ಮುಧೋಳ : ನಾಳೆ ಅಂದ್ರೆ ಏಪ್ರಿಲ್ 13ರಂದು ಮುಧೋಳ ನಗರಕ್ಕೆ ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಮಿಸಲಿದ್ದಾರೆ.
ಬಿಜೆಪಿ ಯ ಮೊದಲ ಪಟ್ಟಿಯಲ್ಲಿ ಜಿಲ್ಲೆಯ ಮುಧೋಳ ಕ್ಷೇತ್ರದ ಗೋವಿಂದ ಕಾರಜೋಳರ ಹೆಸರು ಘೋಷಣೆಯಾಗಿದ್ದು ಮತ್ತು ಅಮಿತ್ ಶಾ ಅವರ ಭೇಟಿ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದೆ
ಬಳಿಕ ಅವರು ಶಕ್ತಿ ಕೇಂದ್ರದ ಮುಖಂಡರೊಂದಿಗೆ ಸಂವಾದ ನಡೆಸಲಿದ್ದಾರೆ
ಈ ಹಿಂದೆ ಏಪ್ರಿಲ್ 3 ರಂದು ಮುಧೋಳ ಭೇಟಿ ನಿಗದಿ ಆಗಿತ್ತು ಆದರೆ ಕಾರಣಾಂತರಗಳಿಂದ ಅದನ್ನು ಏಪ್ರಿಲ್ 13ಕ್ಕೆ ಮುಂದೊಡಲಾಗಿತ್ತು.
ಬಿಜಿಪಿ ಯ ಶಕ್ತಿ ಕೇಂದ್ರವೆಂದೇ ಕೋಟೆ ನಾಡಿನ ಮುಧೋಳ ನಗರಕ್ಕೆ ಶಾ ಅಗಮಿಸುತ್ತಿರುವುದು ಕಾರ್ಯಕರ್ತರ ಹುಮ್ಮಸ್ಸು ದ್ವಿಗುಣಗೊಳಿಸಿದೆ