ಫೆಬ್ರುವರಿಯಲ್ಲೇ ಮುಧೋಳ ಬಸ್ ನಿಲ್ದಾಣ ಕಾರ್ಯಾರಂಭ ಮಾಡುತ್ತೆ ಅಂಥ ಹೇಳಿದ್ರು


ಬಸ್‌ ನಿಲ್ದಾಣ ನಿರ್ಮಾಣ ಕಾಮಗಾರಿ ನಿಗದಿತ ಅವಧಿಯೊಳಗೆ ಮುಗಿಯುವ ಸೂಚನೆಗಳಿಲ್ಲ.


ಮುಧೋಳ ಹಾಗೂ ಲೋಕಾಪುರದಲ್ಲಿ ಬಸ್‌ ನಿಲ್ದಾಣಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಸರಕಾರದ ಅವಧಿಯಲ್ಲಿಯೇ ಉದ್ಘಾಟಿಸುವ ಲೆಕ್ಕಾಚಾರವನ್ನು ವಾಯುವ್ಯ ಕರ್ನಾಟಕ ಸಾರಿಗೆ ನಿಗಮ ಹೊಂದಿತ್ತು. ಆದರೆ ಕೆಲ ಅಡಚಣೆಗಳ ಕಾರಣದಿಂದ ಬಸ್‌ ನಿಲ್ದಾಣ ಕಾಮಗಾರಿ ನಿರೀಕ್ಷೆಯಷ್ಟು ಮುಗಿದಿಲ್ಲ. ಇದರಿಂದ ಈ ಅವಧಿಯಲ್ಲಿಯೇ ಉದ್ಘಾಟನೆಯಾಗುವ ಸಾಧ್ಯತೆ ಕಡಿಮೆ. ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಅವರು ಮುಧೋಳದ ¸ಸ್‌ ನಿಲ್ದಾಣ ವೀಕ್ಷಣೆಗೆ ಬುಧವಾರ ಆಗಮಿಸಬೇಕಾಗಿತ್ತಾದರೂ ಕೊನೆ ಕ್ಷಣದಲ್ಲಿ ಅದು ರದ್ದಾಯಿತು.


ಜಮಖಂಡಿ ಹಾಗೂ ಮುಧೋಳಕ್ಕ ಹೊಸ ನಿಲ್ದಾಣ ಬೇಕು ಎನ್ನುವ ಬೇಡಿಕೆ ಹಲವು ವರ್ಷಗಳದ್ದು. ಪ್ರಮುಖ ವಾಣಿಜ್ಯ ಸ್ಥಳಗಳ ಜತೆಗೆ ರಾಜ್ಯ ಹಾಗೂ ಹೊರ ರಾಜ್ಯಕ್ಕೂ ಇಲ್ಲಿಂದ ಬಸ್‌ ಸಂಪರ್ಕ ಯಥೇಚ್ಛವಾಗಿದೆ. ಕೊನೆಗೆ ಜಮಖಂಡಿಯಲ್ಲಿ ಸಿಂಗಾಪೂರ ಮಾದರಿ ನಿಲ್ದಾಣ, ಮುಧೊಳ ಹಾಗೂ ಲೋಕಾಪುರದಲ್ಲಿ ನಮ್ಮದೇ ಶೈಲಿ ನಿಲ್ದಾಣಕ್ಕೆ ಕಳೆದ ವರ್ಷ ಅನುಮೋದನೆ ನೀಡಿ ಹಿಂದಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶಂಕುಸ್ಥಾಪನೆ ನೆರವೇರಿಸಿದ್ದರು. ಫಟಾಫಟ್‌ ಕಾಮಗಾರಿ ಮುಗಿಸಿ 18 ತಿಂಗಳೊಳಗೆ ಕಾಮಗಾರಿ ಮುಗಿಸಿ ಸಾರ್ವಜನಿಕ ಸೇವೆಗೆ ಬಸ್‌ ನಿಲ್ದಾಣ ನೀಡಬೇಕು ಎಂದು ಸೂಚಿಸಿದರು. ಕಾಮಗಾರಿಯೇನೋ ನಿಗದಿತ ಅವಧಿಗೆ ಅರಂಭಗೊಂಡು ಹಣ ಬಿಡುಗಡೆಯಾದರೂ ಶೇ.50ರಷ್ಟು ಕಾಮಗಾರಿ ಮುಗಿದಿಲ್ಲ. ಬರುವ ಜುಲೈವರೆಗೆ ಕಾಮಗಾರಿ ಮುಗಿಸುವ ಅವಧಿಯಿದ್ದು, ಅಷ್ಟರೊಳಗೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ ಕಾಮಗಾರಿ ವೀಕ್ಷಿಸಿದರೆ ಇನ್ನೂ ಹೆಚ್ಚಿನ ಸಮಯ ಬೇಕಾಗಬಹುದು. ಜಮಖಂಡಿಯಲ್ಲಿ ಶೇ.30, ಮುಧೋಳ ಹಾಗೂ ಲೋಕಾಪುರದಲ್ಲಿ ಶೇ.50ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದೆ.

