ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಕೆನ್ನುವರು ಓದಿ


ಇಷ್ಟೆಲ್ಲ ಮಾತಾಡೋ ಇವರುಗಳು ಉತ್ತರ ಕರ್ನಾಟಕ್ಕಾಗಿ ಮತ್ತು ಅದರ ಅಭಿವೃದ್ದಿಗಾಗಿ ಒಂದಿನಾ ನೂ ಹೋರಾಟ ಮಾಡಿದ್ದು ಕಾಣೆ ಅಥವಾ ಅಭಿವೃದ್ದಿ ಬಗ್ಗೆ ಅಸಮಧಾನ ಹೊರ ಹಾಕಿದ್ರು ಎರಡೇ ದಿನದಲ್ಲಿ ಸೈಲೆಂಟ್ ಆಗ್ತಾರೆ ಯಾಕಂದ್ರೆ ಇವರು ಹೈಕಮಾಂಡ್ ನ ಚೇಲಾಗಳು

ಉತ್ತರ ಕರ್ನಾಟಕದ ಸಾಮಾನ್ಯ ಮಂದಿಗೆ ಅರ್ಥವಾಗಿದೆ. 


ಉತ್ತರ ಕರ್ನಾಟಕ ಹಿಂದುಳಿಯಲು ಕಾರಣ ಉತ್ತರ ಕರ್ನಾಟಕದ ಜನಪ್ರತಿನಿಧಿಗಳು. ಎಂದರೆ ಉತ್ತರ ಕರ್ನಾಟಕ ಭಾಗದ ಎಂ.ಎಲ್.ಎ, ಎಂ.ಪಿ, ಎಂ.ಎಲ್.ಸಿ'ಗಳು ಎಂದು.‌


ಈಗ ಪ್ರತ್ಯೇಕವಾದದ ಬಗ್ಗೆ ಪುಂಕಾನುಪುಂಕವಾಗಿ ಊಳಿಡುತ್ತಿರುವವರು, ಒಂದು ಪಕ್ಷದ ಕಾರ್ಯಕರ್ತರು, ಹಾಗು ಇವರು ಇವರದೇ ಪಕ್ಷದ ರಾಜಕೀಯ ಮುಖಂಡರು ಇದೇ ರೀತಿಯ ಬಜೆಟ್ ಮಂಡಿಸಿದ್ದಿದ್ದರೆ, ಬಾಯಿಗೆ ಬೆಣ್ಣೆ ಇಟ್ಟುಕೊಂಡವರಂತೆ ತೆಪ್ಪಗಿರುತ್ತಿದ್ದರು. ಯಕಶ್ಚಿತ್ ತಿಂಗಳ ಹಿಂದೆ ಬಂದ ಸರ್ಕಾರವೇ ಉತ್ತರ ಕರ್ನಾಟಕ ಹಿಂದುಳಿಯಲು ಕಾರಣವೆಂಬಂತೆ ಎಲ್ಲೆಡೆ ರಕ್ತಕಾಕಿಕೊಂಡು ಗಬ್ಬೆಬ್ಬಿಸುತ್ತಿರುವ ಇವರು, ಸ್ವತಃ ಇವರದೇ ಪಕ್ಷ ಬಹುಕಾಲದಿಂದ ತಮ್ಮ ಕ್ಷೇತ್ರಗಳಲ್ಲಿ ಅಧಿಕಾರದ ಗದ್ದುಗೆಗೆ ಅಂಟಿಕೊಂಡು ಕೂತಿದ್ದರೂ ಸಹ ಏನೂ ಒಳಿತು ಮಾಡದೆ ಉತ್ತರ ಕರ್ನಾಟಕವನ್ನು ಹಿಂದುಳಿಯುವಂತೆ ಮಾಡಿತು ಎಂಬುದನ್ನು ಒಪ್ಪಲಾರರು.


ಭಾರತದಲ್ಲಿ ಸಣ್ಣ ರಾಜ್ಯಗಳು ಎಂದೂ ನೆಲದ ಸೊಗಡನ್ನು ಉಳಿಸಿಕೊಂಡು ಸಮೃದ್ಧವಾಗಿ ಬೆಳೆದ ಇತಿಹಾಸವೇ ಇಲ್ಲ. ಕೇಂದ್ರ ಸರ್ಕಾರಗಳ ವರಸೆ ನೋಡಿದರೆ, ಈಗಲೂ ಅವರುಗಳು ಭಾಷಾಧಾರಿತ ರಾಜ್ಯಗಳ ವಿಂಗಡನೆಯನ್ನು ಒಪ್ಪದೇ, ಸದಾ ಇಂಥ ವಿಷಯಗಳಲ್ಲಿ ಒಡಕು ಮೂಡಿಸಿ, ಒಡೆದು ಆಳಿ, ಪ್ರಾಂತ್ಯಗಳನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡು Exploit (ಸರ್ವನಾಶ) ಮಾಡುತ್ತಾರೆ. ದೇಶದ ಐಕ್ಯತೆಯ ಬಗ್ಗೆ ಮಾತಾಡುವ ಇವರು, ಅದೇ ಪುಣ್ಯ ಭೂಮಿ ಭರತ ಖಂಡದೊಳಗೆ ದೇಶಸ್ವರೂಪದಂತಿರುವ ನಮ್ಮ ನಾಡುಗಳ ಒಡೆಯುವ ಹಲ್ಕ ಯೋಚನೆಗಳಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ.


ನೆನಪಿಡಿ. ಎಂ.ಪಿ. ಚುನಾವಣಾ ಸಮೀಪಿಸುತ್ತಿದೆ.

ಕನ್ನಡಮ್ಮನ ಕಾಪಾಡಿಕೊಳ್ಳುವ ದುರಂತ ಸಾಹಸ ಕನ್ನಡಿಗರಿಗೆ ಒದಗಿದೆ.

ನವೀನ ಹಳೆಯದು