ಟಿಪ್ಪರ್ ಲಾರಿ ಹರಿದು ಬಾಲಕ ಸಾವು ..!



ಮುಧೋಳ : ಟಿಪ್ಪರ್ ಲಾರಿ ಹರಿದು ನಾಲ್ಕು ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ ನಡೆದಿದೆ.
ಕುಲಲಿ ಗ್ರಾಮದ ವಿನಾಯಕ ಮಸಟಗಿ ಮೃತ ಪಟ್ಟ ಬಾಲಕ. ಆಟ ಆಡುತ್ತಿದ್ದಾಗ ವೇಗವಾಗಿ ಬಂದ ಟಿಪ್ಪರ್ ಲಾರಿ ಬಾಲಕನ ಮೇಲೆ ಹರಿದು ಬಿಟ್ಟಿತ್ತು.

ಬಾಲಕ ವಿನಾಯಕ ತಾಯಿ ಜೊತೆ ಅಜ್ಜಿಯ ಮನೆ ಇರುವ ಕುಳಲಿ ಗ್ರಾಮಕ್ಕೆ ಬಂದಿದ್ದ. ಇನ್ನು ಬಾಲಕನ ಸಾವನ್ನು ಖಂಡಿಸಿ ಗ್ರಾಮದ ಜನ ಪ್ರತಿಭಟನೆ ನಡೆಸಿದರು.
ಮುಧೋಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ನವೀನ ಹಳೆಯದು