ಟಿಕೆಟ್​ ಆಕಾಂಕ್ಷಿಯ ಜೇಬಿಗೆ ಜೇಬುಗಳ್ಳನ ಕತ್ತರಿ!


ಮುಧೋಳ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಚೋರನೊಬ್ಬ ಟಿಕೆಟ್‌ ಆಕಾಂಕ್ಷಿಯ ಜೇಬಿನಿಂದ 50ಸಾವಿರ ರೂಪಾಯಿ ಹಣ ಕದ್ದಿದ್ದಾನೆ. ಬಾಗಲಕೋಟೆ ಜಿಲ್ಲೆ ಮುಧೋಳ ನಗರದ ಹೇಮರೆಡ್ಡಿ ಮಲ್ಲಮ್ಮ ಭವನದ ಆವರಣದಲ್ಲಿ ನಡೆದ ಸಮಾವೇಶದ ವೇಳೆ ಟಿಕೆಟ್ ಆಕಾಂಕ್ಷಿ ಅಯ್ಯಪ್ಪ ಬಳ್ಳೂರ ಅವರ ಜೇಬಿನಿಂದ 50ಸಾವಿರ ರೂಪಾಯಿ ಕದಿಯಲಾಗಿದೆ. ಬೀಳಗಿ ಮತ ಕ್ಷೇತ್ರದ ಜೆಡಿಎಸ್ ಆಕಾಂಕ್ಷಿಯಾಗಿರೋ ಅಯ್ಯಪ್ಪ ಅವರ ಪೈಜಾಮಿನ ಜೇಬು ಕಟ್ ಮಾಡಿ ಹಣ ಎಗರಿಸಿದ್ದಾನೆ. ಸಮಾವೇಶ ಮುಗಿಸಿ ವೇದಿಕೆಯಿಂದ ಕೆಳಗಡೆ ಇಳಿಯುವ ವೇಳೆ ಪಿಕ್ ಪ್ಯಾಕೆಟ್ ಆಗಿರುವುದು ಅಯ್ಯಪ್ಪರ ಗಮನಕ್ಕೆ ಬಂದಿದೆ. ಆ ವೇಳೆಗಾಗಲೇ ಕಳ್ಳ ಸ್ಥಳದಿಂದ ಪರಾರಿಯಾಗಿದ್ದ.
ನವೀನ ಹಳೆಯದು