ದಿ ವಿಲನ್, ಸ್ಯಾಂಡಲ್ವುಡ್ ಅಂಗಳದಲ್ಲಿ ಬಿರುಗಾಳಿ ಎಬ್ಬಿಸೋಕೆ ಬರ್ತಿರೋ ಬಿಗ್ ಬ್ಯಾಂಗ್ ಸಿನಿಮಾ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ದೊಡ್ಡ ಬಜೆಟ್ ಸಿನಿಮಾ ಅಂದ್ರೆ, ಅದು ದಿ ವಿಲನ್ ಅಂತ ಹೇಳಲಾಗ್ತಿದೆ. ಚಿತ್ರದ ಮೇಕಿಂಗ್ ಇತರೇ ಇಂಡಸ್ಟ್ರಿಗಳಿಗೂ ಕ್ಯೂರಿಯಾಸಿಟಿ ಹುಟ್ಟುಹಾಕಿದೆ. ಈಗಾಗಲೇ, ಚಿತ್ರದ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದ್ದು, ಮೇ ತಿಂಗಳಲ್ಲಿ ತೆರೆಗೆ ಬರೋಕೆ ಭರ್ಜರಿ ತಯಾರಿ ನಡೆಸಿದೆ. ಇನ್ನು, ದಿ ವಿಲನ್, ರಿಲೀಸ್ಗೂ ಮೊದಲೇ ದಾಖಲೆ ಬರೆದಿದೆ. ಚಿತ್ರದ ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಬಿಕರಿಯಾಗಿದೆ. ಇದು, ಸೌತ್ ಇಂಡಿಯಾದ ಇತರೇ ದಾಖಲೆಗಳನ್ನು ಉಡೀಸ್ ಮಾಡಿದ್ದು, ಹೊಸ ದಾಖಲೆ ಸೃಷ್ಠಿಸಿದೆ.
ವಿಲನ್ ಅಬ್ಬರಕ್ಕೆ ಸೌತ್ ಇಂಡಸ್ಟ್ರಿ ಗಢ- ಗಢ..!
ದಿ ವಿಲನ್ ಶೂಟಿಂಗ್ ಬರೋಬ್ಬರಿ ಒಂದು ವರ್ಷದಿಂದ ಬಿಡುವಿಲ್ಲದೇ ನಡೀತಿದೆ. ಸಿನಿಮಾದ ಶೂಟಿಂಗ್ ಕೊನೆಯ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಸಿನಿಮಾ ಕಂಪ್ಲೀಟ್ ಆಗಲಿದೆ. ಇನ್ನು, ಇದೇ ತಿಂಗಳು ಚಿತ್ರದ ಟೀಸರನ್ನು ರಿಲೀಸ್ ಮಾಡೋಕೆ ನಿರ್ದೇಶಕ ಪ್ರೇಮ್ ಭಾರಿ ಪ್ಲಾನ್ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ, ಚಿತ್ರದ ಆಡಿಯೋ ಹಕ್ಕನ್ನು ಆನಂದ್ ಆಡಿಯೋ ಖರೀದಿಸಿದ್ದು, ಭಾರಿ ಮೊತ್ತಕ್ಕೆ ರೈಟ್ಸ್ ಸೇಲ್ ಆಗಿದೆ. 1 ಕೋಟಿ 8ಲಕ್ಷ ರೂಪಾಯಿಗೆ ಚಿತ್ರ ಆಡಿಯೋ ರೈಟ್ಸ್ ಮಾರಾಟವಾಗಿದ್ದು, ದಕ್ಷಿಣ ಭಾರತದಲ್ಲೇ ಡಿಜಿಟಲ್ ಜಮಾನದಲ್ಲಿ,ಈ ಮೊತ್ತಕ್ಕೆ ಬೇರ್ಯಾವ ಚಿತ್ರದ ಆಡಿಯೋನು ಮಾರಾಟವಾಗಿಲ್ಲ.
