ಮುಧೋಳ :
ರಾಹುಲ್ ಗಾಂಧಿಗೆ ಪತ್ರ ಬರೆದ ಬೆಂಗಳೂರಿನ ಯುವತಿ! ವೈರಲ್ ಆಗಿರುವ ಆ ಪತ್ರದಲ್ಲೇನಿದೆ ಗೊತ್ತಾ..?
ಬೆಂಗಳೂರಿನ ಹುಡುಗಿಯೊಬ್ಬಳು ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್ ಗಾಂಧಿಯವರಿಗೆ ಬರೆದ ಪತ್ರವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ಯುವತಿ ರಾಹುಲ್ ಗಾಂಧಿಯವರಿಗೆ ನೀವು ನರೇಂದ್ರ ಮೋದಿಯವರ ಜೊತೆಗೆ ಹೋಲಿಸಲು ಯೋಗ್ಯ ವ್ಯಕ್ತಿಯೇ ಎಂಬುದನ್ನು ಪ್ರಶ್ನಿಸಿದ್ದಾಳೆ..? ಮೋದಿಯವರ ಶ್ರಮ ಹಾಗು ಸಾಧನೆಯ ಜೊತೆ ರಾಹುಲ್ ಗಾಂಧಿಯವರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿರುವ ಆಕೆ ಬರೆದಿರುವ ಪತ್ರದ ಕನ್ನಡ ಅನುವಾದ ಇಲ್ಲಿದೆ..
ಪ್ರಿಯ ರಾಹುಲ್ ಗಾಂಧಿಯವರೇ,
ಕೋಟ್ಯಂತರ ಜನ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಇಷ್ಟಪಡುತ್ತಾರೆ, ಪ್ರೀತಿಸುತ್ತಾರೆ. ಅವರನ್ನು ತಮ್ಮ ಜೀವನದ ಆದರ್ಶ ವ್ಯಕ್ತಿಯನ್ನಾಗಿ ಭಾರತೀಯರು ಸ್ವೀಕರಿಸಿದ್ದಾರೆ. ಹಲವಾರು ಜನರು ಅವರನ್ನೇ ತಮ್ಮ ರೋಲ್ ಮಾಡೆಲ್ ಗಳನ್ನಾಗಿ ಸ್ವೀಕರಿಸಿದ್ದಾರೆ. ನಿಮ್ಮನ್ನು ಎಷ್ಟು ಜನ ಭಾರತೀಯರು ರೋಲ್ ಮಾಡೆಲ್ ಆಗಿ ಸ್ವೀಕರಿಸಿದ್ದಾರೆ? ನೀವು ಎಷ್ಟು ಜನರ ಬಾಳಿಗೆ ಆದರ್ಶ ವ್ಯಕ್ತಿಯಾಗಿ ಪರಿಣಮಿಸಿದ್ದೀರಾ..?
ಇಡೀ ದೇಶ ವಂಶಪಾರಂಪರ್ಯ ರಾಜಕಾರಣವನ್ನು ತಿರಸ್ಕರಿಸಿ ನರೇಂದ್ರ ಮೋದಿಯವರನ್ನು ಪ್ರಧಾನಮಂತ್ರಿಯನ್ನಾಗಿ ಆಯ್ಕೆ ಮಾಡಿತ್ತು. ಆದರೆ ನೀವು ಇಂದು ಅದೇ ವಂಶ ಪಾರಂಪರ್ಯ ರಾಜಕಾರಣದ ಹೆಗ್ಗುರುತಾಗಿ ನಿಂತು ಕೊಂಡಿದ್ದೀರಿ. ಗಾಂಧಿ ಎನ್ನುವ ‘ಸರ್ ನೇಮ್’ ಬಿಟ್ಟರೆ ನಿಮಗೆ ಬೇರೆ ಯಾವ ಅರ್ಹತೆ ಇದೆ? ಗಾಂಧಿ ಹೆಸರನ್ನು ಹೊರತುಪಡಿಸಿ ಜೀವನದಲ್ಲಿ ನೀವು ಇದುವರೆಗೂ ಏನನ್ನು ಸಾಧಿಸಿದ್ದೀರಿ? ಹೋಗಲಿ ಗಾಂಧಿ ಹೆಸರಿನ ನಿಮ್ಮ ಪರಿವಾರದವರು ಸಾಧಿಸಿದ್ದಾದರೂ ಏನು..?
ಪ್ರತಿ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಹುಟ್ಟುಹಬ್ಬದಂದು ತಮ್ಮ ತಾಯಿಯ ಬಳಿ ತೆರಳಿ ಆಶೀರ್ವಾದವನ್ನು ಪಡೆಯುತ್ತಾರೆ. ಅಂದು ಅವರ ತಾಯಿ ಪ್ರಧಾನಿಯವರಿಗೆ ಭಗವದ್ಗೀತೆ, ರಾಮಾಯಣದಂತಹ ಮಹತ್ತರವಾದ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಸರಿಯಾದ ದಾರಿಯಲ್ಲಿ ತೆರಳುವಂತೆ ಪುತ್ರನಿಗೆ ಆಶೀರ್ವಾದ ನೀಡುತ್ತಾರೆ. ತಾವು ತಮ್ಮ ಹುಟ್ಟುಹಬ್ಬದಂದು ಎಲ್ಲಿರುತ್ತೀರಿ? ತಮ್ಮ ತಾಯಿ ತಮಗೆ ಏನು ಉಡುಗೊರೆ ನೀಡಿದ್ದಾರೆ? ತಮಗೆ ಜೀವನದಲ್ಲಿ ಮುಂದೆ ಸಾಗಲು ತಮ್ಮ ತಾಯಿಯವರು ಹೇಳಿಕೊಟ್ಟಿರುವ ದಾರಿಯಾದರೂ ಯಾವುದು..?
ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿ ಮೊದಲ ಬಾರಿ ಸಂಸತ್ತನ್ನು ಪ್ರವೇಶಿಸುವಾಗ ಸಂಸತ್ತಿನ ಮೆಟ್ಟಿಲುಗಳಿಗೆ ಶಿರಬಾಗಿ ನಮಿಸಿದರು. ಸಂಸತ್ತನ್ನು ಪ್ರಜಾಪ್ರಭುತ್ವದ ದೇಗುಲ ಎಂದು ಪ್ರಧಾನಿ ಮೋದಿ ಅವರು ಬಣ್ಣಿಸಿದ್ದರು. ಅಷ್ಟೊಂದು ಗೌರವ ಅವರಿಗೆ ಸಂಸತ್ತಿನ ಮೇಲಿದೆ. ನಿಮಗೆ ಸಂಸತ್ತಿನ ಅರ್ಥವಾದರೂ ಗೊತ್ತಾ? ಅದರ ಗೌರವ ಘನತೆ ಏನೆಂಬುದು ತಿಳಿದುಕೊಂಡಿದ್ದೀರಾ? ಸಂಸತ್ತಿಗೆ ಎಂದಾದರೂ ತಾವು ಗೌರವವನ್ನು ನೀಡಿದ್ದೀರಾ? ಸಂಸತ್ತಿನಲ್ಲಿ ಗೌರವಯುತವಾಗಿ ನಡೆದುಕೊಂಡಿದ್ದೀರಾ?
ದಶಕಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಯಾವುದೇ ಆಸ್ತಿಯನ್ನು ಸಂಪಾದಿಸಿಲ್ಲ. ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರಧಾನಮಂತ್ರಿ ಹುದ್ದೆಗೆ ಏರುವಾಗ ತಾವು ಜೀವನಪೂರ್ತಿ ಗಳಿಸಿದಂತಹ 21 ಲಕ್ಷ ಸಂಬಳದ ಮೊತ್ತವನ್ನು ಕೂಡ ಬಡ ವಿದ್ಯಾರ್ಥಿನಿಯರ ಶಿಕ್ಷಣಕ್ಕಾಗಿ ದಾನ ಮಾಡಿದ್ದರು. ನೀವು ಜೀವನದಲ್ಲಿ ಇಂತಹದ್ದು ಯಾವುದಾದರೂ ಒಂದು ಕೆಲಸವನ್ನಾದರೂ ಮಾಡಿದ್ದೀರಾ? ಇದುವರೆಗೆ ಎಷ್ಟರ ಮಟ್ಟಿಗೆ ದಾನ ಧರ್ಮವನ್ನು ಮಾಡಿದ್ದೀರಾ?
ಕೇವಲ ನಾಲ್ಕು ವರ್ಷದ ಆಡಳಿತದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆತ್ತಲೆ ಯನ್ನಾಗಿ ನಿಲ್ಲಿಸಿದ್ದಾರೆ. ನೂರಾರು ಭಯೋತ್ಪಾದಕರನ್ನು ಸದೆಬಡಿದಿದ್ದಾರೆ. ಭಾರತೀಯ ಸೈನಿಕರ ಆತ್ಮಾಭಿಮಾನವನ್ನು ಎತ್ತಿ ಹಿಡಿದಿದ್ದಾರೆ. ಭಾರತೀಯ ಸೇನೆಯನ್ನು ಆಧುನೀಕರಣಗೊಳಿಸುವತ್ತ ಮಹತ್ತರವಾದ ಹೆಜ್ಜೆ ಇಟ್ಟಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ನಂತಹ ಪಾಠಗಳನ್ನು ಪಾಕಿಸ್ತಾನಕ್ಕೆ ಕಲಿಸಿದ್ದಾರೆ. ಭಾರತೀಯ ಸೇನೆಯ ಸ್ವಾಭಿಮಾನ ಎತ್ತಿ ಹಿಡಿಯುವಂತಹ ಕೆಲಸವನ್ನು ನಿಮ್ಮ ಪರಿವಾರ ಎಂದಾದರೂ ಮಾಡಿದ್ದಕ್ಕೆ ಉದಾಹರಣೆ ನೀಡಬಲ್ಲಿರಾ? ಹೋಗಲಿ ಕಳೆದ ಹತ್ತು ವರ್ಷಗಳ ಕಾಲ ನೀವು ಭಾರತೀಯ ಸೇನೆಗೆ ಮಾಡಿದ ಸಹಾಯವಾದರೂ ಏನು? ನೆನಪಿರಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಂದ ಮೇಲೆ ಸೈನಿಕರುಗಳ ದಶಕಗಳ ಕನಸಾದ ಒ.ಆರ್.ಒ.ಪಿ ಯೋಜನೆ ಜಾರಿಗೆ ಬಂದಿದ್ದು, ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ಗಳು ಬಂದಿದ್ದು..
