ರಾವಣ ಸಾಯುವಾಗ ಲಕ್ಷ್ಮಣನಿಗೆ ಹೇಳಿದ ಮೂರು ಅದ್ಭುತ ರಹಸ್ಯ ಏನು ಗೊತ್ತಾ.. ಒಂದು ನಿಮಿಷ ಸಮಯವಿದ್ದರೆ ತಪ್ಪದೇ ಇದನ್ನು ಓದಿ..

ಹತ್ತು ತಲೆಗಳ ರಾವಣನು ಕೊನೆಗೆ ರಾಮನ ಮುಂದೆ ರಥದಲ್ಲಿ ಬಂದು ನಿಂತನು. ಆದರೆ ಅಷ್ಟರಲ್ಲಿ ವಿಭೀಷಣನೂ ಲಕ್ಷ್ಮಣನೂ ಅವನ ಮೇಲೆ ಬಾಣಗಳನ್ನು ಹೂಡುತ್ತಾ ಹೋರಾಡತೊಡಗಿದರು. ರಾವಣನು ಘಂಟಾಶಕ್ತಿಯೆಂಬ ಆಯುಧವನ್ನು ಪ್ರಯೋಗಿಸಿದಾಗ ಅದು ಲಕ್ಷ್ಮಣನ ಎದೆಗೆ ಬಡಿದು ಅವನು ನೆಲಕ್ಕೆ ಉರುಳಿಬಿಟ್ಟನು. ಅದೃಷ್ಟವಶಾತ್’ ಲಕ್ಷ್ಮಣನಿಗೆ ಯಾವುದೆ ಅಪಾಯ ಸಂಭವಿಸಲಿಲ್ಲ.

ಶ್ರೀರಾಮನು ಕೆರಳಿದ ಸಿಂಹದಂತೆ, ಬಾಣ ಹೂಡಿ, “ರಾವಣ, ಇಂದು ನಿನಗೆ ಕೊನೆ. ಇನ್ನು ಈ ಭೂಮಿಯ ಮೇಲೆ ರಾಮನಿರಬೇಕು, ಇಲ್ಲವೇ ರಾವಣನಿರಬೇಕು, ಬಾ” ಎಂದು ನುಗ್ಗಿದನು. ಆ ರಭಸಕ್ಕೆ ತಾಳಲಾರದೆ, ರಾವಣನು ಕಾಲುಕಿತ್ತು ಓಡಿದನು

ಶ್ರೀರಾಮ ಆಗ ಸೈನ್ಯದಲ್ಲಿದ್ದ ವೈದ್ಯ ಪಂಡಿತನಾದ ‘ಸುಷೇಣನು’ ಧೈರ್ಯ ಹೇಳಿ, “ಶ್ರೀರಾಮಚಂದ್ರ, ಲಕ್ಷ್ಮಣನು ಕೂದಲೆಳೆಯಲ್ಲಿ, ಪಾರಾಗಿದ್ದಾನೆ ತಾಳ್ಮೆ ಕಳೆದುಕೊಳ್ಳಬೇಡ ರಾವಣನ ಘಂಟಾಶಕ್ತಿಯೆಂಬ ಬಾಣದ ಪ್ರಯೋಗದಿಂದ ಅವನಿಗೆ ಯಾವುದೆ ತರಹದ ತೊಂದರೆ ಸಂಭವಿಸಲಿಲ್ಲ

ಆ ದಿನದ ಯುಧ್ಧ ರಾವಣನ ಪಲಯಾನದಿಂದ ಅಂದಿಗೆ ಕೊನೆಯಾಯಿತು.

ಶ್ರೀರಾಮನಿಗೂ ರಾವಣನಿಗೂ ಮರುದಿನ ಕೊನೆಯ ದಿನದ ಯುದ್ಧ ನಡೆಯಿತು. ಲೋಕದಲ್ಲೇ, ಹಿಂದೆಂದೂ ನಡೆದಿರಲಿಲ್ಲವೆಂಬಂತ ಘೋರವಾದ ಯುದ್ಧವದು ಶ್ರೀರಾಮನು ಬಾಣಗಳಿಂದ ರಾವಣನ ತಲೆಗಳನ್ನು ಎಷ್ಟು ಸಲ ಕಡಿದರೂ ಅವನಿಗೆ ವರಬಲದಿಂದ ಹೊಸ ತಲೆಗಳು ಮೂಡುತ್ತಿದ್ದವು. ಕೊನೆಗೆ ಎದೆಗೆ ಗುರಿಮಾಡಿ ಹೊಡೆಯುತ್ತಲೇ ರಾವಣನು ಭಯಂಕರವಾಗಿ ಚೀರಿ, ರಕ್ತವನ್ನು ಕಾರುತ್ತಾ ಕೆಳಗೆ ಬಿದ್ದನು. ಆಕಾಶದಲಿದ್ದಲ್ ದೇವತೆಗಳು, “ಅಬ್ಬ! ಇದೆಂತಹ ಯದ್ಧ! ಸಮುದ್ರಕ್ಕೆ ಸಮುದ್ರವೇ ಸಾಟಿ ಎಂಬಂತೆ ರಾಮ-ರಾವಣರ ಯುದ್ಧಕ್ಕೆ ರಾಮ-ರಾವಣರ ಯದ್ಧವೇ ಸಾಟಿ.…ಎಂದು ಬಿಟ್ಟ ಕಣ್ಣು ಬಿಟ್ಟಂಬಿಟ್ಟಂತೆ, ನೋಡುತ್ತಿದ್ದರು.

