ಕರ್ನಾಟಕ : ರಾಜ್ಯಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. ಇತ್ತ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಬೇಕಾದ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಬಿಜೆಪಿ ಮತ್ತು ಜೆಡಿಎಸ್ ಬಿಡುಗಡೆ ಮಾಡಿದೆ.
ರಾಜ್ಯಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಕನ್ನಡಿಗರಿಗೇ ಟಿಕೆಟ್ ಕೊಡಬೇಕೆಂದು ಆಗ್ರಹಿಸಿ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಯಾನವೇ ನಡೆದಿತ್ತು, ಕಳೆದ ಬಾರಿ ವೆಂಕಯ್ಯ ಸಾಕಯ್ಯ ಎಂದು ವೆಂಕಯ್ಯ ನಾಯ್ಡು ರಾಜ್ಯಸಭೆಗೆ ಆಯ್ಕೆಯಾಗುವುದನ್ನು ಖಂಡಿಸಿ ಅಭಿಯಾನ ನಡೆದಿದ್ದು ನೆನಪಿರಬಹುದು.
ರಾಷ್ಟ್ರ ಮಟ್ಟದಲ್ಲೇ ಪ್ರಭಾವ ಬೀರುವ ಮಟ್ಟದಲ್ಲಿ ಕರ್ನಾಟಕದ ನಾಯಕತ್ವದಲ್ಲಿ ಬೆಳೆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕಕ್ಕೆ ಹೊಸ ನಾಡಧ್ವಜ ರೂಪಿಸಿ ಸುದ್ದಿಯಾಗಿದ್ದರು, ಅದೇ ರೀತಿ ಮೊದಲಿನಿಂದಲೂ ಈ ಬಾರಿ ರಾಜ್ಯಸಭೆಗೆ ಕರ್ನಾಟಕದಿಂದ ಕನ್ನಡಿಗರನ್ನೇ ಆಯ್ಕೆಮಾಡಿ ಎಂದು ಒತ್ತಾಯ ಹಾಕುತ್ತಾ ಬಂದಿದ್ದರು ಆದರೆ ಹೈಕಮಾಂಡ್ ಬೇರೆಯೇ ರಾಜ್ಯದ ನಾಯಕರಿಗೆ ಮಣೆ ಹಾಕಲು ತಯಾರಾಗಿತ್ತು. ಆದರೆ ಇದೀಗ ಕಾಂಗ್ರೆಸ್ ಹೈಕಮಾಂಡ್ಗೆ ಸೆಡ್ಡು ಹೊಡೆದು ಎಲ್ಲಾ ಮೂರೂ ಟಿಕೆಟ್ಗಳನ್ನು ಕನ್ನಡಿಗರಿಗೇ ಕೊಟ್ಟು ಸಿದ್ದರಾಮಯ್ಯ ಸೈ ಎನಿಸಿಕೊಂಡಿದ್ದಾರೆ.