ಆಡಿಯೋ ಮಾರ್ಕೆಟ್‌ನಲ್ಲಿ ಜೋಗಿ ಪ್ರೇಮ್ ನಂ.1
ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ಪ್ರೇಮ್ ಮಾಡಿರೋ ಪ್ರತಿ ಸಿನಿಮಾದ ಆಡಿಯೋನೂ ಆ ಕಾಲಕ್ಕೆ ದಾಖಲೆಗಳನ್ನ ಬರೆಯುತ್ತಾ ಬಂದಿವೆ.ಯಾಕೆಂದ್ರೆ, ಪ್ರೇಮ್ ಸಿನಿಮಾ ಅಂದ್ರೆ ಅಲ್ಲಿ ಮ್ಯೂಸಿಕ್ ಸಖತ್ ಸ್ಪೆಷಲ್ ಆಗಿರುತ್ತೆ. ಪ್ರೇಮ್ ಖ್ಯಾತಿಯ ಜೊತೆಗೆ ಅವ್ರ ಸ್ಪೆಷಲ್ ಮ್ಯೂಸಿಕ್ ಪಲ್ಸ್ ಅಂಟಿಕೊಂಡಿದೆ. ಇದೇ ಕಾರಣಕ್ಕೆ ಪ್ರೇಮ್ ಸಿನಿಮಾ ಅಂದ್ರೆ ಆಡಿಯೋ ಕಂಪನಿಯವರು ಸಿನಿಮಾ ಶುರುವಾಗೋದಕ್ಕೂ ಮೊದ್ಲೇ ಅವ್ರ ಹಿಂದಿರ್ತಾರೆ. ಇದೀಗ ವಿಲನ್ ಮೂಲಕ ಅದು ಮತ್ತೊಮ್ಮೆ ಸಾಬೀತಾಗಿದೆ.
ದಿ ವಿಲನ್ ಮುಂದೆ ಮಂಡಿಯೂರಿದ ಸೌಥ್ ಸ್ಟಾರ್ಸ್..!
ದಿ ವಿಲನ್ ಸಿನಿಮಾದ ಶಕ್ತಿ ಅಂದರೇ, ಚಿತ್ರದ ನಾಯಕರಾದ ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್. ಹಾಗೂ ನಿರ್ದೇಶಕ ಜೋಗಿ ಪ್ರೇಮ್. ಸ್ಯಾಂಡಲ್ವುಡ್ನ ನಂ.1 ಕಮರ್ಷಿಯಲ್ ಡೈರೆಕ್ಟರ್. ಚಿತ್ರವನ್ನು ಗೆಲ್ಲಿಸೋ ತಾಕತ್ತು, ಪ್ರೇಮ್ ನಿರ್ದೇಶನಕ್ಕಿದೆ. ಕನ್ನಡ ಚಿತ್ರರಂಗದ ಇಬ್ಬರು ಸ್ಟಾರ್ಗಳು ಒಟ್ಟಾಗಿರೋದು, ಇತರೇ ಚಿತ್ರರಂಗದ ಸ್ಟಾರ್ಗಳಿಗೂ ಭಯ ಹುಟ್ಟಿಸಿದೆ. ಸಿನಿಮಾ ಯಾವಾಗ ರಿಲೀಸ್ ಆಗುತ್ತೆ, ಗಲ್ಲಾ ಪೆಟ್ಟಿಗೆಯಲ್ಲಿ ಏನ್ ರಿಸಲ್ಟ್ ಬರಬಹುದೋ ಅಂತಾ ನರ್ವಸ್ ಆಗಿದ್ದಾರೆ. ಇದಕ್ಕೆ ಫಸ್ಟ್ ಪಂಚ್ ಅನ್ನುವಂತೆ ಸಿನಿಮಾದ ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗಿದ್ದು, ಸೌತ್ ಸ್ಟಾರ್ಗಳ ನಿದ್ದೆಗೆಡಿಸಿದೆ. ಅಲ್ದೇ, ದಕ್ಷಿಣ ಭಾರತದ ಸೆನ್ಸೇಷನಲ್ ಸ್ಟಾರ್ಗಳಾದ ಮಹೇಶ್ ಬಾಬು ಹಾಗೂ ಪವನ್ ಕಲ್ಯಾಣ್ ಸಿನಿಮಾಗಳಿಗಿಂತಲೂ ದಿ ವಿಲನ್, ದಿ ಬೆಸ್ಟ್ ಆಗಿ ಸದ್ದು ಮಾಡ್ತಿದೆ.