ಭಾರತ ಸ್ವಾತಂತ್ರ್ಯ ಪಡೆದ 70 ವರ್ಷಗಳಲ್ಲಿ ನಿಮ್ಮ ಗಾಂಧಿ ಪರಿವಾರಕ್ಕೆ ಕೇವಲ ಶೇಕಡ 30 ರಷ್ಟು ಜನರಿಗೆ ಮಾತ್ರ ಅಡುಗೆ ಅನಿಲವನ್ನು ಸಂಪರ್ಕವನ್ನು ನೀಡಲು ಸಾಧ್ಯವಾಯಿತು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇವಲ ನಾಲ್ಕು ವರ್ಷದಲ್ಲಿ ದೇಶದ ಹತ್ತು ಕೋಟಿ ಕುಟುಂಬಗಳಿಗೆ ಯಶಸ್ವಿಯಾಗಿ ಗ್ಯಾಸ್ ಸಂಪರ್ಕವನ್ನು ನೀಡಿದ್ದಾರೆ. ಯಾಕೆ ನಿಮಗೆ ಇದು ಸಾಧ್ಯವಾಗಲಿಲ್ಲ? ಮೋದಿಯವರ ಇಂತಹ ಸಾಧನೆಗಳು ನಿಮಗೆ ಕಾಣುತ್ತಿಲ್ಲವಾ..?
ಬಹುತೇಕ ಕಾನೂನುಗಳನ್ನು ಅತ್ಯಂತ ಕಠಿಣಗೊಳಿಸಿ ನಕಲಿ ದಂಧೆಗಳನ್ನು ಪ್ರಧಾನಿಯವರು ಯಶಸ್ವಿಯಾಗಿ ದಮನಗೊಳಿಸಿದ್ದಾರೆ. ಇತ್ತೀಚೆಗಷ್ಟೇ ನೀವುಗಳು ಹಿಂದೆ ಮುಂದೆ ಯೋಚಿಸದೆ ಸಾಲ ಕೊಟ್ಟಿದ್ದ ಲಲಿತ್ ಮೋದಿ, ನೀರವ್ ಮೋದಿ, ವಿಜಯ್ ಮಲ್ಯರಂತವರ ಪ್ರಕರಣಗಳು ಭಾರತದಲ್ಲಿ ಸದ್ದು ಮಾಡಿದ್ದವು. ಆದರೆ ಅದಕ್ಕೆ ಸಂಬಂಧಪಟ್ಟಂತಹ ಕಾನೂನನ್ನು ಮೋದಿಯವರು ಈಗಾಗಲೇ ಸುಗ್ರೀವಾಜ್ಞೆ ಮೂಲಕ ಬಲಪಡಿಸಿದ್ದಾರೆ. ಸುಮಾರು ಎರಡು ಸಾವಿರಕ್ಕೂ ಅಧಿಕ ಕಂಪನಿಗಳು ಬ್ಯಾಂಕ್ ಗಳಿಗೆ ಹಿಂದಿರುಗಿಸ ಬೇಕಾಗಿದ್ದ 83 ಸಾವಿರ ಕೋಟಿ ಹಣವನ್ನು ಹಿಂದಿರುಗಿಸಿವೆ. ದೇಶದಲ್ಲಿ ಇದಕ್ಕಿಂತ ದೊಡ್ಡ ಬದಲಾವಣೆ ಇನ್ನೇನು ನಿರೀಕ್ಷಿಸಲು ಸಾಧ್ಯ ಅಲ್ವಾ..?
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಂದಿಗೂ ರಾಜಕೀಯದಲ್ಲಿ ತಮ್ಮ ಕುಟುಂಬವನ್ನು ಬೆರೆಸಲಿಲ್ಲ. ಆದರೆ ನಿಮ್ಮ ಕುಟುಂಬ ಇಡೀ ಕಾಂಗ್ರೆಸ್ ಪಕ್ಷವನ್ನು ಹತೋಟಿಯಲ್ಲಿಟ್ಟುಕೊಂಡಿತ್ತು. ನಿಮ್ಮ ಸ್ವಂತ ಆಸ್ತಿಯೆಂದು ಪಕ್ಷವನ್ನು ಭಾವಿಸಿದಿರಿ. ನಿಮ್ಮ ಕುಟುಂಬ ಅಧಿಕಾರದಲ್ಲಿದ್ದಾಗ ರಾಬರ್ಟ್ ವಾದ್ರಾಗೆ ಯಾಕೆ ಅಷ್ಟೊಂದು ಸೌಲಭ್ಯವನ್ನು ಕೊಟ್ಟಿರಿ..?
ಭಾರತ-ಚೀನಾ ನಡುವಿನ ಡೋಕ್ಲಾಂ ಗಡಿ ವಿವಾದ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ನಂತರ ಶುರುವಾಗಿದ್ದಲ್ಲ. ದಶಕಗಳಿಂದಲೂ ಆ ವಿವಾದವಿದೆ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಚಾಣಾಕ್ಷ ರಾಜ ತಾಂತ್ರಿಕತೆಯಿಂದ ಚೀನಾ ಡೋಕ್ಲಾಂನಿಂದ ಕಾಲ್ಕೀಳಬೇಕಾಯಿತು. ನಿಮ್ಮ ಕುಟುಂಬಕ್ಕೆ ಯಾಕೆ ಡೋಕ್ಲಾಂ ವಿವಾದವನ್ನು ಬಗೆಹರಿಸಲು ಸಾಧ್ಯವಾಗಲಿಲ್ಲ? ಕೊನೆಯ ಪಕ್ಷ ವಿವಾದವನ್ನು ಬಗೆಹರಿಸುತ್ತಿದ್ದ ಭಾರತ ಸರ್ಕಾರದ ಜೊತೆಯೂ ನೀವೇಕೆ ನಿಲ್ಲಲಿಲ್ಲ? ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಚೀನಾ ರಾಯಭಾರಿ ಯನ್ನೇಕೆ ನೀವು ಭೇಟಿ ಮಾಡಿ ದೇಶಕ್ಕೆ ಅಪಮಾನ ಎಸಗಿದಿರಿ?
