ತಾಲೂಕಿನ ಒಂಟಗೋಡಿ ಪುನರ್ವಸತಿ ಕೇಂದ್ರದಲ್ಲಿ 1ಲಕ್ಷ ಲೀಟರ್ ಕುಡಿಯುವ ನೀರಿನ ಟ್ಯಾಂಕ್ ಕುಸಿದಿದೆ. ರಾತ್ರಿ ವೇಳೆಯಲ್ಲಿ ನಡೆದ ಘಟನೆಯಿಂದ ಯಾವುದೇ ಪ್ರಾಣಹಾನಿಯಾಗಿಲ್ಲ.
2013-14 ನೇ ಸಾಲಿನ ಪಂಚಾಯತ್ ರಾಜ್ಯ ಇಲಾಖೆಯ ಯೋಜನೆಯಲ್ಲಿ ಅಂದಾಜು 20ಲಕ್ಷ ರೂ.ಖರ್ಚು ಮಾಡಲಾಗಿತ್ತು. ಕಾಲಂ ಸಹಿತ ಭೂಮಿಯಲ್ಲಿ ಉರುಳಿದ್ದರಿಂದ ಹೆಚ್ಚಿನ ಅನಾಹುತಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮದ ಹೊರವಲಯದ ಆಶ್ರಯ ಯೋಜನೆಯ 400 ಮನೆಗಳಿಗೆ ನೀರು ಪೂರೈಕೆಗೆ ೕ ಟ್ಯಾಂಕ್ ನಿರ್ಮಿಸಲಾಗಿತ್ತು. 150ಕ್ಕೂ ಅಧಿಕ ಜನವಸತಿ ಜನರಿಗೆ ನಲ್ಲಿಗಳ ಮೂಲಕ ನೀರು ಪೂರೈಕೆ ಮಾಡಲಾಗುತಿತ್ತು. 15ಮೀಟರ್ ಎತ್ತರದ ನೀರಿನ ಟ್ಯಾಂಕ್‌ದಲ್ಲಿ 20ಸಾವಿರಕ್ಕೂ ಅಧಿಕ ನೀರಿನ ಸಂಗ್ರಹವಿತ್ತು. ಸುರಕ್ಷಿತ ದೃಷ್ಟಿಯಿಂದ ಸುತ್ತಲು ಬ್ಯಾರಿಕೇಡ್ ನಿರ್ಮಿಸಲಾಗಿದೆ.
ಜನವಸತಿ ಪ್ರದೇಶವಾಗಿದ್ದಲ್ಲಿ ಅಥವಾ ಹಗಲು ಏನಾದರು ಈ ಘಟನೆ ಸಂಭವಿಸಿದ್ದರೆ ಹೆಚ್ಚಿನ ಅನಾಹುತ ಸಂಭವಿಸುತ್ತಿತ್ತೇನೋ ಎನ್ನುವ ಆತಂಕ ದೂರವಾದಂತಾಗಿದೆ. ಅತ್ಯಲ್ಪ ಅವಧಿಯಲ್ಲೇ ಈ ರೀತಿ ಜಿಲ್ಲೆಯಲ್ಲಿ ಎತ್ತರದಲ್ಲಿ ನಿರ್ಮಿಸಿದ್ದ ಟ್ಯಾಂಕ್ ಕುಸಿದು ಬಿದ್ದಿರುವುದು ಇದೇ ಮೊದಲು ಇರಬಹುದು. ಆದರೆ ಈ ಭಾಗದ ಜನತೆಗೆ ನೀರು ಪೂರೈಸುವ ಟ್ಯಾಂಕ್ ತಕ್ಷಣವೇ ಬಿದ್ದಾಗ ನೀರಿನ ಸಮಸ್ಯೆ ತಕ್ಷಣ ನಿಭಾಯಿಸುವ ಕಾರ್ಯ ಮಾಡಬೇಕಿದೆ ಎನ್ನುತ್ತಾರೆ ನಾಗರಿಕರು.
ಭೇಟಿ:
ತಾಪಂ ಇಒ ಬಿ.ವಿ.ಅಡವಿಮಠ, ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿ ಕಿರಣ ಘೋರ್ಪಡೆ, ಗ್ರಾಪಂ ಅಧ್ಯಕ್ಷ ರು, ಪಿಡಿಓ ಗ್ರಾಮದ ನಿವಾಸಿಗಳು ಭೇಟಿ ನೀಡಿದ್ದಾರೆ.
ಟ್ಯಾಂಕ್ ಕುಸಿದ ಬಗ್ಗೆ ಪರಿಶೀಲನೆ ವರದಿ ಬಂದ ನಂತರವೇ ಸ್ಪಷ್ಟವಾಗಲಿದೆ. ಜಿಪಂ ಸಿಇಒವರಿಗೆ ವರದಿ ನೀಡಲಾಗುತ್ತಿದೆ.
ಕಿರಣ ಘೋರ್ಪಡೆ, ಎಇಇ,
ಕುಡಿವ ನೀರಿಗೆ ವ್ಯವಸ್ಥೆ ಮಾಡಿ: ಅಧಿಕಾರಿಗಳಿಗೆ ಸೂಚನೆ
ಮುಧೋಳ: ಕುಸಿದ ಬಿದ್ದ ನೀರಿನ ಟ್ಯಾಂಕ್‌ದಿಂದ ತಾಲೂಕಿನ ಒಂಟಗೋಡಿ ಕೋರಂ ದೇವಿ ಆಶ್ರಯ ನಿವಾಸಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಜಿಪಂ ಸದಸ್ಯೆ ಕವಿತಾ ತಿಮ್ಮಾಪೂರ ಸೂಚಿಸಿದ್ದಾರೆ ಎಂದು ತಾಪಂ ಸದಸ್ಯೆ ಶಶಿಕಲಾ ಅಂಬಿಗೇರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಆಶ್ರಯ ನಿವಾಸಿಗಳ ಜಾಗೆಯಲ್ಲಿ ಇದು ಕಳಪೆ ಮಟ್ಟದ ಕಾಮಗಾರಿಯಾಗಿದೆ. ಸಮಗ್ರ ತನಿಖೆ ಮಾಡಿಸಿ ತಪ್ಪಿಸ್ಥಿತರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಪಂ ಸಿಇಒ ಅವರಿಗೆ ಒತ್ತಾಯಿಸಿದ್ದಾರೆ. ಅದೇ ಜಾಗೆಯಲ್ಲಿ ಕೊಳವೆಬಾವಿ ಹಾಕಿ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಭೀಮಸಿ ಐನಾಪೂರ, ಪಾಂಡಪ್ಪ ಅಂಬಿಗೇರ, ವೆಂಕಣ್ಣಾ ಯಡಹಳ್ಳಿ, ವೆಂಕಣ್ಣಾ, ಕಲ್ಲಪ್ಪ ದನಗರ ಒತ್ತಾಯಿಸಿದ್ದಾರೆ.