ಮುಧೋಳ : ಎಲ್ಲಿ ನೋಡಿದರೂ ಕಾರುಗಳು, ಬಸ್ಸುಗಳು, ಟ್ರಕ್ಕುಗಳು,ಟ್ರಾಕ್ಟರಗಳು,ದ್ವಿಚಕ್ರ ವಾಹನಗಳು,ನಾನಾ ಬಗೆಯ ವೇಹಿಕಲಗಳು ಸದಾ ಜನದಟ್ಟನೆಯಿಂದ ಗಿಜುಗೀಳುವ ರಸ್ತೆಗಳು ಅಬ್ಬಾ..!!! ಟ್ರಾಫಿಕ್ ಜಾಮ್ ಟ್ರಾಫಿಕ್ ಜಾಮ್..!
ಹೌದು,ನಾವು ಹೇಳತಾ ಇರೋದು ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಸಿಟಿ ಬಗ್ಗೆ ಅನ್ಕೋಬೇಡಿ..! ನಾವು ಹೇಳ್ತಾ ಇರೋದು ಬಾಗಲಕೋಟ ಜಿಲ್ಲೆಯ ಬೃಹತ್ ನಗರ,ತಾಲೂಕಾ ಕೇಂದ್ರ ಮುಧೋಳ ಬಗ್ಗೆ..ಹೌದು ಜಿಲ್ಲೆಯ ಬೃಹತ್ ವಾಣಿಜ್ಯ ನಗರಗಳಲ್ಲೊಂದಾದ ಮುಧೋಳದಲ್ಲಿ ಇತ್ತೀಚೆಗೆ ದಿನ ಬೆಳಗಾದರೆ ಸಾಕು ಟ್ರಾಫಿಕ್ ಕಿರಿಕಿರಿ.ಬೆಳಗಾವಿ-ವಿಜಯಪುರ ರಾಜ್ಯ ಹೆದ್ದಾರಿಯಲ್ಲಿ ಮುಧೋಳ ನಗರದ ರನ್ನ ಕ್ರೀಡಾಂಗಣದಿಂದ ಹಿಡಿದು ಶಿವಾಜಿ ಸರ್ಕಲ್,ಜಗಜ್ಯೋತಿ ಬಸವೇಶ್ವರ ವೃತ್ತ,ಕೇಂದ್ರ ಬಸ್ ನಿಲ್ದಾಣ, ಶೂರ ಸಂಗೊಳ್ಳಿ ರಾಯಣ್ಣ ಸರ್ಕಲ್,ನಿರಾಣಿ ಶುಗರ್ಸ್ ವರೆಗೂ ಟ್ರಾಫಿಕ್ ಕಿರಿಕಿರಿ ತಪ್ಪಿಸಿ ಸಂಚಾರ ಸುಗಮ ಮಾಡಲು ದಿನಂಪ್ರತಿ ಪೊಲೀಸರು ಹರಸಾಹಸವನ್ನೇ ಪಡುತ್ತಾರೆ.
ಮುಧೋಳ ನಗರದ ಟ್ರಾಫಿಕ್ ಜಾಮ್ ತಪ್ಪಿಸಲು,ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಪೊಲೀಸರ ಜೊತೆ ಕೈಜೋಡಿಸಿದವರರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಯ ಕಾರ್ಯಕರ್ತರು.
ಹೌದು,ಮುಧೋಳ ನಗರದಲ್ಲಿ ಇಂದು ರಸ್ತೆಯಲ್ಲಿನ ವಾಹನ ದಟ್ಟನೆ ತಡೆಯಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಧೋಳ ಘಟಕದ ಕಾರ್ಯಕರ್ತರು ರಸ್ತೆಗಳಲ್ಲಿನ ಬ್ಯಾರಿಕೇಡಗಳನ್ನು ಸರಿಪಡಿಸಿದರು,ಬ್ಯಾರಿಕೆಡಗಳಿಗೆ ಕೆಂಪು ಬಣ್ಣದ ರಿಬ್ಬನ್ ಕಟ್ಟುವ ಮುಖಾಂತರ ಜನದಟ್ಟನೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ABVP ಘಟಕದ ಕಾರ್ಯಕ್ಕೆ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು, ಜೊತೆಗೆ ಎಲ್ಲೆಡೆ ABVP ಮುಧೋಳ ಘಟಕದ ಕಾರ್ಯಕರ್ತರ ಈ ಕಾರ್ಯಕ್ಕೆ ಗುಣಗಾನ ಮಾಡಿದ್ದಾರೆ.
ABVP ತಾಲೂಕು ಸಂಚಾಲಕ ಶಿವು ಕಾಂಬಳೆ,ಸಾಗರ ರಜಪೂತ,ಕಲ್ಲಪ್ಪಾ ಬಾರಕಿ,ವೇಂಕಟೆಶ ಕಾಂಬಳೆ,ವೈಭವ ಪಿಸೆ,ಮಹಾಂತೇಶ ಸೇರಿದಂತೆ ಅನೇಕ ಕಾರ್ಯಕರ್ತರು ಈ ಕಾರ್ಯಕ್ಕೆ ಕೈ ಜೋಡಿಸಿದರು.