ಕನ್ನಡದಲ್ಲೇ ರೈಲ್ವೆ ನೇಮಕಾತಿ ಪರೀಕ್ಷೆ: ಗರಿಷ್ಠ ವಯೋಮಿತಿಯಲ್ಲೂ ಹೆಚ್ಚಳ


ನವದೆಹಲಿ: ಖಾಲಿ ಇರುವ 90 ಸಾವಿರ ಹುದ್ದೆಗಳ ನೇಮಕಾತಿಗಾಗಿ ಇತ್ತೀಚೆಗಷ್ಟೇ ಅರ್ಜಿ ಆಹ್ವಾನಿಸಿರುವ ರೈಲ್ವೆ ಇಲಾಖೆಯು, ಕನ್ನಡವೂ ಸೇರಿದಂತೆ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಲಿಖಿತ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ.

ಅಲ್ಲದೆ, ಎಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಹಿಂದೆ ನಿಗದಿಪಡಿಸಿದ್ದ ಗರಿಷ್ಠ ವಯೋಮಿತಿಯನ್ನೂ ಪರಿಷ್ಕರಿಸಿ ಹೆಚ್ಚಿಸಲಾಗಿದ್ದು, ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕವನ್ನೂ ವಿಸ್ತರಿಸಲು ನಿರ್ಧರಿಸಲಾಗಿದೆ.
ಗ್ರೂಪ್‌ ‘ಸಿ’ ವಿಭಾಗದ ಲೆವೆಲ್‌– 1ರಲ್ಲಿನ ಹುದ್ದೆಗಳಾದ ಟ್ರ್ಯಾಕ್‌ ಮೇಂಟೇನರ್‌, ಪಾಯಿಂಟ್ಸ್‌ ಮ್ಯಾನ್‌, ಹೆಲ್ಪರ್‌, ಗೇಟ್‌ಮನ್‌, ಪೋರ್ಟರ್‌ ಹಾಗೂ ಇದೇ ವಿಭಾಗದ ಲೆವೆಲ್‌– 2ರ ಹುದ್ದೆಗಳಿಗೆ ಕನಿಷ್ಠ 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ನವೀನ ಹಳೆಯದು