ಕುಸ್ತಿ ಮಾಡೋಕೆ ಮಹೂರ್ತ ಮಾಡಿಕೊಂಡ ಪೈಲ್ವಾನ್


ಯುಗಾದಿಯ ಶುಭ ದಿನದಂದು ಕಿಚ್ಚ ಸುದೀಪ ಅಭಿನಯದ ಬಹುನಿರೀಕ್ಷಿತ ಸಿನಿಮಾ ಪೈಲ್ವಾನ್​​​​​​ ಸದ್ದಿಲ್ಲದೆ ಸೆಟ್ಟೇರಿದೆ. ಬ್ಲಾಕ್​ ಬಸ್ಟರ್​ ಹೆಬ್ಬುಲಿ ಸಿನಿಮಾ ನೀಡಿದ್ದ ಕಿಚ್ಚ ಸುದೀಪ ಹಾಗೂ ಕ್ಯಾಮರಾಮನ್​ ಕೃಷ್ಣ ಕಾಂಬಿನೇಷನ್​ನಲ್ಲಿ ಬರ್ತಾ ಇರೋ ಪೈಲ್ವಾನ್​​​ ಸಿನಿಮಾದ ಮೂಹೂರ್ತ ಇಂದು ನಡೆದಿದೆ. ಬೆಂಗಳೂರಿನ ರಾಗಿಗುಡ್ಡ ಆಂಜನೇಯ ದೇವಸ್ಥಾನದಲ್ಲಿ ಸರಳವಾಗಿ ನಡೆದ ಮುಹೂರ್ತ ಸಮಾರಂಭದಲ್ಲಿ ಕಿಚ್ಚ ಸುದೀಪ ಜೊತೆಗೆ ಸಿನಿಮಾ ಟೀಮ್, ಕಿಚ್ಚ ಪತ್ನಿ ಪ್ರಿಯಾ ಇದ್ರು.. ಪ್ರಿಯಾ ಸುದೀಪ ಮೊದಲ ಸೀನ್​​ಗೆ ಕ್ಲಾಪ್​ ಮಾಡಿದ್ರೆ, ಈ ಚಿತ್ರದ ನಿರ್ಮಾಪಕಿ ಸ್ವಪ್ನ ಕೃಷ್ಣ ಕ್ಯಾಮರಾ ಚಾಲನೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಕಿಚ್ಚ ಕುಸ್ತಿ ಪೈಲ್ವಾನನಾಗಿ ತೆರೆಗೆ ಬರ್ತಾ ಇರೊ ಸಿನಿಮಾ ಇದು.




ಯುಗಾದಿಯಿಂದ ಪೈಲ್ವಾನ್​​​ ಯುಗಾರಂಭ..
ಅಭಿನಯ ಚಕ್ರವರ್ತಿ ಕೆಚ್ಚೆದೆಯ ಕಿಚ್ಚ ಸುದೀಪ ಸಿನಿಮಾಕ್ಕಾಗಿ ಈಗಾಗ್ಲೆ ಸಖತ್ತಾಗಿ ವರ್ಕ್​​ಔಟ್​ ನಡೆಸಿದ್ದು. ರಿಲೀಸ್​ ಆಗಿರೋ ಪೋಸ್ಟರ್​ಗಳು ಹವಾ ಕ್ರಿಯೇಟ್​ ಮಾಡಿವೆ. ಎ ಫೈಟ್​ ಫಾರ್​ ಲೈಫ್​ ಅಂತ ಸಬ್​ಟೈಟಲ್​ ಇರೋ ಪೈಲ್ವಾನ್​ ಸಿನಿಮಾ ಸದ್ಯ ಸೆಟ್ಟೇರಿದ್ದು, ಶೀಘ್ರದಲ್ಲೇ ಸಿನಿಮಾ ಶೂಟಿಂಗ್​​ ಹಾಗೂ ಸ್ಟಾರ್​​ಕಾಸ್ಟ್​ನ ಬಗ್ಗೆ ಡಿಟೈಲ್ಸ್​ ಹೊರಬೀಳಲಿದೆ. ಆರ್​​ಆರ್​ಆರ್​ಮೋಷನ್​​ ಪಿಕ್ಚರ್ಸ್​ ಬ್ಯಾನರ್​ನಲ್ಲಿ ನಿರ್ದೇಶಕ ಕೃಷ್ಣ ತಮ್ಮ ಹೋಮ್​ ಬ್ಯಾನರ್​ನಲ್ಲಿ ನಿರ್ಮಾಣ ಮಾಡ್ತಾ ಇರೋ ಸಿನಿಮಾ ಪೈಲ್ವಾನ್​​​​. ಈ ಮೂಲಕ ಕಿಚ್ಚ ಸುದೀಪ, ಬಿಗ್​ ಸ್ಟಾರ್​​ ಜೊತೆಗೆ ಸಿನಿಮಾ ನಿರ್ಮಾಣಕ್ಕೆ ಎಂಟ್ರಿ ಕೊಡಬೇಕು ಅಂತಿದ್ದ ಕೃಷ್ಣ ಕನಸು ನನಸು ಮಾಡಿದ್ದಾರೆ

ನವೀನ ಹಳೆಯದು