ಮೆಳ್ಳಿಗೇರಿ ಸ್ಮಾರ್ಟ್‌ ಸರಕಾರಿ ಶಾಲೆ


ಸರಕಾರಿ ಶಾಲೆಗಳು ಎಂದರೆ ಮೂಗುಮುರಿಯುವವರ ನಡುವೆ ಮುಧೋಳ ತಾಲೂಕು ಮೆಳ್ಳಿಗೇರಿ ಸರಕಾರಿ ಶಾಲೆ ಹಲವು ಕಾರಣಗಳಿಂದ ಮಾದರಿಯಾಗಿದೆ.

ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷ ಣ ದೊರೆಯಲಿ ಎಂಬ ಉದ್ದೇಶದಿಂದ ತಾಲೂಕಿನ ಮೆಳ್ಳಿಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್‌ ಕ್ಲಾಸ್‌ ಆರಂಭಿಸಲಾಗಿದೆ. 6 ರಿಂದ 8 ನೇ ತರಗತಿ ವಿದ್ಯಾರ್ಥಿಗಳು ಈ ಸೌಲಭ್ಯಕ್ಕೆ ಪಡೆಯುತ್ತಿದ್ದಾರೆ.

ಸ್ಮಾರ್ಟ್‌ಕ್ಲಾಸ್‌


ನಿತ್ಯ ಶಿಕ್ಷ ಕರು ಪಾಠ ಪ್ರವರ್ಚನಗಳನ್ನು ಬೋಧನೆ ಮಾಡುತ್ತಿರುವ ಬೆನ್ನೆಲ್ಲೆ ಈಗ ನುರಿತ ಇಬ್ಬರು ಶಿಕ್ಷ ಕರು ಸ್ಮಾರ್ಟ್‌ ಕ್ಲಾಸ್‌ ಮೂಲಕ 6 ರಿಂದ 8 ನೇ ತರಗತಿವರಿಗೂ ಇಂಗ್ಲೀಷ್‌, ಗಣಿತ ಹಾಗೂ ವಿಜ್ಞಾನ ವಿಷಯಗಳನ್ನು ಸ್ಮಾರ್ಟ ಕ್ಲಾಸ್‌ ಮೂಲಕ ಮನವರಿಕೆ ಮಾಡುತ್ತಿದ್ದಾರೆ. ಇಂದಿನ ವಿದ್ಯಾರ್ಥಿಗಳಿಗೆ ತ್ವರೀತಗತಿಯಲ್ಲಿ ಅರ್ಥವಾಗುತ್ತಿದೆ ಎನ್ನುತ್ತಾರೆ ಶಿಕ್ಷ ಕ ಸಮೂಹ. ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಮೆಳ್ಳಿಗೇರಿಯ ಗ್ರಾಪಂ ಸಹಯೋಗದಲ್ಲಿ ಪ್ರಾಯೋಜಿಕತ್ವ ದೊರಕಿದೆ.


ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೊದಲ ಬಾರಿಗೆ 15 ಸಿಸಿ ಕ್ಯಾಮರಾ ಅಳವಡಿಸಿರುವುದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ರಮೇಶ ಜೀರಗಾಳ ಶಿಕ್ಷ ಣಪ್ರೇಮದಿಂದ ಗ್ರಾಪಂ ಮಟ್ಟದಿಂದಲೇ ಸಿಸಿ ಕ್ಯಾಮರಾ ಅಳವಡಿಸಲು ಸಹಾಯಕವಾಗಿದೆ. ಶಿಕ್ಷ ಕ ಸಮೂಹ ಸಾಮೂಹಿಕ ಜವಾಬ್ದಾರಿ ಇನ್ನಷ್ಟು ಹೆಚ್ಚಿಸಿದೆ. 1 ರಿಂದ 8 ನೇ ತರಗತಿಯ 270 ವಿದ್ಯಾರ್ಥಿಗಳು, 7 ಜನ ಶಿಕ್ಷ ಕರು ಹಾಗೂ 3 ಜನ ಅತಿಥಿ ಶಿಕ್ಷ ಕರು ಕಾರ್ಯನಿರ್ವಹಿಸುತ್ತಿದ್ದಾರೆ. ದಾನಿಗಳ ಮೂಲಕ ಗಣಕಯಂತ್ರ, ಲ್ಯಾಪಟ್ಯಾಪ್‌ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳಿಗೆ ಕೊಠಡಿಯಲ್ಲಿ ಕುಳಿತುಕೊಳ್ಳಲು ಡೆಸ್ಕ್‌, ಅಧ್ಯಕ್ಷ ರು ಸ್ವತ: ಜವಾಬ್ದಾರಿ ತೆಗೆದುಕೊಂಡು 270 ವಿದ್ಯಾರ್ಥಿಗಳಿಗೆ 1 ಜತೆ ಸರಕಾರ ಸಮವಸ್ತ್ರ ನೀಡಿದರೇ ಮತ್ತೊಂದೆಡೆ ಖಾಸಗಿ ಶಾಲೆಯಂತೆ ನಮ್ಮ ಸರಕಾರಿ ಶಾಲೆಯ ಮಕ್ಕಳು ಶಿಸ್ತು ಕಾಣಬೇಕೆಂದು ಸಮವಸ್ತ್ರ ಕೊಡಿಸಿದ್ದಾರೆ.

