ಜನ ಔಷಧಿ ಕೇಂದ್ರ ಈಗ ನಮ್ಮ ಮುಧೋಳದಲ್ಲಿ


ಪ್ರತಿ ಭಾರತದ ಪ್ರಜೆಯೂ ಈ ಬೆಲೆಪಟ್ಟಿಯನ್ನು ಮನೆಯಲ್ಲಿಟ್ಟುಕೊಳ್ಳುವುದು ಸೂಕ್ತ!! ಇದು ಪ್ರಧಾನಿ ಮೋದಿಯವರ ಕನಸಿನ ಜನೌಷಧಿ ಯೋಜನೆ!!

ಆಧುನಿಕತೆಯ ಪ್ರವಾಹದಲ್ಲಿ ಸಿರಿವಂತ ಬಡವ ಎನ್ನದೇ ಎಲ್ಲರ ಬದುಕುಗಳನ್ನು ಹಿಡಿದು ಹಿಂಡಿ ಹಿಪ್ಪೆ ಮಾಡುವ ಮಾರಕ ಕಾಯಿಲೆಗಳು ಮನುಷ್ಯನ ಆಯಸ್ಸನ್ನೇ ಕಿತ್ತು ತಿನ್ನುತ್ತಿರುವಾಗ ಆಸ್ಪತ್ರೆ, ಔಷಧ ವೆಚ್ಚ ಭರಿಸುವ ಸಾಮರ್ಥ್ಯವಿಲ್ಲದೇ ಅಸಹಾಯಕರಾಗಿ ಜೀವ ಕಳೆದುಕೊಳ್ಳುವ ಎಷ್ಟೋ ಜೀವಗಳಿಗೆ ಆಸರೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ಮಹತ್ವದ ಯೋಜನೆಯೇ ಜನೌಷಧ.


ಎಷ್ಟೋ ಜೀವಗಳಿಗೆ ವರದಾನವಾಗಿರುವ ಜನೌಷಧ ವ್ಯವಸ್ಥೆಯು ಕಾಯಿಲೆ ಪೀಡಿತರಾದ ಜನರಿಗೆ ಕಡಿಮೆ ದರದಲ್ಲಿ ಔಷಧ ಸಿಗುವಂತೆ ನೋಡಿಕೊಳ್ಳುವ ಮಹತ್ವಾಕಾಂಕ್ಷಿ ಯೋಜನೆ. ಅಷ್ಟೇ ಅಲ್ಲದೇ, ಜನೌಷಧ ಕೇಂದ್ರಗಳಲ್ಲಿ ಮಾರುಕಟ್ಟೆ ದರಕ್ಕಿಂತ ಶೇ.70ರಷ್ಟು ರಿಯಾಯ್ತಿ ದರದಲ್ಲಿ ಔಷಧ ಹಾಗೂ ವೈದ್ಯಕೀಯ ಸಲಕರಣೆಯನ್ನು ಒದಗಿಸುವ ಅತ್ಯಂತ ಅಗ್ಗದ ಯೋಜನೆಯಾಗಿದೆ.

ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರ ಎಂದರೇನು?

ಪ್ರಧಾನ ಮಂತ್ರಿ ಜನ ಔಷಧ ಕೇಂದ್ರವು ಭಾರತ ಸರ್ಕಾರದ ಔಷಧ ಇಲಾಖೆಯಿಂದ ಪ್ರಾಯೋಜಿಸಲ್ಪಟ್ಟಿರುವ ಜೆನರಿಕ್ ಔಷಧಿಗಳ ಮೆಡಿಕಲ್ ಸ್ಟೋರ್ ಆಗಿರುತ್ತದೆ. ಇದರಲ್ಲಿ ಅತ್ಯುತ್ತಮ ಗುಣಮಟ್ಟದ ಜೆನರಿಕ್ ಔಷಧಿಗಳು ಖಾಸಗಿ ಔಷಧಿಗಳ ಬೆಲೆಗಿಂತ ಶೇ. 30 ರಿಂದ 80 ರವರೆಗೆ ರಿಯಾಯಿತಿ ದರದಲ್ಲಿ ದೊರೆಯುತ್ತದೆ. ಅಷ್ಟೇ ಅಲ್ಲದೇ, ಇದಕ್ಕೆ ಯಾವುದೇ ಬ್ರಾಂಡ್‍ನ ಹೆಸರು ಇರುವುದಿಲ್ಲ. ಈ ಔಷಧವು ಯಾವುದೇ ಬ್ರಾಂಡಿನ ಔಷಧಿಗೆ ಹೋಲಿಸಿದರೆ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿರುತ್ತದೆ. ಹಾಗೂ ಬೆಲೆಯಯಲ್ಲಿ ಬ್ರಾಂಡೆಡ್ ಔಷಧಿಗಿಂತ ಕಡಿಮೆ ಇರುತ್ತದೆ.

