ಮುಧೋಳದಲ್ಲಿಂದು ಹೆಚ್​ಡಿಕೆ ರೈತ ಪರ್ವ


ಮುಧೋಳ:ರೈತ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೆಚ್​.ಡಿ ಕುಮಾರಸ್ವಾಮಿ ಇಂದು ನಗರಕ್ಕೆ ಆಗಮಿಸಲಿದ್ದಾರೆ. ಹುಬ್ಬಳ್ಳಿಯಿಂದ ಹೆಲಿಕಾಪ್ಟರ್​​​​ ಮೂಲಕ ಬೆಳಿಗ್ಗೆ ಮುಧೋಳಕ್ಕೆ ಆಗಮಿಸಲಿರುವ ಹೆಚ್​ಡಿಕೆ, 11 ಗಂಟೆಗೆ ಮುಧೋಳ ಪಟ್ಟಣದ ಹೇಮರೆಡ್ಡಿ ಕಲ್ಯಾಣ ಪಂಟಪದಲ್ಲಿ ನಡೆಯಲಿರುವ ರೈತ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ರೈತರ ಜೊತೆ ಸಂವಾದ ನಡೆಸಲಿದ್ದಾರೆ. ಬಳಿಕ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಸಭೆ ನಡೆಸಲಿದ್ದಾರೆ. ಬಸವರಾಜ ಹೊರಟ್ಟಿ, ಎನ್.ಹೆಚ್. ಕೋನರೆಡ್ಡಿ, ಬಂಡೆಪ್ಪ ಕಾಶಂಪುರ, ಸೇರಿದಂತೆ ಹಲವು ಮುಖಂಡರು ಹೆಚ್​ಡಿಕೆಗೆ ಸಾಥ್ ನೀಡಲಿದ್ದಾರೆ.
ನವೀನ ಹಳೆಯದು