ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಗಬೇಕು ಅನ್ನುವ ಸಾಮಾನ್ಯ ಕನ್ನಡಿಗರ ಬಯಕೆಗೆ ಪೂರಕವಾಗಿರೋ ವರದಿ ಅಂದರೆ 'ಸರೋಜಿನಿ ಮಹಿಷಿ ವರದಿ'ಯನ್ನು ಆಧಾರಿಸಿ ಬರುವ ಚಳಿಗಾಲದ ಅಧಿವೇಶನದಲ್ಲಿ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ವಿಧೇಯಕವನ್ನ ಮಂಡನೆ ಮಾಡಲು ರಾಜ್ಯ ಸರಕಾರ ಮುಂದಾಗಿದೆ ಎನ್ನಲಾಗಿದೆ.
ಕರ್ನಾಟಕದಲ್ಲಿ ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿ ಮೀಸಲಾತಿ ಎನ್ನುವ ವಿಷಯಕ್ಕೆ ಸಂಬಂಧಪಟ್ಟಂತೆ ಈಗಾಗಲೇ ವಿಧೇಯಕಗಳಿಗಿದ್ದ ಕಾನೂನು ತೊಡಕುಗಳೆಲ್ಲವೂ ನಿವಾರಣೆಯಾಗಿದ್ದು. ವಿಧೇಯಕವನ್ನು ಬೆಳಗಾವಿಯಲ್ಲಿ ನಡೆಯಲ್ಲಿರುವ ಚಳಿಗಾಲದ ಕಾರ್ಮಿಕ ಇಲಾಖೆ ಮಂಡಿಸುವುದಕ್ಕೆ ಮುಂದಾಗಿದೆ.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆಯಾಗಲಿದ್ದು, ಬಳಿಕ ವಿಧೇಯಕ ಮಂಡನೆ ನಂತರ ಉಭಯ ಸದನಗಳಲ್ಲಿ ಈ ಬಗ್ಗೆ ಚರ್ಚೆಯಾಗಲಿದ್ದು, ನಂತರ ವಿಧೇಯಕವನ್ನು ರಾಜ್ಯಪಾಲರಿಗೆ ಉಭಯ ಸದನಗಳು ಶಿಫಾರಸು ಮಾಡಲಿದ್ದು, ರಾಜ್ಯಪಾಲರಿಂದ ವಿಧೇಯಕಕ್ಕೆ ಅಂಕಿತ ಗೊಂಡ ಬಳಿಕ ವಿಧೇಯಕ ಜಾರಿಯಾಗಲಿದ್ದು, ಎ ವೃಂದದ ನೌಕರಿಯಲ್ಲಿ ಶೇಕಡ 65, ಬಿ ವೃಂದದ ನೌಕರಿಯಲ್ಲಿ ಶೇಕಡ 80, ಹಾಗೂ ಸಿ ಮತ್ತು ಡಿ ವೃಂದದ ನೌಕರಿಯಲ್ಲಿ ಶೇಕಡ 100 ರಷ್ಟು ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ವಿಧೇಯಕ ಒಳಗೊಂಡಿದೆ.