ಮುಧೋಳ : ತಾಲೂಕಿನಲ್ಲಿ ಚುನಾವಣಾ ಕಾವು ತುಂಬಾನೇ ಜೋರಾಗಿದೆ ಒಂದು ಕಡೆ ಚುನಾವಣಾ ದಿನಾಂಕ ಸಮಿಪುಸುತ್ತಾ ಅಭ್ಯರ್ಥಿಗಳ ಎದೆ ಬಡಿತ ಹೊಡೆದುಕೊಳ್ಳುತ್ತಿದ್ದರೆ ಇನ್ನೊಂದೆಡೆ ಟಿಕೆಟ್ ಆಕಾಂಕ್ಷಿಗಳ ಟಿಕೆಟ್ ಘೋಷಣೆಯ ಎದೆಬಡಿತ ಹೊಡೆದುಕೊಳ್ಳುತ್ತಿತ್ತು
ಆದರೆ ಇವತ್ತು ಅದಕ್ಕೆಲ್ಲ ತೆರೆ ಬಿದ್ದಿದೆ ಕಾರಣ ಕಾಂಗ್ರೆಸ್ ಕೂಡ ಅಧಿಕೃತ ಅಭ್ಯರ್ಥಿಯ ಹೆಸರನ್ನು ಘೋಷಿಸಿದೆ, ಅದರಂತೆ ಬಿಜೆಪಿ ಮತ್ತು ಜೆಡಿಎಸ್ ಕೂಡ ಈ ಹಿಂದೇನೆ ತಮ್ಮ ಅಧಿಕೃತ ಅಭ್ಯರ್ಥಿಯನ್ನು ಘೋಷಿಸಿವೆ ಹೀಗಾಗಿ ತಾಲೂಕಿನಲ್ಲಿ ತುಂಬಾನೇ ಕುತೂಹಲ ಭರಿತ ಸ್ಪರ್ಧೆ ಅಗೋದರಲ್ಲಿ ಸಂಶಯವೇ ಇಲ್ಲ
ಇವರೇ ಅಧಿಕೃತ ಅಭ್ಯರ್ಥಿಗಳು
1. ಬಿಜೆಪಿ - ಶ್ರೀ. ಗೋವಿಂದ ಕಾರಜೋಳ
2. ಕಾಂಗ್ರೆಸ್ - ಶ್ರೀ ಸತೀಶ್ ಬಂದಿವಡ್ಡರ
3. ಜೆಡಿಎಸ್ - ಶ್ರೀ ಶಂಕರ ನಾಯ್ಕ್
ಇಂದು ಕಾಂಗ್ರೆಸನ ಬಹು ನಿರೀಕ್ಷಿತ ಪಟ್ಟಿ ಬಿಡುಗಡೆ ಆಗಿದ್ದು ನಿರೀಕ್ಷೆಯಂತೆ ಬಂದಿವಡ್ಡರ ಅವರಿಗೆ ಸಿಕ್ಕಿದ್ದು ವಿಶೇಷ.