ನಾಲ್ಕು ವರ್ಷಗಳ ಅಧಿಕಾರವಧಿಯನ್ನು ಪೂರೈಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲ. ಅವರ ಮಂತ್ರಿ ಮಂಡಲದ ಇತರ ಸಚಿವರ ಮೇಲೂ ಆರೋಪಗಳಿಲ್ಲ. ಅಷ್ಟರ ಮಟ್ಟಿಗೆ ಪ್ರಾಮಾಣಿಕವಾದ ಸರ್ಕಾರವನ್ನು ನರೇಂದ್ರ ಮೋದಿಯವರು ಮುನ್ನಡೆಸುತ್ತಿದ್ದಾರೆ. ನಿಮ್ಮ ಏಳು ದಶಕಗಳ ಆಡಳಿತದಲ್ಲಿ ಒಂದೇ ಒಂದು ಅವಧಿಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡಿದ್ದನ್ನು ತೋರಿಸುವಿರಾ..?
ನಿಮ್ಮ ಪಕ್ಷದವರು ನರೇಂದ್ರ ಮೋದಿಯವರನ್ನು ಚಾಯ್ ವಾಲಾ ಎಂದು ಟೀಕಿಸಿದರು. ಚಹಾ ಮಾರುವವನು ಈ ದೇಶದ ಪ್ರಧಾನಿಯಾಗಲು ಸಾಧ್ಯವೇ ಇಲ್ಲವೆಂದು ಹೀಯಾಳಿಸಿದರು. ನರೇಂದ್ರ ಮೋದಿಯವರು ಎಲ್ಲವನ್ನು ಗೌರವದಿಂದ ಸ್ವೀಕರಿಸಿದರು. ತಾನು ಚಹಾ ಮಾರುತ್ತಿದ್ದೆ ಎಂಬುದನ್ನು ಬಹಿರಂಗವಾಗಿ ಹೇಳಿಕೊಂಡರು. ನೀವು ಹಿಂದೆ ಏನು ಮಾಡುತ್ತಿದ್ದೀರಿ ಎಂಬುದನ್ನು ಹೇಳಿಕೊಳ್ಳುವಿರಾ? ನರೇಂದ್ರ ಮೋದಿಯವರು ಪ್ರಾಮಾಣಿಕತೆಯಿಂದ ಗೌರವಯುತವಾಗಿ ಬದುಕಲು ಚಹಾ ಮಾಡುತ್ತಿದ್ದುದ್ದನ್ನು ಒಪ್ಪಿಕೊಂಡರು. ನೀವು ಹಾಗೂ ನಿಮ್ಮ ಕುಟುಂಬ ಗೌರವಯುತವಾಗಿ ಬದುಕಲು ಏನೇನು ಮಾಡಿದ್ದೀರಿ ಎಂಬುದನ್ನು ದೇಶದ ಮುಂದೆ ಹೇಳುವಿರಾ..?
ರಾತ್ರೋರಾತ್ರಿ ನೋಟ್ ಬ್ಯಾನ್ ಮಾಡಿ ಕಳ್ಳಕಾಕರ ಬೆಂಡೆತ್ತಿದ್ದು ಇದೇ ಮೋದಿಯವರು. ನಕಲಿ ದಂಧೆಗಳನ್ನು ಮಟ್ಟ ಹಾಕುತ್ತಿರುವುದು ಇದೇ ಮೋದಿಯವರು. ಅದು ಸರ್ಜಿಕಲ್ ಸ್ಟ್ರೈಕ್ ಇರಲಿ, ನೋಟ್ ಬ್ಯಾನ್ ಇರಲಿ. ಜಿಎಸ್ಟಿ ಇರಲಿ, ಗೋಹತ್ಯೆ ನಿಷೇಧವೇ ಆಗಿರಲಿ. ತ್ರಿಬಲ್ ತಲಾಖ್ ನಿಷೇಧವೇ ಆಗಿರಲಿ ಅಥವಾ ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಕಾಮುಕರಿಗೆ ಗಲ್ಲು ಶಿಕ್ಷೆ ಘೋಷಿಸಿದ್ದೆ ಆಗಲೀ. ಮೋದಿಯವರಂತೆ ಇಂತಹ ಕಠಿಣ ನಿರ್ಧಾರಗಳನ್ನು ಖಡಕ್ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮ್ಮ ಸರಕಾರಗಳಿಗೇಕೆ ಸಾಧ್ಯವಾಗಲಿಲ್ಲ..?
ಪ್ರಧಾನಿ ನರೇಂದ್ರ ಮೋದಿಯವರು ಬೇರೆ ಬೇರೆ ದೇಶಗಳಿಗೆ ಭಾರತದ ಸಾಮರ್ಥ್ಯವನ್ನು ಹೆಚ್ಚಿಸಲು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಭೇಟಿ ನೀಡುತ್ತಿದ್ದಾರೆ. ಅವರ ಪ್ರತಿ ವಿದೇಶ ಪ್ರವಾಸದಿಂದಲೂ ದೇಶಕ್ಕೆ ಸಾವಿರಾರು ಕೋಟಿ ರೂಪಾಯಿಗಳ ಬಂಡವಾಳ ಹರಿದು ಬರುತ್ತಿದೆ. ದೇಶಕ್ಕೆ ಉಪಯೋಗವಾಗುತ್ತಿದೆ. ತಾವು ಕೂಡ ಆಗಾಗ್ಗೆ ವಿದೇಶ ಪ್ರವಾಸಕ್ಕೆ ಹೋಗುತ್ತೀರಿ. ನಿಮ್ಮ ಕುಟುಂಬವೂ ವಿದೇಶವನ್ನು ಸುತ್ತುತ್ತಿರುತ್ತದೆ. ಅದರಿಂದ ದೇಶಕ್ಕೆ ಏನು ಲಾಭವಿದೆ? ಯಾವ ಉದ್ದೇಶಕ್ಕಾಗಿ ನೀವು ವಿದೇಶ ಪ್ರವಾಸಗಳನ್ನು ಮಾಡುತ್ತೀರಿ ಎಂಬುದನ್ನು ತಿಳಿಸುವಿರಾ..