ಟೆಂಡರ್‌ದಾರರಿಲ್ಲ

ಮುಧೋಳ ಬಸ್‌ ನಿಲ್ದಾಣವನ್ನು ಉದ್ಘಾಟಿಸಲು ಬರುತ್ತಿದ್ದೇನೆ ಎಂದು ಹಾಲಿ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಸ್ಥಳೀಯ ಅಧಿಕಾರಿಗಳಿಗೆ ಹೇಳಿದಾಗ ಗಾಬರಿಯೇ ಆಗಿದ್ದರು. ಏಕೆಂದರೆ ಬುಧವಾರ ಅವರ ಪ್ರವಾಸ ಪಟ್ಟಿ ಬಿಡುಗಡೆಯಾಗಿದ್ದು ಬಸ್‌ ನಿಲ್ದಾಣ ಉದ್ಘಾಟನೆ ಎಂದೇ. ಆದರೆ ಹಳೆ ಬಸ್‌ ನಿಲ್ದಾಣ ಧ್ವಂಸಗೊಳಿಸುವ ಟೆಂಡರ್‌ ಅನ್ನು 12ಲಕ್ಷ ರು.ಗೆ ನೀಡಲಾಗಿದ್ದು. ಯಾವುದೇ ಗುತ್ತಿಗೆದಾರರು ಈ ಮೊತ್ತಕ್ಕೆ ಮುಂದೆ ಬರುತ್ತಿಲ್ಲ. ಟೆಂಡರ್‌ ಖರೀದಿದಾರರರೇ ಇಲ್ಲದೇ ಹಳೆ ಹಾಗೂ ಹೊಸ ನಿಲ್ದಾಣ ಸಮನ್ವಯ ಹೇಗೆ ಎನ್ನುವ ಆತಂಕಕ್ಕೆ ಅಧಿಕಾರಿಗಳು ಒಳಗಾಗಿದ್ದಾರೆ. ಈಗ ಮೊತ್ತ ಕಡಿಮೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು. ಆನಂತರವೇ ಹಳೆ ನಿಲ್ದಾಣ ತೆರವು ಆಗಬಹುದು.

ಇಲ್ಲಿವರೆಗಿನ ಲೆಕ್ಕ ಮುಧೋಳ ಬಸ್ ನಿಲ್ದಾಣ ಮಾಹಿತಿ 

ಬಿಡುಗಡೆ

2.50 ಕೋಟಿ ರೂ

ಖರ್ಚು

1.25 ಕೋಟಿ 

ಲೋಕಾಪುರ ಬಸ್ ನಿಲ್ದಾಣ ಮಾಹಿತಿ

ಬಿಡುಗಡೆ

 1 ಕೋಟಿ ರೂ

ಖರ್ಚು

59 ಲಕ್ಷ ರೂ.

ನವೀನ ಹಳೆಯದು