ಶ್ರೀಶೈಲ ಜಾತ್ರೆಗೆ ವಿಶೇಷ ಬಸ್

Related image




ಬಾಗಲಕೋಟೆ: ಮಾರ್ಚ್ 18 ರಂದು ಜರುಗುವ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆಗೆ ತೆರಳಲು ಭಕ್ತಾದಿಗಳಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ಮಾರ್ಚ್ 16 ರಿಂದ 19 ರವರೆಗೆ ಜಿಲ್ಲೆಯ ಬಾಗಲಕೋಟೆ, ಜಮಖಂಡಿ, ಬಾದಾಮಿ, ಹುನಗುಂದ, ಇಳಕಲ್, ಮುಧೋಳ, ಬೀಳಗಿ ಹಾಗೂ ಗುಳೇದಗುಡ್ಡ ಘಟಕಗಳಿಂದ ಶ್ರೀಶೈಲಕ್ಕೆ ಹೋಗಿ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡಲಾಗಿದೆ.

Image may contain: sky, cloud, house and outdoorಒಂದೇ ಗುಂಪಿನಲ್ಲಿ ಕನಿಷ್ಠ 50 ಜನ ಪ್ರಯಾಣಿಕರಿದ್ದಲ್ಲಿ ಶ್ರೀಶೈಲಕ್ಕೆ ಹೋಗುವ ಮತ್ತು ಮರಳಿ ಬರುವಾಗ ನೇರವಾಗಿ ಅವರ ಊರಿನಿಂದ ಕರೆದೊಯ್ದು ಅಲ್ಲಿಗೇ ಬಿಡಲಾಗುವುದು. ಪ್ರಯಾಣಿಕರು ಇಚ್ಛಿಸಿದಲ್ಲಿ ಮಹಾ ನಂದಿ, ಮಂತ್ರಾಲಯಕ್ಕೆ ಸಾರಿಗೆ ಸೌಲಭ್ಯ ಒದಗಿಸಲಾಗುವುದು. ಸಾರ್ವ ಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಹನ ಕಾಯ್ದಿರಿಸಲು ವಿಭಾಗೀಯ ಅಧಿಕಾರಿಗಳು (ಮೊಬೈಲ್‌ ಸಂಖ್ಯೆ: 7760991752), ಘಟಕ ವ್ಯವಸ್ಥಾಪಕರು ಬಾಗಲಕೋಟೆ (7760991775), ಜಮಖಂಡಿ (7760991778), ಬಾದಾಮಿ (7760991776), ಇಳಕಲ್ (7760991777), ಮುಧೋಳ (7760991779), ಬೀಳಗಿ (7760991780) ಹಾಗೂ ಗುಳೇದಗುಡ್ಡ (7760991781) ಸಂಪರ್ಕಿಸಬಹುದು.
ನವೀನ ಹಳೆಯದು