ಕೇವಲ ನಾಲ್ಕು ವರ್ಷದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನ ಧನ ಯೋಜನೆಯಲ್ಲಿ ನಲವತ್ತು ಕೋಟಿಗೂ ಅಧಿಕ ಬ್ಯಾಂಕ್ ಖಾತೆಗಳನ್ನು ತೆರೆದು ಇತಿಹಾಸ ಸೃಷ್ಟಿಸಿದ್ದಾರೆ. ಎಪ್ಪತ್ತು ವರ್ಷಗಳಲ್ಲಿ ನಮ್ಮ ದೇಶವನ್ನಾಳಿದ ನಿಮಗೆ ಸಾಧ್ಯವಾಗದ ಕೆಲಸವನ್ನು ನರೇಂದ್ರ ಮೋದಿಯವರು ಮಾಡಿದ್ದಾರೆ. ಇಂದು ಪ್ರತಿಯೊಬ್ಬರು ಬ್ಯಾಂಕ್ ಗೆ ತೆರಳುತ್ತಿದ್ದಾರೆ. ಯಾಕೆ ನಿಮಗೆ ಈ ಕೆಲಸಗಳು ಮಾಡಲು ಸಾಧ್ಯವಾಗಲಿಲ್ಲ..? ಹೆಣ್ಣು ಮಕ್ಕಳನ್ನು ರಕ್ಷಿಸಲು ಭೇಟಿ ಬಚಾವೋ ಭೇಟಿ ಪಡಾವೋ ಯೋಜನೆಯಡಿಯಲ್ಲಿ ಹಲವಾರು ಕ್ರಮಗಳನ್ನು ಪ್ರಧಾನಿ ಮೋದಿಯವರು ಕೈಗೊಂಡಿದ್ದಾರೆ. ಹೆಣ್ಣು ಮಕ್ಕಳ ರಕ್ಷಣೆಗಾಗಿ ತಾವು ಏನೇನೆಲ್ಲ ಕ್ರಮಗಳನ್ನು ಕೈಗೊಂಡಿದ್ದೀರಿ ದೇಶದ ಮುಂದೆ ಸ್ವಲ್ಪ ವಿವರಿಸುವಿರಾ ರಾಹುಲ್ ಅವರೇ..?
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮುದ್ರಾ ಯೋಜನೆಯಡಿಯಲ್ಲಿ ಇಂದು ಲಕ್ಷಾಂತರ ಜನರು ಸಾಲ ಪಡೆದು ಸ್ವ ಉದ್ಯೋಗಗಳನ್ನು ಸೃಷ್ಟಿಸಿಕೊಂಡು ತಮ್ಮ ಜೀವನವನ್ನು ಸ್ವಾವಲಂಬನೆಯಿಂದ ಸಾಗಿಸುತ್ತಿದ್ದಾರೆ. ಮೋದಿಯವರು ಜನಸುರಕ್ಷಾ, ಅಟಲ್ ಪೆನ್ಷನ್ ನಂತಹ ಲೈಫ್ ಇನ್ಸೂರೆನ್ಸ್ ಗಳು ಇಂದು ಕೋಟ್ಯಂತರ ಜನರಿಗೆ ಉಪಯೋಗವಾಗುತ್ತಿವೆ. ಜೀವನಕ್ಕೊಂದು ಭದ್ರತೆಯನ್ನು ಒದಗಿಸಿದೆ. ನಿಮ್ಮ ಸರ್ಕಾರಗಳು ಇಂತಹ ಯೋಜನೆಗಳನ್ನು ಜಾರಿಗೊಳಿಸಿದ್ದಕ್ಕೆ ಉದಾಹರಣೆ ನೀಡುವಿರಾ? ಭಾರತೀಯ ಸೇನೆ ಹಾಗೂ ಸೈನಿಕರ ಗೌರವವನ್ನು ರಕ್ಷಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಲವಾರು ದಿಟ್ಟ ಕ್ರಮಗಳನ್ನು ಕೈಗೊಂಡರು. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪಾಕಿಸ್ತಾನ, ಬರ್ಮಾ, ಭೂತಾನ್ ಗಡಿರೇಖೆಯನ್ನು ದಾಟಿ ಸರ್ಜಿಕಲ್ ಸ್ಟ್ರೈಕ್ ಅನ್ನು ಕೈಗೊಂಡೆವು. ಇಂತಹ ಅದೆಷ್ಟು ಪ್ರಯತ್ನಗಳನ್ನು ನೀವು ಮಾಡಿದ್ದೀರಿ..?
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಾಯಕತ್ವ ಹಾಗೂ ಕೆಲಸವನ್ನು ಗೌರವಿಸಿ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ, ಶ್ರೀಲಂಕಾ, ಅಫ್ಘಾನಿಸ್ತಾನ, ನೇಪಾಳ, ಜಪಾನ್ ರಾಷ್ಟ್ರಗಳು ತಮ್ಮ ದೇಶದ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡಲು ಆಹ್ವಾನಿಸಿದವು. ಎಷ್ಟು ರಾಷ್ಟ್ರಗಳು ನಿಮ್ಮನ್ನು ತಮ್ಮ ದೇಶಕ್ಕೆ ಬನ್ನಿ ಎಂದು ಆಹ್ವಾನಿಸಿವೆ..?
