ಕ್ರೈಸ್ಟ್ ಚರ್ಚ್: ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್‌ನ ಎರಡನೇ ಸೆಮಿಫೈನಲ್ಸ್‌ನಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ 203 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಇಲ್ಲಿನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ 273 ರನ್‌ಗಳ ಸವಾಲಿನ ಮೊತ್ತ ಬೆನ್ನತ್ತಿದ ಪಾಕ್ ತಂಡ 29.3 ಓವರ್‌ಗಳಲ್ಲಿ ತನ್ನೆಲ್ಲ ಆಟಗಾರರನ್ನು ಕಳೆದುಕೊಂಡು 69 ರನ್ ಗಳಿಸಲು ಮಾತ್ರ ಶಕ್ತವಾಗಿತ್ತು.
ರೋಹಿಲ್ ನಾಜೀರ್ 39, ಸಾದ್ ಖಾನ್ 15, ಮುಹಮ್ಮದ್ ಮುಸಾ 11 ರನ್ ಗಳಿಸಿದ್ದರೆ, ಉಳಿದ ಎಲ್ಲ ಆಟಗಾರರು ಕೇವಲ ಒಂದು ಅಂಕಿಯ ರನ್ ಗಳಿಸುವಷ್ಟು ಮಾತ್ರ ಶಕ್ತವಾದರು.
ಭಾರತದ ಪರ ಇಶನ್ ಪೋರೆಲ್ 4, ಶಿವ ಸಿಂಗ್ 2, ರಿಯಾನ್ ಪರಾಗ್ 2 ಹಾಗೂ ಅನುಕುಲ್ ಸುಧಾಕರ ರಾಯ್ ಮತ್ತು ಅಭಿಷೇಕ್ ಶರ್ಮಾ ತಲಾ ಒಂದು ವಿಕೆಟ್ ಕಿತ್ತರು.