ನಾಮಕರಣ ಮಾಡೋ ವಿಷಯದಲ್ಲಿ ಯಾವುದೇ ಗೊಂದಲ ಬೇಡ


ಫೇಸ್ಬುಕ್ನಲ್ಲಿ ಗಮಣಿಸಿರೋ ಹಾಗೆ ಹಲವಾರು ಜನ ಬಸ್ ನಿಲ್ದಾಣಕ್ಕೆ ಹಾಗೂ ಇನ್ನಿತರ ಸಾರ್ವಜನಿಕ ಆಸ್ತಿಗಳಿಗೆ ನಾಮಕರಣ ಮಾಡಲು ಹಲವಾರು ಗಣ್ಯರ ಹೆಸರುಗಳನ್ನು ಸೂಚಿಸುತ್ತಿದ್ದಾರೆ ಅದು ತಪ್ಪಲ್ಲ ಆದರೆ 

ಸೂಚಿಸಿರೋ ಹೆಸರುಗಳೆಲ್ಲ ನಮ್ಮ ತಾಲೂಕಿಗೆ ಸಂಭಂಧಸಿದವರಲ್ಲ ಮತ್ತು ಅವರೆಲ್ಲರು ವಿಶ್ವಮಟ್ಟದಲ್ಲಿ ಹೆಸರು ಮತ್ತು ಖ್ಯಾತಿ ಗಳಸಿದವರು ರಾಜ್ಯದ ಪ್ರತಿ ಗಲ್ಲಿಯಲ್ಲೂ ಅವರ ಸ್ಮಾರಕ ಮತ್ತು ಪ್ರತಿಮೆಗಳು ರಾರಾಜಿಸುತ್ತಿವೆ. ಹೀಗಾಗಿ ನಾವು ಸ್ಥಳೀಯ ಸಾಧಕರನ್ನು ಗುರಿತಿಸಿ ಅವರ ಹೆಸರುಗಳನ್ನು ಇಡಬೇಕಾಗಿದೆ ಏಕೆಂದರೆ ನಮ್ಮವರನ್ನು ನಾವು ಗುರುತಿಸದಿದ್ದರೆ ಮತ್ತ್ಯಾರು ಗುರುತಿಸೋಕೆ ಸಾಧ್ಯ ಹೇಳಿ...ಅಷ್ಟೇ ಏಕೆ ನಮ್ಮ ಮುಧೋಳದಲ್ಲಿ ಎಷ್ಟೊಂದು ವೃತ್ತಗಳಿವೆ (ಸರ್ಕಲ್) ಆದರೆ ನಮ್ಮ ತಾಲೂಕಿನವರ ಹೆಸರಿನಲ್ಲಿರುವುದು ಎರಡು ಮೂರು ಮಾತ್ರ...ಈಗ ಮತ್ತೇ ಸಮಸ್ಯೆ ಎದುರಾಗಿರೋದು ಇಲ್ಲೇ ಇವತ್ತು ಮುಧೋಳ ಬಸ್ ನಿಲ್ದಾಣಕ್ಕಾಗಿ ತಾಲೂಕಿನ ಸಾಧಕರನ್ನು ಬಿಟ್ಟು ಹೊರಗಿನವರ ಹೆಸರನ್ನು ಸೂಚಿಸುತ್ತಿದ್ದಾರೆ ಹಾಗೆ ಇನ್ನೇನು ಕೆಲವೇ ದಿನಗಳಲ್ಲಿ ರೈಲು ನಿಲ್ದಾಣ ನಿರ್ಮಾಣವಾಗುತ್ತೆ ಅದಕ್ಕೂ ಬೇರೆಯವರ ಹೆಸರು ಸೂಚಿಸುವುದು ಸೂಕ್ತವಲ್ಲ...

ಅಷ್ಟೇ ಅಲ್ಲ ಜಡಗ, ಬಾಲರ ವೃತ್ತವಿದೆ ಆದ್ರೆ ಅಲ್ಲಿ ಅವರ ಪ್ರತಿಮೆಗಳಿಲ್ಲ. ನಂಗೊತ್ತು ಕೆಲವರು ಅನ್ನಬಹುದು ಅಭಿವೃದ್ಧಿ ಅಗಬೇಕಾಗಿರೋದು ತುಂಬಾ ಇದೆ ಈಗ ಈ ವಿಷಯದ ಅವಶ್ಯಕತೆ ಏನಿದೆ ಅಂಥ ನಿಜ ಸ್ವಾಮಿ ನಮ್ಮವರ ಗತಕಾಲದ ಸಾಧನೆಯನ್ನು ತಿಳಿಸಿ ಸಾರಬೇಕಾಗಿರೋದು ನಾವೇ ಹೊರತು ಬೆರೆಯವರಲ್ಲ...ಈಗಾಗಲೇ ಸ್ವಾತಂತ್ರ್ಯ ನಂತರ ಬಂದ ಇತಿಹಾಸಕಾರರೆಲ್ಲರು ಉತ್ತರ ಭಾರತದವರಾದ ಕಾರಣ ದಕ್ಷಿಣ ಭಾರತದ ಇತಿಹಾಸವನ್ನು ಅಲಕ್ಷಿಸಲಾಯಿತು ಇದರಿಂದ ಇಲ್ಲಿನ ಇತಿಹಾಸ ಎಷ್ಟೋ ಜನರಿಗೆ ಅರಿಯದೇ ಹೋಯಿತು