ಕೇವಲ ನಾಲ್ಕು ವರ್ಷದಲ್ಲಿ ಭಾರತದ ಪ್ರಧಾನ ಮಂತ್ರಿಯವರು ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು. ಟೈಮ್ಸ್ ಓದುಗರ ವರ್ಷದ ವ್ಯಕ್ತಿಯಾಗಿ ನಮ್ಮ ಪ್ರಧಾನ ಮಂತ್ರಿಯವರು ಹೊರಹೊಮ್ಮಿದ್ದರು. ವಿಶ್ವದ ಮೂರು ಪ್ರಮುಖ ಮುಸಲ್ಮಾನ ರಾಷ್ಟ್ರಗಳು ನಮ್ಮ ಪ್ರಧಾನ ಮಂತ್ರಿಯವರಿಗೆ ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿವೆ. ಇಸ್ರೇಲ್ ಹಾಗೂ ಸಿಂಗಾಪುರ ತಮ್ಮ ರಾಷ್ಟ್ರದ ವಿಶೇಷ ಹೂವಿನ ತಳಿಗಳಿಗೆ ಮೋದಿಯವರ ಹೆಸರಿಟ್ಟಿವೆ. ಅನೇಕ ರಾಷ್ಟ್ರಗಳ ಪ್ರಧಾನ ಮಂತ್ರಿಗಳು ಖುದ್ದು ವಿಮಾನ ನಿಲ್ದಾಣಕ್ಕೆ ಬಂದು ಇಂದು ಮೋದಿಯವರನ್ನು ಸ್ವಾಗತಿಸುತ್ತಿವೆ. ಇವುಗಳು ಕೇವಲ ನರೇಂದ್ರ ಮೋದಿಯವರಿಗೆ ಜಗತ್ತು ನೀಡುತ್ತಿರುವ ಗೌರವಕ್ಕೆ ಉದಾಹರಣೆಯಷ್ಟೇ. ತಾವು ಇಂತಹ ಯಾವುದಾದರೊಂದು ಗೌರವವನ್ನು ಬೇರೆ ದೇಶಗಳಿಂದ ಪಡೆದಿದ್ದೀರಾ?
ನಿಮ್ಮ ಸರ್ಕಾರಗಳಿಗೆ 70 ವರ್ಷಗಳಾದರೂ ದೇಶದ ಪ್ರತಿಯೊಂದು ಹಳ್ಳಿಗಳಿಗೂ ವಿದ್ಯುತ್ತನ್ನು ತಲುಪಿಸಲು ಸಾಧ್ಯವಾಗಲಿಲ್ಲ/ ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇವಲ ಸಾವಿರ ದಿನದ ಒಳಗಾಗಿ ದೇಶದ ಹದಿನೆಂಟು ಸಾವಿರ ಹಳ್ಳಿಗಳಿಗೆ ವಿದ್ಯುತ್ತನ್ನು ತಲುಪಿಸಿ ತಾವು ಕೊಟ್ಟ ಮಾತಿನಂತೆ ನಡೆದುಕೊಂಡರು. ಎಪ್ಪತ್ತು ವರ್ಷಗಳನ್ನು ನಿಮಗೆ ನೀಡಿದರೂ ದೇಶದ ಹಳ್ಳಿ ಹಳ್ಳಿಗಳಿಗೆ ವಿದ್ಯುತ್ ಅನ್ನು ತಲುಪಿಸಲಾಗಿದ್ದು ನಿಮ್ಮ ವೈಫಲ್ಯತೆಗೆ ಸಾಕ್ಷಿಯಲ್ಲವೇ..?
ಅಮೆರಿಕದ ಮ್ಯಾಡಿಸನ್ ಸ್ಕ್ವೇರ್ ನಲ್ಲಿ 22 ಸಾವಿರ ಜನರ ಎದುರು ಭಾರತ ಭಿಕ್ಷುಕರು ಹಾಗೂ ಹಾವಾಡಿಗರ ರಾಷ್ಟ್ರವಲ್ಲ. ನಾವು ಜಗತ್ತನ್ನು ಆಳುವ ತಾಕತ್ತನ್ನು ಹೊಂದಿರುವಂತಹವರ ರಾಷ್ಟ್ರ ಎಂಬುದನ್ನು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಗಂಟಾಘೋಷವಾಗಿ ಸಾರಿ ಹೇಳಿದರು. ಪ್ರತಿಯೊಂದು ರಾಷ್ಟ್ರಕ್ಕೂ ಮೋದಿ ತೆರಳಿದಾಗ ಈ ಇಪ್ಪತ್ತೊಂದನೇ ಶತಮಾನವೇನಿದ್ದರೂ ನಮ್ಮ ಭಾರತಕ್ಕೆ ಸೇರಿದ್ದು ಎಂದು ಧೈರ್ಯದಿಂದ ಹೇಳುತ್ತಾರೆ. ಸದಾ ಅಪಹಾಸ್ಯಕ್ಕೆ ಒಳಗಾಗುವಂತಹ ಹೇಳಿಕೆ ನೀಡುವ ನಿಮಗೆ ಇಂತಹ ಒಂದು ಭರವಸೆಯ ಮಾತನ್ನು ಹೇಳುವ ತಾಕತ್ತಿದೆಯಾ..?
