ಕಬ್ಬು ಬೆಳೆಗಾರರಿಂದ ಮುಧೋಳ ಬಂದ್​ಗೆ ಕರೆ

ಮುಧೋಳ (ನ. 15): ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಬರಬೇಕಿರುವ ಬಾಕಿ ಹಣಕ್ಕೆ ಹಾಗೂ ಕಬ್ಬಿಗೆ ದರ ನಿಗದಿಗೆ ಆಗ್ರಹಿಸಿ ಮುಧೋಳ ತಾಲೂಕಿನ ಕಬ್ಬು ಬೆಳೆಗಾರರು ಹಾಗೂ ರೈತ ಸಂಘಟನೆಗಳು ಬಂದ್​ಗೆ ಕರೆ ಕೊಟ್ಟಿವೆ. ಇಂದು ನಡೆದ ಸಭೆಯಲ್ಲಿ ಮುಧೋಳ ನಗರದಲ್ಲಿ ಬಂದ್ ಆಚರಿಸುವ ನಿರ್ಧಾರ ಕೈಗೊಳ್ಳಲಾಯಿತು. ರೈತರು ಇಂದು ಬೈಕ್ ರ್ಯಾಲಿ ಮೂಲಕ ಮುಧೋಳ ನಗರದ ಹಲವು ಕಡೆ ತೆರಳಿ ಬಂದ್​ಗೆ ಬೆಂಬಲ ಕೊಡುವಂತೆ ವ್ಯಾಪಾರಸ್ಥರಲ್ಲಿ ಮನವಿ ಮಾಡುವ ಕೆಲಸ ಕೈಗೊಂಡರು.

ಕನಿಷ್ಠ ಬೆಂಬಲ ಬೆಲೆ ನಿಗದಿ ವಿಚಾರದಲ್ಲಿ ಪ್ರತೀ ಟನ್​ ಕಬ್ಬಿಗೆ 2,500 ರೂ ನೀಡಬೇಕೆಂಬುದು ಕಬ್ಬು ಬೆಳೆಗಾರರ ಪ್ರಮುಖ ಬೇಡಿಕೆಯಾಗಿದೆ. ಕಳೆದ 20 ದಿನಗಳಿಂದಲೂ ರೈತರು ತಮ್ಮ ಬೇಡಿಕೆ ಈಡೇರಿಕೆಗೆ ಧರಣಿ ನಡೆಸುತ್ತಾ ಬಂದಿದ್ದಾರೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮೊನ್ನೆ ನ. 15ರಂದು ನಡೆದ ಸಭೆಯಲ್ಲಿ ಈ ವಿಚಾರವನ್ನು ಚರ್ಚಿಸಲಾಗಿತ್ತು. ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತರು ಈ ಸಭೆಯಲ್ಲಿ ಭಾಗವಹಿಸಿದ್ದರು. ರೈತರಿಗೆ ಬರಬೇಕಿರುವ ಕಬ್ಬಿನ ಬಾಕಿ ಹಣ ಹಿಂದಿರುಗಿಸಬೇಕು ಹಾಗೂ ಪ್ರತೀ ಟನ್ ಕಬ್​​ಗೆ 2,500 ರೂ ಕನಿಷ್ಠ ಬೆಂಬಲ ಬೆಲೆ ಕೊಡಬೇಕೆಂಬ ಬೇಡಿಕೆಗಳನ್ನು ರೈತರು ಆ ಸಭೆಯಲ್ಲಿ ಆಗ್ರಹಿಸಿದ್ದರು. ಎರಡು ದಿನ ಕಾಲಾವಕಾಶ ಪಡೆದುಕೊಂಡಿದ್ದ ಸಕ್ಕರೆ ಕಾರ್ಖಾನೆ ಮಾಲೀಕರು ಈವರೆಗೂ ಯಾವುದೇ ನಿಲುವು ಪ್ರಕಟಿಸಿಲ್ಲವೆಂಬುದು ರೈತರ ಆಕ್ರೋಶವಾಗಿದೆ. ರೈತರ ಬೇಡಿಕೆಗೆ ಸ್ಪಂದಿಸದೆಯೇ ಕಾರ್ಖಾನೆ ಆರಂಭವಾಗುತ್ತಿರುವುದು ರೈತರ ಅಸಮಾಧಾನವನ್ನು ಇಮ್ಮಡಿಗೊಳಿಸಿದೆ.

ಮುಧೋಳ ರೈತರ ಪ್ರಮುಖ ಬೇಡಿಕೆಗಳೇನು?

2) ಪ್ರತೀ ಟನ್ ಕಬ್ಬಿಗೆ 2,500 ರೂ ಕನಿಷ್ಠ ಬೆಂಬಲ ನಿಗದಿಯಾಗಬೇಕು

ಈ ಹಿನ್ನೆಲೆಯಲ್ಲಿ ರೈತ ಸಂಘದ ಬೆಂಬಲದೊಂದಿಗೆ ಕಬ್ಬು ಬೆಳೆಗಾರರು ಮುಧೋಳ ನಗರ ಬಂದ್​ಗೆ ಕರೆಕೊಟ್ಟಿದ್ದಾರೆ. ತಮ್ಮ ಈ ಬೇಡಿಕೆಗಳನ್ನ ಈಡೇರಿಸುವವರೆಗೂ ಸಕ್ಕರೆ ಕಾರ್ಖಾನೆಗಳನ್ನ ತೆರೆಯದಂತೆ ರೈತರು ಆಗ್ರಹಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ್ ಅವರು ಮಧ್ಯಪ್ರವೇಶಿಸಿ ಈ ಸಮಸ್ಯೆ ಇತ್ಯರ್ಥ ಮಾಡಬೇಕೆಂಬುದು ರೈತರ ಒತ್ತಾಯವಾಗಿದೆ.

ರೈತರಲ್ಲೇ ಒಡಕು:

ಆದರೆ, ಮುಧೋಳ ಬಂದ್ ಕರೆಗೆ ರೈತರೊಳಗೆಯೇ ಅಪಸ್ವರ ಎದ್ದಿರುವ ಮಾಹಿತಿ ಬೆಳಕಿಗೆ ಬಂದಿದೆ. ರೈತ ಸಂಘದ ಪ್ರತಿಭಟನೆಯಿಂದ ತಮಗೆ ತೊಂದರೆಯಾಗುತ್ತದೆ. ಸಕ್ಕರೆ ಕಾರ್ಖಾನೆಗಳು ತೆರೆದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಒಂದು ಗುಂಪಿನ ರೈತರು ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು. ರೈತ ಸಂಘದ ಹೋರಾಟದ ಹಿನ್ನೆಲೆಯಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ಇಚ್ಛಿಸುವ ರೈತರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಜಿಲ್ಲಾಧಿಕಾರಿ ಕೆ.ಜಿ. ಶಾಂತಾರಾಂ ಅವರಿಗೆ ರೈತರು ಮನವಿ ಮಾಡಿದರು.

ನವೀನ ಹಳೆಯದು