ವಾಟ್ಸ್‌ ಆಫ್‌ ಗ್ರೂಪ್‌

ಜುಲೈ ತಿಂಗಳದಿಂದ ಎಲ್ಲಾ ಪಾಲಕರ ಮೊಬೈಲ್‌ ಮೂಲಕ ನಿತ್ಯ ಶಾಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು, ಮನೆಗೆಲಸ, ಶಾಲೆಗೆ ಗೈರು ಹಾಜರಾಗುವ ವಿದ್ಯಾರ್ಥಿಗಳ ಮಾಹಿತಿ, ಸರಕಾರಿ ಯೋಜನೆಗಳು, ಅನುಷ್ಠಾನದ, ಪಾಠ ಪ್ರವರ್ಚನಗಳನ್ನು ಹಾಕಲಾಗುವುದು ಎಂದು ಶಿಕ್ಷ ಕ ತಯಾರು ಮಾಡಿಕೊಂಡಿದ್ದಾರೆ. ಇದಕ್ಕೆ ತಗಲುವ ವೆಚ್ಚವನ್ನು ಶಿಕ್ಷ ಕರೇ ನಿರ್ವಹಿಸಲು ಸಜ್ಜಾಗಿದ್ದಾರೆ.


ಸರಕಾರಿ ಶಾಲೆಯ ಎಲ್ಲೆಡೆ ಶಾಲಾ ಸುಧಾರಣಾ ಸಮಿತಿಗಳು, ಶಿಕ್ಷ ಣ ಪ್ರೇಮಿಗಳು ಇದ್ದಾರೆ. ಹಿಂದಿನ ಅಧ್ಯಕ್ಷ ಸತ್ಯೆಪ್ಪ ಮೆಟಗುಡ್ಡ ಶಾಲೆಯ ಆಗು ಹೋಗುಗಳಿಗೆ ಗಮನಹರಿಸಿ ಕ್ರೀಡೆಯಲ್ಲಿ ರಾಜ್ಯ,ರಾಷ್ಟ್ರಮಟ್ಟದವರಿಗೂ ಗಮನಸೆಳೆದವರಲ್ಲಿ ಪ್ರಮುಖರು. ಈಗಿನ ಅಧ್ಯಕ್ಷ ರಮೇಶ ಜೀರ ಗಾಳರ ಮುಂದಾಲೋಚನೆಯಿಂದ ಸಿಸಿ ಕ್ಯಾಮರಾ, ಸ್ಕೌಟ್‌ ಗೈಡ್‌ ತರಬೇತಿಗೆ ಆದ್ಯತೆ, ಶಾಲೆ ಬಳಿ ಇದ್ದ ತಿಪ್ಪೆಗುಂಡಿಗಳನ್ನು ಸರಿಸಿ ಸ್ವಚ್ಚ ಪರಿಸರ ನಿರ್ಮಾಣ ಮಾಡುವ ಉದ್ದೇಶದಿಂದ 10 ಎಕರೆ ಜಾಗೆಯಲ್ಲಿ ಉತ್ತಮ ಪರಿಸರನಿರ್ಮಾಣ ಮಾಡುವ ಗುರಿಯಿಂದಿಗೆ ಕಾರ‍್ಯನಿರ್ವಹಿಸುತ್ತಿದ್ದಾರೆ. ಭಾಗದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.

ಆದರೆ, 15 ಕೊಠಡಿಗಳ ಪೈಕಿ 6 ಕೊಠಡಿಗಳು ಶಿಥಿಲಾವ್ಯವಸ್ಥೆಗೆ ಬಂದು ತಲುಪಿವೆ. ಕಳೆದ ವರ್ಷ ಲೋಕೊಪಯೋಗಿ ಇಲಾಖೆ ಅಭಿಯಂತರರು ವರದಿ ಪಡೆದುಕೊಂಡು ತೆರಳಿದ್ದಾರೆ ಹೊರತು ಯಾವದೇ ಕಾರ್ಯವಾಗಿಲ್ಲ ಎನ್ನುವ ಬೇಡಿಕೆ ಮಾತ್ರ ಇಲ್ಲಿದೆ.

ಶಾಲೆಯಲ್ಲಿ ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷ ಣ ಸಿಗಬೇಕು. ಖಾಸಗಿ ಶಾಲೆಗಿಂತ ಯಾವದೂ ಕಡಿಮೆಯಾಗಿರಬಾರದು ಎಂದು ಹಲವಾರು ಸುಧಾರಣಾ ಕ್ರಮ ಕೈಗೊಂಡಿದ್ದೇನೆ. ಇದಕ್ಕೆ ಪ್ರತಿಫಲವೂ ಸಿಕ್ಕಿದೆ.

ರಮೇಶ ಜೀರಗಾಳ, ಅಧ್ಯಕ್ಷ ರು,ಶಾಲಾ ಸುಧಾರಣಾ ಸಮಿತಿ ಮೆಳ್ಳಿಗೇರಿ,

ಶಿಥಿಲಾವ್ಯವಸ್ಥೆಗೆ ಸಂಬಂಧಿಸಿದ ಕುರಿತು ಲೋಕೊಪಯೋಗಿ ಇಲಾಖೆ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ.ಶಾಲಾ ಸುಧಾರಣಾ ಸಮಿತಿಯಿಂದ ನಾನಾ ಅಭಿವೃದ್ಧಿ ಕಾರ್ಯಗಳಾಗುತ್ತಿವೆ.
ಎಂ.ಎಸ್‌.ಬಾವಿನಮನಿವರ, ಮುಖ್ಯಾಧ್ಯಾಪಕರು, ಸರಕಾರಿ ಶಾಲೆ, ಮೆಳ್ಳಿಗೇರಿ
ನವೀನ ಹಳೆಯದು