ಉದಾಹರಣೆಗೆ ಹೇಳಬೇಕೆಂದರೆ ಉತ್ತರದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅಷ್ಟೇ ನಮ್ಮ ಕಿತ್ತೂರಿನ ರಾಣಿ ಚೆನ್ನಮ್ಮ ಹೋರಾಡಿದಳು, ಉತ್ತರ ಭಾರತದ ಯಾವ ದಂಗೆಗೂ ಕಡಿಮೆ ಇಲ್ಲದಂತೆ ನಮ್ಮ ಹಲಗಲಿ ಬೇಡರು ಹೋರಾಡಿದರು ಆದರೆ ಇತಿಹಾಸದ ದಾಖಲೆಗಳಲ್ಲಿ ಇತಿಹಾಸಕಾರರು ಅವರುಗಳ ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿದರೆ ವಿನಃ ಇಲ್ಲಿನ ಇತಿಹಾಸದ ಬಗ್ಗೆ ಅವರು ಆಸಕ್ತಿ ತೋರಸಲಿಲ್ಲ

ಇದರಿಂದಾಗಿ ಇಂದು ದೇಶದ ಎಲ್ಲ ಪಠ್ಯ ಪುಸ್ತಕಗಳಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮತ್ತು ಉತ್ತರ ಭಾರತದ ಹೊರಟಿಗಳದ್ದೇ ವರ್ಣನೆ ಹೆಚ್ಚಿರುತ್ತದೆ

ಇನ್ನೂ ನಮ್ಮ ರನ್ನನ ಬಗ್ಗೆ ತಿಳಿಯಬೇಕಾಗಿರೋ ಇತಿಹಾಸ ತುಂಬಾ ಇದೆ. ತಾಲೂಕಿನಲ್ಲಿರೋ ಐತಿಹಾಸಿಕ ದೇವಾಲಯಗಳ ರಕ್ಷಣೆ ಮತ್ತು ಅವುಗಳ ಇತಿಹಾಸದ ಬಗ್ಗೆ ಇನ್ನೂ ಗೊಂದಲಗಳಿವೆ ಸಂಶೋಧನೆ ಗಳು ಆಗಬೇಕಿದೆ ಆದರೆ ಇದರ ಬಗ್ಗೆ ಯಾವ ನಾಯಕರು ಮನಸ್ಸು ತೋರಿಸುತ್ತಿಲ್ಲ ಇದರಿಂದ ತಾಲೂಕಿನ ಪ್ರವಾಸೋದ್ಯಮಕ್ಕೂ ಮತ್ತು ನಮ್ಮ ಸಂಸ್ಕೃತಿಗೆ ಪೆಟ್ಟು ಬಿಳುತ್ತೆ ಅನ್ನೋದನ್ನೇ ಮರೆತಿದ್ದಾರೆ

ಆದರೆ ಈಗ ನಮಗೂ ಒಂದು ಸಮಯ ಬಂದಿದೆ ನಮ್ಮವರ ಬಗ್ಗೆ ಸಾರಿ ಹೇಳುವ ಕಾಲ ಬಂದಿದೆ ದಯವಿಟ್ಟು ಮುಧೋಳದಲ್ಲಿ ಮುಂದೆ ಬರುವ ಯಾವುದೇ ಸಾರ್ವಜನಿಕ ಆಸ್ತಿ ಇದ್ದರೂ ಅದಕ್ಕೆ ಮೊದಲು ತಾಲೂಕಿನ ಸಾಧಕರ ಹೆಸರಿಡಲು ಆದ್ಯತೆ ಇರಲಿ...ಇದರಲ್ಲಿ ಯಾವುದೇ ಗೊಂದಲ ಬೇಡ

ಈ ಒಂದು ವಿಷಯದಲ್ಲಿ ನಾವು ನಮ್ಮ ತಾಲೂಕಿನ ರಾಜಕೀಯ ನಾಯಕರನ್ನು ಪಕ್ಷಭೇಧ ಮರೆತು ಶ್ಲಾಘಿಸಲೇಬೇಕು ಏಕೆಂದರೆ ಯಾರ ಮಾತು ಕೇಳದೆ ರನ್ನ ಗ್ರಂಥಾಲಯ, ರನ್ನ ಕ್ರೀಡಾಂಗಣ ಹೀಗೆ ಹಲವಾರು ತಾಲೂಕಿನ ಸಾರ್ವಜನಿಕ ಆಸ್ತಿಗಳಿಗೆ ನಮ್ಮವರೇ ಆದ ರನ್ನ ನ ಹೆಸರಿಟ್ಟು ಎಲ್ಲರ ಮನ ಗೆದ್ದಿದ್ದರು..ಅದೇ ರೀತಿ ಈ ಸಲ ಕೂಡ ಅಥವಾ ಮುಂಬರುವ ತಾಲೂಕಿನ ಎಲ್ಲ ಸಾರ್ವಜನಿಕ ಅಸ್ಥಿ ಗಳಿಗೆ ಸ್ಥಳೀಯರ ಹೆಸರನ್ನೇ ಇಡೋ ನಿಯಮ ಪಾಲಿಸೋದು ಸೂಕ್ತ

ಈ ನಿರ್ಧಾರಕ್ಕಾಗಿ ನಾವು ಜಾತಿ, ಧರ್ಮ ಮತ್ತು ಮತ ಬಿಟ್ಟು ನಮ್ಮ ತನಕ್ಕಾಗಿ ನಿಲ್ಲಬೇಕಾಗಿದೆ

ಸರಿ ಅನ್ನಿಸಿದ್ರೆ ಶೇರ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ


ಅನಾಮಿಕ

ನವೀನ ಹಳೆಯದು