ಮುಧೋಳ: ಇದು ತಮ್ಮ ಕೊನೆಯ ಚುನಾವಣೆ ಎಂದು ಶಾಸಕ ಗೋವಿಂದ ಕಾರಜೋಳ ಘೋಷಿಸಿದರು.ನಗರದಲ್ಲಿ ಸೋಮವಾರ ಮಾತನಾಡಿ, "25 ವರ್ಷಗಳಿಂದ ಕ್ಷೇತ್ರದ ಜನತೆ ನನ್ನನ್ನು ಮನೆಯ ಮಗನಂತೆ ನೋಡಿಕೊಂಡಿದ್ದಾರೆ. ಅವರ ಋಣ ತೀರಿಸಲು ಈ ಜನ್ಮದಲ್ಲಿ ಸಾಧ್ಯವಿಲ್ಲ. ನಿತ್ಯ ರಾತ್ರಿ ನಾನು ಮಲಗುವಾಗ ಈ ಕ್ಷೇತ್ರದ ಜನತೆ ನನಗಾಗಿ ಮಾಡುತ್ತಿರುವ ಪರಿಶ್ರಮವನ್ನು ಸ್ಮರಿಸುತ್ತೇನೆ.
ದೇಶದಲ್ಲಿ ಈಗ ಬಿಜೆಪಿ ಅಲೆ ಇದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಬೇಕು. ಇದು ನನ್ನ ಕೊನೆಯ ಚುನಾವಣೆ. ಕೈ, ಕಾಲು, ಕಣ್ಣು ಸರಿಯಾಗಿ ಇರುವಾಗಲೇ ಚುನಾವಣೆಯಿಂದ ಹೊರಬರುತ್ತೇನೆ' ಎಂದರು.