ಮುಧೋಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಮಾತನಾಡಿದ ಸಚಿವರು. ಫೆ. 23 ರಂದು ಬೆಳಗಲಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.ಫೆ. 24 ಮತ್ತು 25 ರಂದು ಮುಧೋಳದ ರನ್ನ ಕ್ರೀಡಾಂಗಣದಲ್ಲಿ ರನ್ನ ವೈಭವ ನಡೆಯಲಿದೆ. ಫೆ. 25ರ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಮೂರು ದಿನಗಳ ಕಾಲದ ರನ್ನ ವೈಭವದಲ್ಲಿ ಕವಿಗೋಷ್ಠಿ, ರನ್ನ ಪ್ರಶಸ್ತಿ, ಅಹಿಂಸೆ, ಅಹಂಕಾರ ನಿಗ್ರಹ ಕುರಿತಾದ ರನ್ನನ ವ್ಯಕ್ತಿವನ್ನೊಳಗೊಂಡ ಸಾಹಿತ್ಯ ಸಭೆ ನಡೆಯಲಿವೆ. ಹೆಸರಾಂತ ಲೇಖಕರು ಭಾಗವಹಿಸಲಿದ್ದಾರೆ.
ಈ ಬಾರಿ ರನ್ನ ವೈಭವವನ್ನು ಅದ್ದೂರಿಯಾಗಿ ಆಚರಿಸಲು ಜಿಲ್ಲಾಡಳಿತ ಸಜ್ಜಾಗಿದೆ. ವೈಭವಕ್ಕಾಗಿ 1.5 ಕೋಟಿ ರೂ. ವೆಚ್ಚವಾಗಲಿದೆ. ಕಳೆದ ಮೂರು ವರ್ಷಗಳಿಂದ ರನ್ನ ವೈಭವಕ್ಕೆ ಮೀಸಲಿಟ್ಟಿದ್ದ 90 ಲಕ್ಷ ರೂ.ಗಳು ಬಾಕಿ ಉಳಿದಿದೆ. ಉಳಿದ 60 ಲಕ್ಷ ಹಣವನ್ನು ಸಂಘ-ಸಂಸ್ಥೆಗಳು, ದಾನಿಗಳಿಂದ ಸಂಗ್ರಹಿಸಲು ಉದ್ದೇಶಿಸಲಾಗಿ ಎಂದು ಜಿಲ್ಲಾಧಿಕಾರಿಗಳಾದ ಕೆ.ಜಿ. ಶಾಂತಾರಾಮ ತಿಳಿಸಿದರು.