ಮುಧೋಳ: ಬಾಕಿ ಹಣ ಪಾವತಿಯಾಗದ ಹೊರತು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡದೇ ಇರಲು ನಿರ್ಧರಿಸಿರುವ ತಾಲ್ಲೂಕಿನ ಕಬ್ಬು ಬೆಳೆಗಾರರು, ಭಾನುವಾರ ಕಬ್ಬು ಸಾಗಿಸುತ್ತಿದ್ದ 8 ವಾಹನಗಳ ಚಕ್ರಗಳ ಗಾಳಿಯನ್ನು ತೆಗೆದು ಆಕ್ರೋಶ ವ್ಯಕ್ತಪಡಿಸಿದರು.
ಬೀಳಗಿ ತಾಲ್ಲೂಕಿನಿಂದ ಹೊರಟಿದ್ದ ಮೂರು ಲಾರಿಗಳ, ವಿಜಯಪುರ–ಬೆಳಗಾವಿ ಹೆದ್ದಾರಿಯ ಮಾಲಾಪುರ ಗ್ರಾಮದ ಹತ್ತಿರ ಎರಡು ಟ್ರಾಕ್ಟರ್‌ಗಳ ಚಕ್ರದ ಗಾಳಿ ತೆಗೆದಿದ್ದಾರೆ. ಕಬ್ಬು ತುಂಬಿದ್ದ ಟ್ರೇಲರ್‌ಗಳನ್ನು ನೆಲಕ್ಕುರುಳಿಸಿದ್ದಾರೆ. ಮುಧೋಳ– ನಿಪ್ಪಾಣಿ ಹೆದ್ದಾರಿಯ ಸೋರಗಾಂವ ಗ್ರಾಮದ ಬಳಿಯಲ್ಲಿ ಮೂರು ಟ್ರಾಕ್ಟರ್‌ಗಳನ್ನು ತಡೆದಿದ್ದಾರೆ.
ಸಕ್ಕರೆ ಕಾರ್ಖಾನೆಗಳಿಗೆ 2016–17ನೇ ಸಾಲಿನಲ್ಲಿ ಪೂರೈಸಿದ ಕಬ್ಬಿನ ಬಾಕಿ ಹಣ ಪಾವತಿಯಾಗದ ಹೊರತು, ಈ ಹಂಗಾಮಿನಲ್ಲಿ ಯಾವುದೇ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬಾರದು ಹಾಗೂ ಈಗಾಗಲೇ ಕಾರ್ಯಾರಂಭಿ
ಸಿರುವ ಕಾರ್ಖಾನೆಗಳನ್ನೂ ಬಂದ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