ಜನೌಷಧಿ ಅಥವಾ ಜನೆರಿಕ್ ಔಷಧಿ ಎಂದು ಕರೆಯುವ ಸರಕಾರದ ಈ ಔಷಧಿ, ಮಾತ್ರೆಗಳು ಕಡಿಮೆ ಬೆಲೆಯಲ್ಲಿ ಶ್ರೇಷ್ಟ ಗುಣಮಟ್ಟವನ್ನು ಹೊಂದಿರುತ್ತವೆ ಹಾಗೂ ಸರಕಾರವೇ ಸಾರ್ವಜನಿಕರಿಗೆ ತಯಾರು ಮಾಡಿ (ಪೇಟೆಂಟ್ ಇಲ್ಲದ) ನೇರವಾಗಿ ಜನೌಷಧಿ ಕೇಂದ್ರಗಳ ಮೂಲಕ ಮಾರಾಟ ಮಾಡುವ ವ್ಯವಸ್ಥೆ ಮೂಲಕ ಔಷಧಿ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳ ಏಕಚಕ್ರಾಧಿಪತ್ಯಕ್ಕೆ ಸೆಡ್ಡು ಹೊಡೆಯಲು ಹೆಚ್ಚು ಹೆಚ್ಚು ಇಂತಹ ಕೇಂದ್ರಗಳು ತೆರೆಯಲು ಅವಕಾಶ ಮಾಡಿಕೊಡುತ್ತಿದೆ. ವಾಸ್ತವವಾಗಿ ಯುಪಿಎ ಸರಕಾರ 2008ರಲ್ಲಿಯೇ ಈ ಯೋಜನೆ ಜಾರಿಗೆ ತಂದಿದ್ದರೂ ವ್ಯಾಪಕವಾಗಿ ಅದು ಜಾರಿಗೊಳ್ಳದೇ ಈ ಸೌಲಭ್ಯ ಬೆಳಕಿಗೆ ಬಾರದಂತಾಗಿತ್ತು!!

ಆದರೆ ಇದೀಗ ಮೋದಿ ನೇತೃತ್ವದ ಕೇಂದ್ರ ಸರಕಾರ ಹೆಚ್ಚು ಹೆಚ್ಚು ಕೇಂದ್ರಗಳನ್ನು ಆರಂಭಿಸಲು ಉತ್ತೇಜನ ನೀಡುತ್ತಿರುವುದರಿಂದ ಜನರಲ್ಲಿ ಜನೆರಿಕ್ ಔಷಧಿಗಳ ಕುರಿತು ಆಸಕ್ತಿ ಮೂಡುವಂತಾಗಿದೆ. ರಾಜ್ಯ ಸರಕಾರ ಸಹ ಜನೆರಿಕ್ ಮಳಿಗೆ ಆರಂಭಿಸಲು ಆಸಕ್ತಿ ತೋರುತ್ತಿರುವುದು ಶ್ಲಾಘನೀಯವಾಗಿದೆ. ಖಾಸಗಿ ಔಷಧಿ ತಯಾರಕರ ಔಷಧಿ, ಮಾತ್ರೆಗಳು ದುಬಾರಿ ಎನಿಸಿದರೂ ಅನಿವಾರ್ಯವಾಗಿಕೊಳ್ಳುವಂತೆ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿದ್ದು ಜನರ ಮೇಲೆ ಜನೆರಿಕ್ ಔಷಧಿಗಳನ್ನು ಕೊಂಡಲ್ಲಿ ಆರೋಗ್ಯದ ಕಾಳಜಿಯ ಜೊತೆಗೆ ಹಣ ಉಳಿತಾಯವೂ ಆಗಲಿದೆ.

