ಚಿಂಚಖಂಡಿ ಕೆ.ಡಿ.ಗ್ರಾಮದ ವೆಂಕನಗೌಡ ಪಾಟೀಲ್ ಎಂಬುವವರ ಹೊಲದಲ್ಲಿ ಬೃಹತ್ ಆಕಾರದ ಮೊಸಳೆ ಪತ್ತೆಯಾಗಿದೆ. ಇದರಿಂದ ಭಯ ಭೀತರಾದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ವಲಯ ಮಟ್ಟದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿದ್ದಾರೆ. ತಗ್ಗು ಪ್ರದೇಶದಲ್ಲಿ ಸ್ವಲ್ಪ ಇರುವ ಕೆಸರಿನ ನೀರಿನಲ್ಲಿ ಅಡಗಿರುವ ಮೊಸಳೆಯಲ್ಲಿ ಹಿಡಿಯಲು ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಬೃಹತ್ ಆಕಾರದ ಮೊಸಳೆ ಸಿಗದೇ ಕೇವಲ ಮರಿಗಳು ಮಾತ್ರ ಸೆರೆ ಹಿಡಿದರು. ಸುಮಾರು ಎಂಟು ಮರಿಗಳು ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಅವುಗಳನ್ನು ಆಲಮಟ್ಟಿ ಹಿನ್ನೀರಿನಲ್ಲಿ ಬಿಡಲಾಗಿದೆ. ಮುಧೋಳ ವಲಯದ ಅಧಿಕಾರಿ ಎಲ್ ಬಿ ದೇಶನೂರು, ಉಪ ವಲಯ ಅಧಿಕಾರಿ ಶ್ರೀಮತಿ ಪರಿಮಳಾ ಕೊಂಡಗೊಳಿ ಸೇರಿದಂತೆ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಮೊಸಳೆ ಹಿಡಿಯುವುದಕ್ಕೆ ಸಹಾಯ ಮಾಡಿದರು.