ಮುಧೋಳ : ಮುಧೋಳ ತಾಲ್ಲೂಕು ಕುಳಲಿ ಗ್ರಾಮದ ನಿರಾಣಿ ಶುಗರ್ಸ್‌ನ ಮೊಲ್ಯಾಸಿಸ್ ಸಂಸ್ಕರಣಾ ಘಟಕ ಸ್ಫೋಟಗೊಂಡಿದೆ. ಪ್ರಾಥಮಿಕ ಮಾಹಿತಿ ಅನ್ವಯ ಐದಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಾವಿಸಿದ್ದಾರೆ. ಸ್ಫೋಟದ ತೀವ್ರತೆಗೆ ಮೊಲ್ಯಾಸಿಸ್ ಘಟಕದ ಕಟ್ಟಡವೇ ಕುಸಿದಿದೆ. ಈಗ ಮೂರು ಶವಗಳು ಪತ್ತೆಯಾಗಿವೆ.
ಕಟ್ಟಡ ಕುಸಿದಿರುವುದರಿಂದ ಒಳಗೆ ಸಿಲುಕಿರುವವರ ನಿಖರ ಮಾಹಿತಿ ಇಲ್ಲ. ಬೆಳಗಾವಿಯಿಂದ ಮೂರು ರಕ್ಷಣಾ ತಂಡಗಳನ್ನು ಕರೆಸಲಾಗುತ್ತಿದೆ. ಸಾವಿಗೀಡಾದವರ ನಿಖರ ಮಾಹಿತಿ ಇನ್ನೂ ಸಿಕ್ಕಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.