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರತಿದಿನ ಹದಿನೆಂಟು ಗಂಟೆಗೂ ಅಧಿಕ ಕಾಲ ಕೆಲಸವನ್ನು ಮಾಡುತ್ತಾರೆ. ಸಮಯವನ್ನು ಉಳಿಸಲು ರಾತ್ರಿಯ ವೇಳೆ ಪ್ರಯಾಣಿಸುತ್ತಾರೆ. ವಿದೇಶದ ಹೋಟೆಲ್ ಗಳಲ್ಲಿ ಉಳಿಯುವ ಬದಲು ರಾತ್ರಿ ವೇಳೆ ಪ್ರಯಾಣಿಸಿದ ಅದೆಷ್ಟೋ ನಿದರ್ಶನಗಳಿವೆ. ನೀವು ದೇಶಕ್ಕಾಗಿ ಇಂತಹ ಒಂದಾದರೂ ಒಂದು ಕೆಲಸಗಳನ್ನು ಮಾಡಿದ್ದೀರಾ?
ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಯಾವುದೇ ರಾಜಕೀಯ ಹಿನ್ನೆಲೆ ಇರಲಿಲ್ಲ. ತಮ್ಮ ಪರಿಶ್ರಮ, ದೃಢ ಸಂಕಲ್ಪ, ಶ್ರದ್ಧೆಯಿಂದಾಗಿ ಇಂದು ಭಾರತದ ಪ್ರಧಾನ ಮಂತ್ರಿಯಂತಹ ಉನ್ನತ ಸ್ಥಾನಕ್ಕೆ ಏರಿದ್ದಾರೆ. ನೀವು ಗಾಂಧಿ ಎನ್ನುವ ಸರ್ ನೇಮ್ ಅನ್ನು ಬದಿಗಿಟ್ಟು ಯೋಚಿಸುವಿರಾ? ನರೇಂದ್ರ ಮೋದಿ ಅವರಷ್ಟು ಕಠಿಣ ಪರಿಶ್ರಮ ಪ್ರದರ್ಶಿಸಲು ನಿಮಗೆ ಸಾಧ್ಯವೇ? ಯಾವ ದೃಷ್ಟಿಯಲ್ಲಿ ನೋಡಿದರೂ ನೀವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಹೊಂದಾಣಿಕೆಯಾಗಲು ಸಾಧ್ಯವೇ ಇಲ್ಲ ಅಲ್ಲವಾ?
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮಗೆ ಕೇವಲ ಹದಿನೆಂಟು ವರ್ಷ ವಯಸ್ಸಿದ್ದಾಗ ತಮ್ಮ ಕುಟುಂಬವನ್ನು ತೊರೆದು ದೇಶ ಸಂಚಾರಕ್ಕೆ ಹೊರಟರು. ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸೇರಿ ದೇಶ ಭಕ್ತಿಯ ಪಾಠವನ್ನು ಕಲಿತರು. ಅಷ್ಟೊಂದು ಚಿಕ್ಕ ವಯಸ್ಸಿನಲ್ಲಿಯೇ ದೇಶಕ್ಕಾಗಿ ತನ್ನನ್ನು ತಾನು ಸಮರ್ಪಿಸಿಕೊಳ್ಳಲು ನಿರ್ಧರಿಸಿದರು. ತಾವು ಹದಿನೆಂಟು ವರ್ಷದಲ್ಲಿ ಏನು ಮಾಡುತ್ತಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳುವಿರಾ..? ಅಮೇರಿಕಾದ ಏರ್ ಪೋರ್ಟ್ ನಲ್ಲಿ ಡ್ರಗ್ಸ್ ಜೊತೆ ಸಿಕ್ಕಿಹಾಕಿಕೊಂಡಿದ್ದ ಯುವಕ ಯಾರೆಂಬುದನ್ನ ರಾಷ್ಟ್ರಕ್ಕೆ ತಿಳಿಸುವಿರಾ? ರಾಷ್ಟ್ರದ ಬಹುತೇಕ ಜನರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಂತೆ ಆಗಬೇಕು, ಅವರಂತೆ ಸಾಧಿಸಬೇಕು, ಅವರಂತೆ ಜೀವನದಲ್ಲಿ ಎತ್ತರಕ್ಕೆ ಬೆಳೆಯಬೇಕೆಂದು ಕನಸು ಕಾಣುತ್ತಾರೆ. ಎಷ್ಟು ಜನ ಭಾರತೀಯರು ನಿಮ್ಮಂತೆ ಆಗಲು ಬಯಸುತ್ತಾರೆ ಎಂಬುದರ ಅರಿವಿದೆಯೇ ನಿಮಗೆ?
ಹೇಳುತ್ತಾ ಹೋದರೆ ಇಂತಹ ಸಾವಿರ ಸಂಗತಿಗಳನ್ನು ನರೇಂದ್ರ ಮೋದಿಯವರ ಬಗ್ಗೆ ಹೇಳಬಹುದು. ಅವರು ಕೇವಲ ನಾಲ್ಕು ವರ್ಷಗಳಲ್ಲಿ ಸಾಧಿಸಿರುವ ಸಾಧನೆಗಳ ಪಟ್ಟಿಯನ್ನು ನೀಡಬಹುದು. ಇಡೀ ದೇಶದ ವಿರೋಧ ಪಕ್ಷಗಳ ನಾಯಕರುಗಳು, ಮಾಧ್ಯಮಗಳು ಅವರ ಬೆನ್ನ ಹಿಂದೆ ಬಿದ್ದರೂ ಅವರನ್ನು ಎಲ್ಲಿಯೂ ಸಿಕ್ಕಿ ಹಾಕಿಸಲು ಸಾಧ್ಯವಾಗಿಲ್ಲ. ಸುಮಾರು ಹದಿನೆಂಟು ವರ್ಷಗಳಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿಯವರ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಅಷ್ಟರ ಮಟ್ಟಿಗೆ ಶುದ್ಧ ಹಸ್ತ, ನಿಷ್ಕಳಂಕ ರಾಜಕಾರಣಿ ಅವರು. ಅಂತಹ ರಾಜಕಾರಣಿಯ ಕುರಿತು ಕೀಳು ಮಟ್ಟದಲ್ಲಿ ಬಾಯಿಗೆ ಬಂದ ಹಾಗೆ ಮಾತನಾಡುವಾಗ ಸ್ವಲ್ಪವಾದರೂ ಎಚ್ಚರಿಕೆಯಿಂದ ಇರಬಾರದೇ?
