ಮುಧೋಳ : ಬಂತು ರೈಲ್ ಬಸ್ ಓದಿ ಖುಷಿ ಸುದ್ದಿ


ಮುಧೋಳ : ಹೊಸದಾಗಿ ಸಿದ್ಧವಾಗಿರುವ ಬಾಗಲಕೋಟೆ–ಖಜ್ಜಿಡೋಣಿ ನಡುವಿನ ಮಾರ್ಗದಲ್ಲಿ ಓಡಾಟಕ್ಕೆ ಬಂದಿದ್ದ ರೇಲ್‌ ಬಸ್‌ಗೆ ಚುನಾವಣೆ ನೀತಿ–ಸಂಹಿತೆಯ ಬಿಸಿ ತಾಗಿದೆ.ಬಾಗಲಕೋಟೆ–ಕುಡಚಿ ಹೊಸ ರೈಲು ಮಾರ್ಗದಲ್ಲಿ ಈಗ ಖಜ್ಜಿಡೋಣಿವರೆಗೆ ಹಳಿ ಸಿದ್ಧವಾಗಿದೆ. ಅಲ್ಲಿ ಓಡಾಟಕ್ಕೆ ನೈರುತ್ಯ ರೈಲ್ವೆ ರೇಲ್‌ಬಸ್ ಸಜ್ಜುಗೊಳಿಸಿತ್ತು. 70 ಆಸನಗಳ ಈ ಹಳಿ ಮೇಲಿನ ಬಸ್ಸನ್ನು ಚೆನ್ನೈನಿಂದ ಬಾಗಲಕೋಟೆಗೆ ತರಲಾಗಿತ್ತು.
ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ವಿಡಿಯೊ ಕಾನ್ಫರೆನ್ಸ್‌ ಮೂಲಕ ರೇಸ್ ಬಸ್ ಓಡಾಟ ಹಾಗೂ ಬಾಗಲಕೊಟೆ ರೈಲು ನಿಲ್ದಾಣದಲ್ಲಿ ಸಾರ್ವಜನಿಕರ ಬಳಕೆಗೆ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಬೇಕಿತ್ತು. ಅದಕ್ಕೆ ಅಧಿಕಾರಿಗಳು ಸಿದ್ಧತೆ ಕೂಡ ನಡೆಸಿದ್ದರು. ಆದರೆ ಚುನಾವಣೆ ನೀತಿಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚಾಲನಾ ಸಮಾರಂಭ ಮುಂದೂಡಲಾಗಿದೆ. ಹಾಗಾಗಿ ರೇಲ್‌ ಬಸ್ ಹುಬ್ಬಳ್ಳಿಗೆ ಹಿಂತಿರುಗಿದೆ.
ಹಸಿರು ನಿಶಾನೆ: ಬಾಗಲಕೋಟೆ–ಕುಡಚಿ ನಡುವಿನ ನೂತನ ರೈಲು ಮಾರ್ಗದಲ್ಲಿ ಈಗ ಸಿದ್ಧಗೊಂಡಿರುವ ಖಜ್ಜಿಡೋಣಿವರೆಗಿನ ಹಳಿಯ ಮೇಲೆ ಆರು ತಿಂಗಳ ಹಿಂದೆಯೇ ರೈಲು ಓಡಿಸಿ ಪ್ರಾಯೋಗಿಕ ಪರೀಕ್ಷೆ
...
ನವೀನ ಹಳೆಯದು