ಮುಧೋಳ:ಜಿಲ್ಲೆಯ ಮುಧೋಳ ನಗರದಲ್ಲಿ ನಡೆದ ಟ್ರಕ್, ಒಮಿನಿ ವ್ಯಾನ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ವಿಜಯಪುರ-ಬೆಳಗಾವಿ ರಾಜ್ಯ ಹೆದ್ದಾರಿಯ ಕೆ.ಆರ್.ಲಕ್ಕಂ ಶಾಲೆಯ ಬಳಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ವಿಜಯಪುರ ಜಿಲ್ಲೆಯ ಕಲಕೇರಿ ಗ್ರಾಮದವರು. ಖಾಸಿಂಸಾಬ್ ಮುಜಾವರ(42), ಅಫ್ರಿನಾ ಖಾಸಿಂ ಸಾಬ್ ಮುಜಾವರ (35), ಶಬಾನಾ ನೂರ್ ಅಹಮದ್(38) ಮೃತರು. ಇವರು ದುಡಿಯಲು ಗೋವಾಕ್ಕೆ ಹೋಗಿದ್ದರು ಮರಳಿ ಊರಿಗೆ ಬರುವಾಗ ಈ ಘಟನೆ ನಡೆದಿದೆ.