ಇಡೀ ದೇಶದ ಆಶಾಕಿರಣ ಅವರು. ಇಡೀ ದೇಶದ ಯುವಕರ ನೆಚ್ಚಿನ ನಾಯಕ ಅವರು. ದೇಶದ ಜನ ಆರಾಧಿಸುವ ರಾಜಕೀಯ ನೇತಾರ ಅವರು. ಇಡೀ ವಿಶ್ವ ಇಂದು ಅವರನ್ನು ಗೌರವದಿಂದ ಕಾಣುತ್ತಿದೆ. ಅವರಿಂದಾಗಿ ಭಾರತದ ಶ್ರೇಷ್ಠತೆ- ಗೌರವ ಮರಳಿ ಬರುತ್ತಿದೆ. ಜಗತ್ತಿನ ಮೂಲೆ- ಮೂಲೆಯಲ್ಲಿರುವ ಭಾರತೀಯರು ಇಂದು ಹೆಮ್ಮೆಯಿಂದ ತಾನೊಬ್ಬ ಭಾರತೀಯ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ದೇಶ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅಭಿವೃದ್ಧಿ ಸಾಧಿಸುತ್ತಿದೆ. ಸೇನೆ ಬಲಗೊಳ್ಳುತ್ತಿದೆ. ದೇಶದ ಜನರ ಆತ್ಮವಿಶ್ವಾಸ ಹೆಚ್ಚುತ್ತಿದೆ. ಮೂಲ ಸೌಕರ್ಯಗಳು ಅಭಿವೃದ್ಧಿಯಾಗುತ್ತಿವೆ. ನೂರಾರು ಯೋಜನೆಗಳು ಬರುತ್ತಿವೆ. ರಸ್ತೆಗಳು, ಬ್ರಿಡ್ಜ್ ಗಳು, ಹೈವೇಗಳ ಅಭಿವೃದ್ಧಿಯಲ್ಲಿ ಅತ್ಯಂತ ವೇಗವಾಗಿ ಮುನ್ನಡೆಯುತ್ತಿದೆ. ಸಮರ್ಥ ನಾಯಕನ ಕೈಯಲ್ಲಿ ಭಾರತ ವಿಶ್ವ ಗುರು ಆಗುವತ್ತ ಹೆಜ್ಜೆ ಇಡುತ್ತಿದೆ. ದೇಶದ ಕೋಟಿ ಕೋಟಿ ಜನರ ಕನಸುಗಳು ಒಂದೊಂದಾಗಿ ಈಡೇರುತ್ತಿವೆ. ಎಪ್ಪತ್ತು ವರ್ಷಗಳಲ್ಲಿ ನಿಮಗೆ ಸಾಧಿಸಲಾಗದ್ದನ್ನು ಮೋದಿಯವರು ಕೆಲವೇ ವರ್ಷಗಳಲ್ಲಿ ಸಾಧಿಸುವ ಸಂಕಲ್ಪ ಮಾಡಿ ಸಾಗುತ್ತಿದ್ದಾರೆ. ಅವರೊಂದಿಗೆ ಇಡೀ ದೇಶ ಹೆಜ್ಜೆ ಹಾಕುತ್ತಿದೆ, ಆದರೆ ನಿಮ್ಮಂತಹ ಕೆಲವೊಂದಿಷ್ಟು ಜನರನ್ನು ಬಿಟ್ಟು.
ನೆನಪಿರಲಿ ರಾಹುಲ್ ಗಾಂಧಿಯವರೇ. ದೇಶವನ್ನು ಆಳಲು ಕೇವಲ ಗಾಂಧಿ ಎನ್ನುವ ಹೆಸರೊಂದಿದ್ದರೆ ಸಾಲದು. ನಾಯಕತ್ವ ಗುಣ ಬೇಕು. ಇಡೀ ದೇಶವನ್ನು ಮುನ್ನಡೆಸುವ ಶಕ್ತಿ ಇರಬೇಕು. ಬದ್ಧತೆ ಇರಬೇಕು. ಕಠಿಣ ಪರಿಶ್ರಮದ ಜೊತೆ ರಾಷ್ಟ್ರದ ಕುರಿತು ಚಿಂತನೆ ಇರಬೇಕು. ಅವೆಲ್ಲವೂ ನಮಗೆ ನರೇಂದ್ರ ಮೋದಿಯವರಲ್ಲಿ ಕಾಣುತ್ತಿವೆ. ನಿಮ್ಮಂತಹ ಸಾವಿರ ಜನರು ಬಂದರೂ ನಾವು ನರೇಂದ್ರ ಮೋದಿ ಅವರನ್ನು ಬಿಟ್ಟು ಇರಲಾರೆವು..
ಜೈ ಹಿಂದ್!!