ಉದಾಹರಣೆಗೆ ಒಂದು ಆಸ್ಪಿರಿನ್ ಮಾತ್ರೆಯ ಬೆಲೆ ಮಾರುಕಟ್ಟೆಯಲ್ಲಿ 16ರೂಪಾಯಿ ಎಂದಿಟು ಕೊಳ್ಳೋಣ ಜನೌಷಧ ಕೇಂದ್ರದಲ್ಲಿ ಅದೇ ಮಾತ್ರೆ 4.80ರೂ. ದೊರೆಯ ಬಹುದು. ಇದು ಇತರೆ ಔಷಧ ಅಂಗಡಿಗಳಲ್ಲಿ ದೊರೆಯುವ ಔಷದಗಳ ಬೆಲೆಗಿಂತ ಕಡಿಮೆ. ಸರ್ಕಾರ ಅಗತ್ಯ ಔಷಧಗಳ ಮೇಲೆ ವ್ಯಾಟ್ ತೆರಿಗೆ ಹಾಗೂ ಎಕ್ಸೈಸ್ ಕರವನ್ನು ಅತ್ಯಂತ ಕಡಿಮೆ ದರಕ್ಕೆ ಇಳಿಸಿದೆ ಹೀಗಾಗಿ ಮತ್ತಷ್ಟು ಕಡಿಮೆ ಬೆಲೆಗೆ ಜನರಿಕ್ ಮಳಿಗೆಗಳಲ್ಲಿ ಔಷಧಗಳು ಮತ್ತು ವೈದ್ಯಕೀಯ ಸಲಕರಣೆಗಳು ಲಭ್ಯವಾಗ ಬಹುದು.

ಉದಾಹರಣೆಗೆ 180 ರೂ.ಗಳ ಇನ್ಸುಲಿನ್ 71 ರೂ., 900 ರೂ.ಗಳ ಇನ್ಸುಲಿನ್ ಗ್ಲಾರ್ಜಿನ್ 266 ರೂ.ಗೆ ಲಭ್ಯವಾಗುತ್ತಿದೆ. 370 ರೂಗಳ ರೇಬಿಸ್ ಲಸಿಕೆಗೆ 166 ರೂ. ಮಾರಾಟ ಮಾಡಲಾಗುತ್ತಿದೆ. ನೀವು ಮಧುಮೇಹಕ್ಕೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ………
1) ಗ್ಲಿಕ್ಲಜೈಡ್ 80mg 10 ಮಾತ್ರೆಗಳ ಬೆಲೆ ಪ್ರಧಾನ್ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದಲ್ಲಿ- ರೂ 20.25 ಇತರ ಪ್ರಮುಖ ಬ್ರ್ಯಾಂಡ್ಗಳು 10 ಮಾತ್ರೆಗಳ ಬೆಲೆ – ರೂ 167, ರೂ 120, ರೂ 93 ಇತ್ಯಾದಿ
2) ಗ್ಲಿಮಿಪಿರೈಡ್ 2 ಮಿಗ್ರಾಂ 10 ಮಾತ್ರೆಗಳ ಬೆಲೆ ಪ್ರಧಾನ್ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದಲ್ಲಿ -ರೂ 5.05 ಇತರ ಪ್ರಮುಖ ಬ್ರ್ಯಾಂಡ್ಗಳು 10 ಮಾತ್ರೆಗಳ ಬೆಲೆ – ರೂ 397, ರೂ 194, ರೂ 154 ಇತ್ಯಾದಿ
3) ವೋಗ್ಲಿಬೋಸ್ 0.2mg 10 ಮಾತ್ರೆಗಳ ಬೆಲೆ ಪ್ರಧಾನ್ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದಲ್ಲಿ – ರೂ 9.61 ಇತರ ಪ್ರಮುಖ ಬ್ರ್ಯಾಂಡ್ಗಳು 10 ಮಾತ್ರೆಗಳ ಬೆಲೆ – ರೂ 286, ರೂ 264, ರೂ 204 ಇತ್ಯಾದಿ

ಜೆನರಿಕ್ ಔಷಧಿಯು ಹೇಗೆ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ?