ಮೇಲಿಂದ ಕೆಳಗೆ ಬಿದ್ದ ರಾವಣನು ನೆಲಕಚ್ಚಿದ ತಕ್ಷಣ ರಾಮ ರಾಮ ಎಂಬ ಉದ್ಗಾರದೊಂದಿಗೆ ಅವನ ಕೊನೆಯ ಕ್ಷಣಗಳು ಜಾರುತ್ತಿದ್ದವು. ಆಗ ರಾಮನು ತಮ್ಮ ಲಕ್ಷ್ಮಣನಿಗೆ ಈ ರೀತಿ ಹೇಳುತ್ತಾನೆ ರಾವಣ ಒಬ್ಬ ಶಿವ ಭಕ್ತ ಅಪ್ರತಿಮ ದೈವಭಕ್ತ ಅದಲ್ಲದೆ ಸರ್ವಶ್ರೇಷ್ಟ ಬ್ರಾಹ್ಮಣೋತ್ತಮ ಅವರಿಂದೊಂದಷ್ಟು ಜೀವನದ ಅನುಭವದ ವಿಷಯ ಕೇಳಿ ತಿಳಿದುಕೋ ಎಂದು ಹೇಳುತ್ತಾನೆ. ಲಕ್ಷ್ಮಣನು ಆಗ ರಾವಣನಲ್ಲಿರುವಲ್ಲಿಗೆ ಹೋದನು ಮತ್ತು ಈ ಸಮಯ ಅವನು ರಾವಣನ ಪಾದಗಳ ಹತ್ತಿರ ನಿಂತನು. ರಾವಣನು ತನ್ನ ಪಾದಗಳ ಹತ್ತಿರ ನಿಂತಿರುವ ಲಕ್ಷ್ಮಣನಿಗೆ ತನ್ನ ಜೀವನದ ಮೂರು ಪ್ರಮುಖ ರಹಸ್ಯಗಳನ್ನು ತಿಳಿಸಿದನು , ಇದು ಎಲ್ಲರ ಜೀವನವನ್ನು ಯಶಸ್ವಿಯಾಗಿಸುವ ಮೂಲಮಂತ್ರವಾಗಿದೆ.

ರಾವಣನು ಲಕ್ಷ್ಮಣನ್ನಿಗೆ ಹೇಳಿದ ಮೊದಲನೆಯ ಮಾತು

“ಸಾಧ್ಯವಾದಷ್ಟು ಬೇಗ ಯಾವುದೇ ಮಂಗಳಕರ ಕೆಲಸವನ್ನು ಪೂರ್ಣಗೊಳಿಸಬೇಕು ಮತ್ತು ದುರದೃಷ್ಟಕರ ಕೆಲಸವನ್ನು ಸಾಧ್ಯವಾದಷ್ಟು ಮುಂದಕ್ಕೆ ಹಾಕುತ್ತಿರಬೇಕು.ಆಗ ನನ್ನ ಈ ಸ್ಥಿತಿ ಯಾರಿಗೂ ಬರುವುದಿಲ್ಲ

ಆನಾವಶ್ಯಕವಾಗಿ ಅಂದು ನಾನು ಶೂರ್ಪನಖಿಯ ಮಾತನ್ನು ಕೇಳಿ

ಸೀತಾದೇವಿಯನ್ನು ಅಪಹರಿಸಿಕೊಂಡು ಬಂದೆ. ಅದು ಯವ ಮಂಗಳಕರ ಕೆಲಸವೂ ಆಗಲಿಲ್ಲ. ಅಯ್ಯೋ! ಏನು ಮಾಡಲಿ ಎಲ್ಲವು ಈಗ ನನ್ನ

ಅರಿವಿಗೆ ಬರುತ್ತಿದೆ. ಎಂದನು.

ರಾವಣನು ಲಕ್ಷ್ಮಣನಿಗೆ ಹೇಳಿದ ಎರಡನೆಯ ಮಾತು

“ಯುದ್ಧ ಭೂಮಿಯಲ್ಲಿ ಎದುರಾಳಿಯನ್ನು ಕಡೆಗಣಿಸುವಂತಿಲ್ಲ”

ನಾನು ಈ ಕೋತಿಗಳ ಬಗ್ಗೆ ಮತ್ತು ಕಪಿ ಸೈನ್ಯದ ಬಗ್ಗೆ ತುಂಬಾ

ಹಗುರವಾಗಿ ತಿಳಿದುಕೊಂಡಿದ್ದೆ. ಸದಾರಾಣ ಈ ಕಪಿಗಳು ಈ ರಾವಣೇಶ್ವರನಿಗೆ, ಏನು ಮಾಡಲು ಸಾಧ್ಯ ಇವುಗಳಿಗೆಲ್ಲ ನನ್ನಷ್ಟು ಸಾಮರ್ಥ್ಯವಾದರೂ ಎಲ್ಲಿದೆ? ಎಂದು ತಪ್ಪಾಗಿ ಅರ್ಥಮಾಡಿಕೊಂಡೆ!

ಆದರೆ ಅಂದು ಹನುಮಂತನು ಲಂಕೆಗೆ ಬಂದು ಬೆಕ್ಕಿ ಇಟ್ಟಾಗಲೇ

ನಾನು ತಿಳಿದುಕೊಳ್ಳಬೇಕಿತ್ತು. ಮುಂದೆ ಆ ಕಪಿ ಸೈನ್ಯದ ನಾಯಕ ಹನುಮನೆ ನನ್ನ ಈ ಅಧೋಗತಿಗೆ ಕಾರಣನಾಗುತ್ತಾನೆ ಎಂದು

ಆದ್ದರಿಂದ ಯುಧ್ಧ ಭೂಮಿಯಲ್ಲಿ ಎದುರಾಳಿಯನ್ನು ಎಂದು

ಕಡೆಗಣಿಸುವಂತಿಲ್ಲ!

ರಾವಣನು ಲಕ್ಷ್ಮಣನಿಗೆ ಹೇಳಿದ ಮೂರನೆಯ ಮಾತು

ರಾವಣ ಲಕ್ಷ್ಮಣನಿಗೆ,ಹೇಳಿದ ಮೂರನೆಯ ಮತ್ತು ಅಂತಿಮ ವಿಷಯ , ಜಗತ್ತಿನಲ್ಲಿರುವ ಯಾರಿಗಾದರೂ ಸರಿಯೇ ನಮ್ಮ ರಹಸ್ಯವನ್ನು ನಾವು ಬಹಿರಂಗಪಡಿಸಬಾರದು. ರಾವಣನ ತಮ್ಮನಾದ ವಿಭಿಷಣನ

ಸಹಾಯದಿಂದಲ್ಲಲೇ,ರಾಮನಿಗೆ,ರಾವಣನನ್ನು ಕೊಲ್ಲಲು ಸಾದ್ಯವಾಯಿತು. ನನ್ನ ದೌರ್ಬಲ್ಯ ಮತ್ತು ಸಾವಿನ ರಹಸ್ಯದ

ವಿಷಯವನ್ನು ನನ್ನ ಸಹೋದರ ವಿಭಿಷಣ ಅರಿತಿದ್ದರಿಂದಲೇ

ನನ್ನ ಅಂಥಃ ಪಥನಕ್ಕೆ ನನ್ನವರೆ ಕಾರಣರಾದರು. ಆದ ಕಾರಣದಿಂದ

ನಮ್ಮ ಬದುಕಿನಲ್ಲಿ ನಮ್ಮ ದೌರ್ಬಲ್ಯಗಳನ್ನು ಯಾರಿಗೂ ಹೇಳಬಾರದು

ಒಂದು ವೇಳೆ ಹೇಳಿದ್ದೆ ಆದರೆ ನನ್ನ ಪರಿಸ್ಥಿತಿ ಬರುತ್ತದೆ. ಎಂದು

ಹೇಳಿದನು. ಈ ಮಾತುಗಳನ್ನು ಹೇಳಿ ರಾವಣನು ತನ್ನ ಕೊನೆಯುಸಿರೆಳೆದನು.



ಅಂತಿಮವಾಗಿ ರಾಮನಿಗೆ ಜಯವಾಯಿತು. ದುಷ್ಟ ರಾಕ್ಷರು ಸತ್ತರು. ಲೋಕದಲ್ಲಿ ಶಾಂತಿ ನೆಲೆಸಿತು. ಧರ್ಮಕ್ಕೆ ಜಯವಾಯಿತು” ಎಂದು ಹೂಮಳೆ ಸುರಿಸಿ ಕೊಂಡಾಡಿದರು.!

ರಾಮನು ವಿಭೀಷಣನಿಗೆ, “ವಿಭೀಷಣ, ರಾವಣನು ತನ್ನ ತಪ್ಪಿನಿಂದ ಸತ್ತನಾದರೂ ಅವನು ವೀರ. ವೀರರನ್ನು ನಾನು ಗೌರವಿಸುತ್ತೇನೆ. ನಿನಗಾದರೋ ಅವನು ಅಣ್ಣ. ಅವನಿಗೆ ಅಂತ್ಯಸಂಸ್ಕಾರ ಮಾಡಬೇಕಾದುದು ನಿನ್ನ ಧರ್ಮ” ಎಂದು ಹೇಳಿ ಎಲ್ಲವನ್ನೂ ಮಾಡಿಸಿದನು.

ನವೀನ ಹಳೆಯದು