಷೆ ವಿಧಿಸಿ ಫತ್ವಾ ಹೊರಡಿಸಿದ ಆಯತೊಲ್ಲಾ ಖೊಮೇನಿ ಸರ್ಕಾರ
  • 1989: ಭೋಪಾಲ್ ದುರಂತದಲ್ಲಿ ಆದ ಅನಾಹುತಕ್ಕೆ ಭಾರತ ಸರ್ಕಾರಕ್ಕೆ 470 ಮಿಲಿಯನ್ ಡಾಲರ್ ಕೊಡಲು ಒಪ್ಪಿದ ಯೂನಿಯನ್ ಕಾರ್ಬೈಡ್
  • 1990: ಬೆಂಗಳೂರಿನಲ್ಲಿ ಉಂಟಾದ ಇಂಡಿಯನ್ ಏರ್ಲೈನ್ಸ್ ವಿಮಾನ 605 ದುರಂತದಲ್ಲಿ 92 ಸಾವು
  • 2001: ಆಸ್ಟರಾಯ್ಡ್ ಸ್ಪರ್ಶಿಸಿದ ಶೂಮೇಕರ್
  • 2005: ಕೆಲವೊಂದು ಕಾಲೇಜು ಹುಡುಗರಿಂದ ಸ್ಥಾಪನೆಗೊಂಡ ಯೂ ಟ್ಯೂಬ್

2006: ವಿವಾಹವನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನ

2007: ಟಿ.ಬಿ. ಸೊಲಬಕ್ಕನವರ, ಕೆ.ಟಿ. ಶಿವಪ್ರಸಾದ ಹಾಗೂ ಎಚ್. ಎನ್. ಸುರೇಶ್ ಅವರಿಗೆ ಕರ್ನಾಟಕ ಲಲಿತ ಅಕಾಡೆಮಿ ಪ್ರಶಸ್ತಿ

2007: ಏಕದಿನ ಕ್ರಿಕೆಟ್ಟಿನಲ್ಲಿ 10,000 ರನ್ ಗಳಿಸಿದ ರಾಹುಲ್ ದ್ರಾವಿಡ್

2008: ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತದ ಸಾಕ್ಷ್ಯಚಿತ್ರ ‘ಉಡೆಧ್ ಬನ್'ಗೆ ರಜತ ಪದಕ

2008: ಪ್ರಕಾಶ್ ಪಡುಕೋಣೆ, ವೀರಪ್ಪ ಮೊಯ್ಲಿ, ಸಾರಾ ಅಬೂಬಕ್ಕರ್ ಸೇರಿದಂತೆ ಐವರಿಗೆ ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್

ಜನನ:

1483: ಭಾರತದಲ್ಲಿ ಮೊಘಲ್ ರಾಜವಂಶ ಸ್ಥಾಪಿಸಿದ ಬಾಬರ್ ಜನನ

1819: ಟೈಪರೈಟರ್ ಕಂಡುಹಿಡಿದ ಕ್ರಿಸ್ತೋಫರ್ ಲಥಾಮ್ ಶೋಲ್ಸ್ ಜನನ

1859: ಫೆರ್ರಿಸ್ ವೀಲ್ ಮೊದಲು ನಿರ್ಮಿಸಿದ ಜಾರ್ಜ್ ವಾಷಿಂಗ್ಟನ್ ಗೆಲ್ ಫೆರ್ರಿಸ್ ಜೂನಿಯರ್ ಜನನ

1908: ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯ ಜನನ

1917: ನೊಬೆಲ್ ಪುರಸ್ಕೃತ ಹರ್ಬರ್ಟ್ ಎ. ಹೌಪ್ಟ್ ಮ್ಯಾನ್ ಜನನ

1933: ನಟಿ ಮಧುಬಾಲ ಜನನ

1939: ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಯೊಗೇನೇ ಫಾಮಾ ಜನನ

1944: ಸಂಗೀತಾ ರೆಕಾರ್ಡಿಂಗ್ ಸಂಸ್ಥೆ ಸ್ಥಾಪಿಸಿ ಅನೇಕ ಕನ್ನಡದ ಧ್ವನಿ ಸುರುಳಿಗಳನ್ನು ಮಾರುಕಟ್ಟೆಗೆ ತಂದ ಎಚ್. ಎಂ. ಮಹೇಶ್ ಜನನ

1948: ಕನ್ನಡದ ಪ್ರಖ್ಯಾತ ವಿಜ್ಞಾನ ಸಾಹಿತಿ, ಪರಿಸರವಾದಿ, ಪತ್ರಕರ್ತ ಡಾ. ನಾಗೇಶ್ ಹೆಗಡೆ ಜನನ

1952: ನ್ಯಾಯವಾದಿ ಮತ್ತು ರಾಜಕಾರಣಿ ಸುಷ್ಮಾ ಸ್ವರಾಜ್ ಜನನ

1967: ‘ಈಸಿ ಜೆಟ್’ ಸಂಸ್ಥೆಯ ಸ್ಥಾಪಕ ಸ್ಟೀಲಿಯೋಸ್ ಹಾಜಿ-ಲೋವನ್ನು ಜನನ

1972: ಸ್ಕೈಪ್ ನಿರ್ಮಿಸಿದವರಲ್ಲಿ ಒಬ್ಬರಾದ ಜಾನ್ ಟಲ್ಲಿನ್ ಜನನ

1944: ಸಂಗೀತಾ ರೆಕಾರ್ಡಿಂಗ್ ಸಂಸ್ಥೆ ಸ್ಥಾಪಿಸಿ ಅನೇಕ ಕನ್ನಡದ ಧ್ವನಿ ಸುರುಳಿಗಳನ್ನು ಮಾರುಕಟ್ಟೆಗೆ ತಂದ ಎಚ್. ಎಂ. ಮಹೇಶ್ ಜನನ

ನಿಧನ:

1744: ಗಣಿತದಲ್ಲಿ ಆಕ್ಟೆಂಟ್ ಸಂಶೋಧಿಸಿದ ಜಾನ್ ಹೇಡ್ಲಿ ನಿಧನ

1779: ಹದಿನೆಂಟನೇ ಶತಮಾನದ ಇಂಗ್ಲಿಷ್ ಕ್ಯಾಪ್ಟನ್, ನಕ್ಷೆಗಳ ತಯಾರಕ, ಅನ್ವೇಷಕ ಜೇಮ್ಸ್ ಕುಕ್ ಪಾಲಿನೇಷಿಯಾದ ನಿವಾಸಿಗಳ ಜೊತೆ ಸಂಭವಿಸಿದ ಘರ್ಷಣೆಯಲ್ಲಿ ಮೃತನಾದ

1975: ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (WWF)ಸ್ಥಾಪಕ ಜೂಲಿಯನ್ ಹಕ್ಸ್ಲೆ ನಿಧನ