ಜೆನರಿಕ್ ಔಷಧಿಯು ಭಾರತ ಸರ್ಕಾರದ ಪ್ರಯೋಗ ಶಾಲೆಯಲ್ಲಿ ತಯಾರಾಗಿ ನೇರಾಗಿ ಜನ ಔಷಧಿ ಮಳಿಗೆಗೆ ಬರುತ್ತದೆ. ಇದರಿಂದ ಖಾಸಗಿ ಔಷಧಿಗಳಂತೆ ಅಧಿಕ ತಯಾರಿಕ ವೆಚ್ಚ, ಜಾಹಿರಾತು ವೆಚ್ಚ, ಮಾರುಕಟ್ಟೆ ವೆಚ್ಚ, ಹೋಲ್‍ಸೇಲ್, ರೀಟೈಲರ್ ಇತರ ಕಮಿಷನ್‍ಗಳು, ತೆರಿಗೆ ಯಾವುದೇ ಇರುವುದಿಲ್ಲ. ಆದ್ದರಿಂದ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ.

ಸಾಮಾನ್ಯ ಜನರ ಕ್ಷೇಮಾಭಿವೃದ್ದಿಗೆ ಜಾರಿಗೆ ಬಂದಿರುವ ಜನೌಷಧ ಯೋಜನೆಯು ಆರೋಗ್ಯ ಸೇವೆಯಲ್ಲಿ ಆದ್ಯತೆಯ ಸ್ಥಾನದಲ್ಲಿದೆ. ಔಷಧಿಗಳನ್ನು ನಿಖರವಾಗಿ ಮತ್ತು ಕಡಿಮೆ ಬೆಲೆಯಲ್ಲಿ, ಎಲ್ಲ ವರ್ಗದ ಜನರಿಗೂ ತಲುಪಲಿ ಎನ್ನುವ ಕಾರಣಕ್ಕೆ ಜನೌಷಧ ಯೋಜನೆಯು ವಿವಿಧ ರೀತಿಯ ಔಷಧಿಗಳನ್ನು ತಯಾರಿಸುತ್ತಿದೆ. ಸಧ್ಯ ಮಾರುಕಟ್ಟೆಯಲ್ಲಿ ಔಷಧಿಗಳ ಉತ್ಪಾದನೆ ದರಕ್ಕಿಂತ ಅಧಿಕ ಬೆಲೆ ನಿಗದಿ ಪಡಿಸುತ್ತಿದ್ದಾರೆ, ಅನಿವಾರ್ಯವಾಗಿ ಅದೇ ಬೆಲೆಯನ್ನು ತೆತ್ತು ಜನ ಔಷಧಿ ಖರೀದಿಸುತ್ತಿದ್ದಾರೆ, ದುಬಾರಿ ಬೆಲೆಯ ಔಷಧ ಖರೀದಿಸಲು ಕಷ್ಟವಾದಾಗ ಅಸಹನೆಯಿಂದ ಜೀವ ತೆತ್ತ ಸಾಕಷ್ಟು ಉದಾಹರಣೆಗಳು ಕಣ್ಣ ಮುಂದಿವೆ.

ಈಗ ಮಧುಮೇಹ, ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಸಿರಿವಂತ ಬಡವ ಎನ್ನದೇ ಎಲ್ಲರವನ್ನು ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಈ ಹೊತ್ತಿನಲ್ಲಿ ಔಷದೋಪಚಾರದ ವೆಚ್ಚವೂ ಕೈಗೆಟುಕದ ಎತ್ತರದಲ್ಲಿದೆ. ಹೀಗಿರುವಾಗ ಜನೌಷಧ ಮಳಿಗೆಗಳಲ್ಲಿ ಜನರಿಗೆ ಮಾರುಕಟ್ಟೆಯಲ್ಲಿ ದೊರಕುವ ಔಷಧಗಳ ಬೆಲೆಗಿಂತ ಅತ್ಯಂತ ಕಡಿಮೆ ಬೆಲೆಗೆ ಸುಲಭವಾಗಿ ದಕ್ಕುವಂತಾದರೆ ಅದೆಷ್ಟೋ ಜೀವಗಳು ನೆಮ್ಮದಿಯ ಬದುಕು ಕಾಣುತ್ತವೆ. ಈ ನಿಟ್ಟಿನಲ್ಲಿ ಜನೌಷಧ ಮಳಿಗೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಜನರ ಅವಶ್ಯಕತೆಗೆ ತಕ್ಕಂತೆ ಔಷಧಿಗಳನ್ನು ಒದಗಿಸಲು ಪ್ರತೀ ಜಿಲ್ಲಾವಾರು ಮತ್ತು ಗ್ರಾಮೀಣವಾರು ಜನೌಷಧ ಮಳಿಗೆಗಳನ್ನು ತೆರೆಯಲಾಗುತ್ತಿದೆ.

