ಮುಧೋಳ : ಇದು ನಮಗೆಲ್ಲ ಹೆಮ್ಮೆಯ ಮತ್ತು ಅತೀ ಖುಷಿ ಪಡುವ ವಿಚಾರ, ನಮ್ಮ ಮುಧೋಳ ದವರೆ ಆದ ಶ್ರೀ ರಮೇಶ ಹಲಗಲಿ ಅವರಿಗೆ ಅಂತರಾಷ್ಟ್ರೀಯ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಹೌದು ಜಾಗತಿಕ ಭಯೋತ್ಪಾದನೆ ವಿರುದ್ದದ ಹೋರಾಟಕ್ಕಾಗಿ ವಿಶ್ವ ನಾಯಕತ್ವ ಪ್ರಶಸ್ತಿ ಲಭಿಸಿದೆ ಈ ಪ್ರಶಸ್ತಿಯನ್ನು ಸ್ವಿಕರಿಸುತ್ತಿರುವ ಮೊದಲ ಬಾರತೀಯ ಅನ್ನೋದು ನಮ್ಮೆಲ್ಲರ ಹೆಮ್ಮೆಯ ವಿಷಯ.ಈ ಪ್ರಶಸ್ತಿಯನ್ನು ೧೮/೦೪/೨೦೧೮ ರಂದು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಂಗ್ಲೆಂಡ್ ರಾಣಿ ಎಲೆಜೆಬೆತ್ ನ್ಯುಯಾರ್ಕ್ ನಲ್ಲಿ ಪ್ರಧಾನ ಮಾಡಲಿದ್ದಾರೆ .
ರಮೇಶ ಹಲಗಲಿ ಅವರ ಬಗ್ಗೆ
ಲೆಫ್ಟಿನೆಂಟ್ ಜನರಲ್ ರಮೇಶ್ ಹಲಗಲಿ ಪರಮ ವಿಶಿಷ್ಟ ಸೇವಾ ಪದಕ ಪಿ.ವಿ.ಎಸ್.ಎಂ.ಎ.ವಿಎಸ್ ಎ.ಎಂ.ಎಸ್.ಎಂ, ಎಸ್.ಎಂ. ಆರ್ಮಿ ಸಿಬ್ಬಂದಿ, ಭಾರತೀಯ ಸೇನೆಯ ಉಪ ಮುಖ್ಯಸ್ಥರು ಆಗಿದ್ದರು ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿನ ಹಲಗಲಿ ಗ್ರಾಮದವರು. .ಹಲಗಲಿ ಅವರು ಕರ್ನಾಟಕದ ಬಿಜಾಪುರ ಜಿಲ್ಲೆಯ ಸೈನಿಕ್ ಸ್ಕೂಲ್ ಬಿಜಾಪುರದಲ್ಲಿ ಅಧ್ಯಯನ ಮಾಡಿದರು. ಹಲಗಲಿ ಅವರು ಡಿಸೆಂಬರ್ 1972 ರಲ್ಲಿ ಸಿಖ್ ಲೈಟ್ ಇನ್ಫ್ಯಾಂಟ್ರಿಯನ್ನಾಗಿ ನೇಮಿಸಲಾಯಿತು ಮತ್ತು ಮಿಲಿಟರಿ ತರಬೇತಿ ನಿರ್ದೇಶಕ ಜನರಲ್ ಆಗಿದ್ದರು, ಫೆಬ್ರವರಿ 11, 2012 ರಂದು ಅವರು ಸೇನಾ ಸಿಬ್ಬಂದಿ ಉಪ ಮುಖ್ಯಸ್ಥರಾಗಿ ನೇಮಕಗೊಂಡರು. ಲೆಫ್ಟಿನೆಂಟ್ ಜನರಲ್ ಹಲಗಲಿ ಅವರು 2009 ರ ಪಶ್ಚಿಮ ಬಂಗಾಳದಲ್ಲಿನ 70 ಎಕರೆ ಸುಕ್ನಾ ಮಿಲಿಟರಿ ನಿಲ್ದಾಣದ ಭೂ ಹಗರಣವನ್ನು ಬಯಲಿಗೆಳದಿದ್ದರು
ಪ್ರಶಸ್ತಿಗಳು
೧. ಅತೀ ವಿಶಿಷ್ಟ ಸೇವಾ ಮೆಡಲ
2. ಸೇವಾ ಮೆಡಲ