ಗೆಲುವಿನ ನಿರೀಕ್ಷೆಯಲ್ಲಿ
ಈ ಸಲದ ಚುನಾವಣೆಯಲ್ಲಿ ಇಂತವರೆ ಗೆಲ್ಲುತ್ತಾರೆ ಅಂತ ಊಹಿಸೋದು ಅಸಾಧ್ಯ ಯಾಕಂದ್ರೆ ಪ್ರತಿ ಸಲಾದಂತೆ ಈ ಸಲ ವಾತವರನವಿಲ್ಲ. ಹೌದು ಕಾರಜೋಳರು ಕಳಂಕರಹಿತ ರಾಜಕಾರಣಿ ಹಾಗೂ ಕಳೆದ 2-3 ದಶಕಗಳಿಂದ ಶಾಸಕ ಮತ್ತು ಸಚಿವರಾಗಿ ತಾಲೂಕಿಗೆ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಹಾಗೂ.ಮೋದಿ ಅಲೆಯು ಕೂಡ ನೆರವಾಗಬಹುದು
ಸತೀಶ್ ಬಂದಿವಡ್ಡರ
ಬಂದಿವಡ್ಡರ ಹೊಸ ಮುಖ ಹೊಸ ಭರವಸೆ ಎಂಬ ನಂಬಿಕೆ ಜನರಲ್ಲಿದೆ ಯಾಕಂದ್ರೆ ಕಳೆದ ಹಲವಾರು ದಶಕಗಳಿಂದ ಸಮಾಜ ಸೇವೆ ಮತ್ತು ಕಾಂಗ್ರೆಸ್ ನ ಕಟ್ಟಾ ಕಾರ್ಯಕರ್ತರಾಗಿದ್ದು ತಾಲೂಕಿನ ಜನರ ಪ್ರೀತಿ ಗಳಿಸಿದ್ದಾರೆ ಈ ಸಲ ತಮ್ಮ ಪ್ರಥಮ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ ಮತ್ತು ಸಿದ್ದರಾಮಯ್ಯ ಅವರ ಜನಪರ ಕೆಲಸಗಳು ಅವರನ್ನು ಕೈ ಹಿಡಿಯುವಲ್ಲಿ ಸಂದೇಹವೇ ಇಲ್ಲ ಅಲ್ಲದೆ ಸಜ್ಜನ ರಾಜಕಾರಣಿಯು ಹೌದು
ಶಂಕರ್ ನಾಯ್ಕ
ಪ್ರತಿ.ಸಲಾದಂತೆ ಈ ಸಲಾನು ಜೆಡಿಎಸ್ ತನ್ನ ಮುಧೋಳ ಘಟಕದ ಅಧ್ಯಕ್ಷ್ಯರಾದ ಶಂಕರ್ ನಾಯ್ಕ ಗೆ ಟಿಕೆಟ್ ನೀಡಿದೆ. ತಾಲೂಕಿನ ಜನರಿಗೆ ಅಷ್ಟೇನೂ ಚಿರಪರಿಚಿತಲ್ಲದಿದ್ದರೂ ಕಠಿಣ ಪೈಪೋಟಿ ನೀಡುವಲ್ಲಿ ಪ್ರಬಲ ಅಭ್ಯರ್ಥಿ ಆಗಿದ್ದರೆ ಕಾರಣ ಕುಮಾರಸ್ವಾಮಿ ಅವರ ಚುನಾವಣಾ ಪ್ರಣಾಳಿಕೆಗಳು ಮತ್ತು ರೈತರ ಮೇಳ ಅವರಿಗಿರೋ ಒಲವು
ಶುಭಾಷಯಳು
ಏನೇ ಆಗಲಿ ಚುನಾವಣೆಲೆ ಗೆಲ್ಲೋದರಕ್ಕಿಂತ ಟಿಕೆಟ್ ಧಕ್ಕಿಸಿಕೊಳ್ಳೋದೇ ದೊಡ್ಡ ಹೋರಾಟ ಈ ಹೋರಾಟದಲ್ಲಿ ಗೆದ್ದ ಬಂದಿವಡ್ಡರ ಅವರಿಗೆ ಶುಭಾಶಯಗಳು. ಇನ್ನುಳಿದಂತೆ ಕಾರಜೋಳರಿಗೆ ಮತ್ತು ಶಂಕರ್ ನಾಯ್ಕ್ ಗೆ ಸ್ವ ಪಕ್ಷದಲ್ಲಿ ಪೈಪೋಟಿ ನೀಡುವವರು ಯಾರಿಲ್ಲ ಹೀಗಾಗಿ ಟಿಕೆಟ್ ನ ತೊಂದರೆ ಇಲ್ಲ. ನಮ್ಮ ಕೋರಿಕೆ ಇಷ್ಟೇ ಯಾರೇ ಗೆದ್ದರೂ ತಾಲೂಕಿನ ಅಭಿವೃದ್ಧಿ ಆಗಬೇಕು ನಮ್ಮ ತಾಲೂಕನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಬೇಕು