ಸುಮಾರು 5,400 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯ ನೀಲನಕ್ಷೆ ತಯಾರಿಸಲಾಗಿದೆ. 4 ಜಿಲ್ಲೆಯ 500ಕ್ಕೂ ಅಧಿಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹೊಂದಲಾಗಿದೆ ಎಂದು ಸಂಗಮೇಶ ನಿರಾಣಿ ತಮ್ಮ ಭಿಪ್ರಾಯ ಹಂಚಿಕೊಂಡಿದ್ದಾರೆ.
ಕಾಳಿ ನದಿ ವರ್ಷದ 12 ತಿಂಗಳೂ ಸಮೃದ್ಧವಾಗಿ ಹರಿಯುತ್ತೆ. ಸೂಪಾ ಜಲಾಶಯದಲ್ಲಿ ವಿದ್ಯುತ್ ಉತ್ಪಾದನೆಯಾದ ನಂತರ ಬಿಡುಗಡೆ ಆಗುವ ನೀರಿನಲ್ಲಿ ವಾರ್ಷಿಕ 10-20 ಟಿಎಂಸಿ ನೀರನ್ನು ಮಾತ್ರ ಏತ ನೀರಾವರಿ ಯೋಜನೆ ಮೂಲಕ ಘಟಪ್ರಭಾ, ಮಲಪ್ರಭಾ ನದಿಗಳಿಗೆ ಬಿಡುವಂತೆ ಈ ಯೋಜನೆ ರೂಪಿಸಲಾಗಿದೆ. 10-20 ಟಿಎಂಸಿ ನೀರಿನಿಂದಾಗಿ ಕಾಳಿ ನದಿ ಬರಿದಾಗುವುದಿಲ್ಲ ಮತ್ತು ಸಮುದ್ರಕ್ಕೆ ಸೇರುವ ದೊಡ್ಡ ಪ್ರಮಾಣದ ನೀರಿನಲ್ಲಿ ವ್ಯತ್ಯಾಸವಾಗುವುದಿಲ್ಲ. ಪ್ರತಿ ವರ್ಷ ಬೀಳುವ ಮಳೆಯಿಂದಾಗಿ ವಾರ್ಷಿಕ 3,600 ಟಿಎಂಸಿ ನೀರು ಲಭಿಸುತ್ತದೆ. ಅದರಲ್ಲಿ 1,600 ಟಿಎಂಸಿಯಷ್ಟು ನೀರನ್ನು ಮಾತ್ರ ಕೃಷಿ, ಕುಡಿಯುವ ನೀರು, ಕೈಗಾರಿಕೆ ನೀರಾವರಿ ಯೋಜನೆಗಳಿಗೆ ಬಳಸಿ 2,000 ಟಿಎಂಸಿ ನೀರು ಸಮುದ್ರ ಸೇರುತ್ತದೆ. ಕೃಷ್ಣಾ, ನರ್ಮದಾ, ಕಾವೇರಿ ಸೇರಿದಂತೆ ದೇಶದ ದೊಡ್ಡ ನದಿಗಳಿಗೆ ಬೃಹತ್ ಯೋಜನೆ ರೂಪಿಸಿ ಅಣೆಕಟ್ಟೆಯಲ್ಲಿ ನೀರನ್ನು ಸಂಗ್ರಹಿಸಿದ್ದಾರೆ. ಕೇವಲ ಕಾಳಿ ನದಿ ನೀರಿನಿಂದ ಮಾತ್ರ ಸಮುದ್ರದ ಲವಣಾಂಶ ಪ್ರಮಾಣ ಕಡಿಮೆ ಆಗುವುದಿಲ್ಲ ಎಂದು ವಿರೋಧಿಗಳಿಗೆ ಸಂಗಮೇಶ ನಿರಾಣಿ ಸ್ಪಷ್ಟನೆ ನೀಡಿದರು.
ರಾಜಕೀಯ ಮಾಡಲ್ಲ:
ಅಮೃತಧಾರೆ ವರದಿಯ ಕಾಳಿ-ಘಟಪ್ರಭಾ-ಮಲ್ಲಪ್ರಭಾ ನದಿ ಜೋಡಣೆಯನ್ನು ಮಾಡುವುದಕ್ಕೆ ನೀರಿನ ಸಮಸ್ಯೆ ಹೊರತು ರಾಜಕೀಯವಲ್ಲ. ಪಕ್ಷಾತೀತವಾಗಿ ಎಲ್ಲರನ್ನೂ ಕರೆದುಕೊಂಡು ಈ ಯೋಜನೆ ಜಾರಿ ಮಾಡಲಾಗುವುದು. ಅನಿವಾರ್ಯವಾದರೆ ಹೋರಾಟ ಸಹ ಮಾಡಲು ಸಿದ್ದರಾಗಿದ್ದೇವೆ ಎಂದರು.