ಕೇಂಬ್ರಿಡ್ಜ್: ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಕೇಂಬ್ರಿಡ್ಜ್ ನ ತಮ್ಮ ನಿವಾಸದಲ್ಲಿ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಇದು ವಿಜ್ಞಾನ ಲೋಕಕ್ಕೆ ನಿಜಕ್ಕೂ ಆಘಾತಕಾರಿ ಸುದ್ದಿಯಾಗಿದೆ.
ಅವರಿಗೆ 76 ವರ್ಷ ವಯಸ್ಸಾಗಿತ್ತು. ಬೌತ ಶಾಸ್ತ್ರ ವಿಜ್ಞಾನ ಕ್ಷೇತ್ರಕ್ಕೆ ಅವರು ಅಪಾರ ಕೊಡುಗೆಯನ್ನಿತ್ತಿದ್ದಾರೆ. ಸುಮಾರು 40 ವರ್ಷಗಳ ಕಾಲ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಹಾಕಿಂಗ್.
ಕ್ವಾಂಟಮ್ ಗುರುತ್ವಾಕರ್ಷಣೆ, ಕಪ್ಪು ರಂಧ್ರ (ಬ್ಲ್ಯಾಕ್ ಸ್ಪಾಟ್) ಕುರಿತಾಗಿ ನೀಡಿದ ವಿವರಣೆಯಿಂದಾಗಿ ಅವರು ಖ್ಯಾತರಾಗಿದ್ದಾರೆ. ವಿಕಲಾಂಗರಾಗಿದ್ದರೂ ಕೊನೆಗಾಲದವರೆಗೂ ಸಾಧನೆ ಮಾಡುವ ತುಡಿತ ಹೊಂದಿದ್ದ ಅಪರೂಪದ ವಿಜ್ಞಾನದ ದಿಗ್ಗಜನನ್ನು ಇಂದು ಜಗತ್ತು ಕಳೆದುಕೊಂಡಿದೆ. ಹಾಗಿದ್ದರೂ ಅವರ ಸಾಧನೆಗಳು ಇನ್ನೆಷ್ಟೋ ಪೀಳಿಗೆಗೆ ಉಪಯೋಗವಾಗಲಿದೆ.