ಮಹಾಯೋಜನೆಗೆ ಅನುಮೋದನೆ ಬಾಗಲಕೋಟೆ ಅಭಿವೃದ್ಧಿಗೆ ಹೊಸ ಸ್ವರೂಪ

• ಬಾಗಲಕೋಟ ನಗರದ ಯೋಜಿತ ಬೆಳವಣಿಗೆಯ ಉದ್ದೇಶದಿಂದ ರೂಪಿಸಲಾಗಿದ್ದ ಮಹಾ ಯೋಜನೆ ನಾನಾ ಕಾರಣಗಳಿಂದ ಕಳೆದ 10 ವರ್ಷದಿಂದ ಫೈಲ್‌ನಲ್ಲೇ ಉಳಿದಿತ್ತು. 

• ರಾಜ್ಯ ಸರಕಾರ ನ.9ರಂದು ಅನುಮೋದನೆ ಆದೇಶ ಹೊರಡಿಸುವುದರೊಂದಿಗೆ ಯೋಜನೆಗೆ ಅನುಮತಿಯ ಮುದ್ರೆ ದೊರೆತಿದೆ. 

• 2017ರಲ್ಲಿ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಪ್ರಕಾಶ ತಪಶೆಟ್ಟಿಯವರ ಆಸ್ಥೆಯಿಂದಾಗಿ ಯೋಜನೆಯ ಅಂತಿಮ ವರದಿ ಕಳುಹಿಸಲಾಗಿತ್ತು. 

• ವಿಧಾನಸಭೆ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಕಾರಣದಿಂದ ಅನುಮೋದನೆ ವಿಳಂಬವಾಗಿತ್ತು.

• ಮಹಾ ಯೋಜನೆಯಿಂದಾಗಿ ಮುಖ್ಯವಾಗಿ ಮುಳುಗಡೆ ವ್ಯಾಪ್ತಿಯಲ್ಲಿರುವ 525 ಮೀ. ನಿಂದ 527 ಮೀ.ವರೆಗಿನ ವ್ಯಾಪ್ತಿ ಗುರುತಿಸಲು ಸಾಧ್ಯವಾಗಲಿದೆ. 

• ನಗರ ಹಾಗೂ 11ಗ್ರಾಮಗಳ ಗಡಿಗಳನ್ನು ಗುರುತಿಸಲು ಯೋಜನೆ ನೆರವಾಗಲಿದೆ. 

• ನಗರ ಯೋಜನಾ ಪ್ರಾಧಿಕಾರದಡಿ 11ಗ್ರಾಮಗಳು ಸೇರ್ಪಡೆಯಾಗುವುದರಿಂದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. 

• ಭವಿಷ್ಯದಲ್ಲಿ ಬಾಗಲಕೋಟ ನಗರ ಮಹಾನಗರ ಪಾಲಿಕೆಯ ದರ್ಜೆ ಪಡೆಯಲೂ ಪ್ರಯೋಜನವಾಗಲಿದೆ. 

• ಭೂ ಪರಿವರ್ತನೆ, ಕಟ್ಟಡ ನಿರ್ಮಾಣ, ನಿವೇಶನ ಮಾರಾಟ ಸರಾಗವಾಗಲಿದೆ.

ನವೀನ ಹಳೆಯದು