ಒಂದು ವರ್ಷಕ್ಕೆ 60 ಸಾವಿರ ರೂಪಾಯಿಗಳಿಗೆ ಕೊಳ್ಳುವ ಬ್ರ್ಯಾಂಡೆಡ್ ಔಷಧಿಗಳಿಗೆ ಬದಲಾಗಿ ಜನೆರಿಕ್ ಔಷಧಿಗಳು ಕೊಂಡರೆ 1 ಸಾವಿರ ಮಾತ್ರ ಖರ್ಚಾಗುತ್ತದೆ. ಗರ್ಭಿಣಿ ಸ್ತ್ರೀಯರು ಬಳಸುವ ಕ್ಯಾಲ್ಸಿಯಂ ಮಾತ್ರೆಗಳು, ಅಪೌಷ್ಟಿಕತೆ ನಿವಾರಣೆಗೆ, ಸಕ್ಕರೆ ಕಾಯಿಲೆ, ಹೃದ್ರೋಗ, ರಕ್ತದೊತ್ತಡ, ಗ್ಯಾಸ್ಟ್ರೋ, ಆ್ಯಂಟಿಬಯೋಟಿಕ್ಸ್ ಸೇರಿದಂತೆ 500ಕ್ಕೂ ಹೆಚ್ಚು ಔಷಧಿಗಳು ಜನೌಷಧಿ ಮೆಡಿಕಲ್ ಸ್ಟೋರ್‍ಗಳಲ್ಲಿ ಅತ್ಯಂತ ಕಡಿಮೆ ಬೆಲೆ ಲಭ್ಯವಾಗುತ್ತಿವೆ. ಹಾಗಾಗಿ ಶೇಕಡಾ 50 ರಿಂದ ಶೇಕಡಾ 80 ರಷ್ಟು ವ್ಯತ್ಯಾಸ ಜೆನೆರಿಕ್ ಔಷಧಿ ಮತ್ತು ಖಾಸಗಿ ಕಂಪನಿ ಗಳ ಬ್ರ್ಯಾಂಡೆಡ್ ಔಷಧಿಗಳಿಗೆ ಇದ್ದು, 2 ಲಕ್ಷ ಬೆಲೆ ಇರುವ ಕ್ಯಾನ್ಸರ್ ಇಂಜೆಕ್ಷನ್ ಜೆನೆರಿಕ್ ಮಳಿಗೆಗಳಲ್ಲಿ ಕೇವಲ 8 ರಿಂದ 10 ಸಾವಿರಕ್ಕೆ ಖರೀದಿಸಬಹುದಾಗಿದೆ!!



ನಮ್ಮ ಮುಧೋಳದಲ್ಲಿ ಎಲ್ಲಿದೆ?

ಜೈ ಭಾರತ ಸರ್ಕಲ್ ಎಂ.ಜಿ ರಸ್ತೆ ಮುಧೋಳ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8152995813

ಇಮೇಲ್ - Sksgsbidari@gmail.com

Time morning 9.30 to 8pm Sunday holiday

https://goo.gl/maps/T1YEkgkNsyH2






ಶೇರ್ ಮಾಡಿ ಅದೆಷ್ಟೋ ಜನಕ್ಕೆ ಸಹಾಯ ಆಗಬಹುದು


ನವೀನ ಹಳೆಯದು