ಈಗಾಗಲೇ ಕಳೆದ ಸಾಲಿನಲ್ಲಿ 176, ಪ್ರಸಕ್ತ ಸಾಲಿನ 100 ಪಬ್ಲಿಕ್ ಸ್ಕೂಲ್‌ಗಳನ್ನು ಆರಂಭಮಾಡಿ ಉನ್ನತಮಟ್ಟದ ಶಿಕ್ಷ ಣ ಪ್ರತಿಯೊಬ್ಬರಿಗೂ ಸಿಗುವಂತೆ ಮಾಡುವುದೇ ರಾಜ್ಯ ಸರ್ಕಾರದ ಉದ್ದೇಶ. ಖಾಸಗಿ ಶಾಲೆಗಳಂತೆ ಸರಕಾರಿ ಶಾಲೆಗಳಲ್ಲಿಯೂ ಎಲ್.ಕೆ.ಜಿ. ತರಗತಿಗಳನ್ನು ಆರಂಭಮಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ಕೃಷ್ಟಮಟ್ಟದ ಶಿಕ್ಷ ಣ ಆರಂಭದಿಂದಲೇ ಸಿಗುವಂತೆ ಮಾಡುವುದು ನಮ್ಮ ಸರಕಾರದ ಉದ್ದೇಶವಾಗಿದೆ ಎಂದರು.
ನಮ್ಮ ತಂದೆಯವರ ಆಶಯದಂತೆ ನನ್ನ ಹುಟ್ಟೂರಿನಲ್ಲಿ ಆರುವರೆ ಎಕರೆ ಜಮೀನು ನೀಡಿ 25ಕೋಟಿಗೂ ಹೆಚ್ಚು ವಂತಿಕೆಯನ್ನು ಸಂಗ್ರಹಿಸಿ ಎಲ್ಲ ಮೂಲ ಸೌಕರ್ಯಗಳುಳ್ಳ ಶಾಲೆಯನ್ನು ನಿರ್ಮಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ 1200ಕ್ಕೂ ಹೆಚ್ಚು ಮಕ್ಕಳು ಓದುತ್ತಿರುವುದು ಸಂತಸ ತಂದಿದೆ .ಯಾವುದಕ್ಕೂ ಕೊರತೆಯಾಗದ ಹಾಗೆ ನೋಡಿಕೊಳ್ಳಲಾಗಿದೆ. ಜೊತೆಗೆ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟನಿಂದ ಕೋಟ್ಯಾಂತರ ಮೌಲ್ಯದ ಸಾಮಗ್ರಿಗಳಿಗೆ ಧನಸಹಾಯವನ್ನು ಮಾಡಲಾಗಿದೆ. ನನ್ನ ನಾಲ್ಕು ದಶಕಗಳ ಸಾರ್ವಜನಿಕ ಜೀವನದಲ್ಲಿ ಈ ಕಾರ್ಯ ಸಾಕಷ್ಟು ಹೆಮ್ಮೆ ತಂದಿದೆ. ರಾಜ್ಯಕ್ಕೆ ಪ್ರಥಮ ಬಂದಿದ್ದು ಅತ್ಯಂತ ಸ್ಮರಣೀಯ ಕ್ಷ ಣ ಎಂದು ಹೇಳಿದರು.
ಬೆಂಗಳೂರಿನ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಶಾಸಕರಾದ ರೋಷನ್‌ಬೇಗ್, ವಿಧಾನಪರಿಷತ್ ಸದಸ್ಯರಾದ ಐ.ಕೆ.ಚೌಡÜರಡ್ಡಿ, ಎಸ್.ಎಲ್.ಬೋಜೆಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ,ಸಾರ್ವಜನಿಕ ಶಿಕ್ಷ ಣ ಇಲಾಖೆಯ ಆಯುಕ್ತ ಡಾ.ಟಿ.ಸಿ.ಜಾಫರ, ಪ್ರಾಚಾರ‍್ಯ ವಿಜಯಲಕ್ಷ್ಮೀ ಪೆಟ್ಲೂರ, ಶಾಲಾ ಆಡಳಿತ ಮಂಡಳಿಯ ಸದಸ್ಯ ಶೇಖರ ಲಕ್ಷಾಣಿ, ಪ್ರಥಮ ದರ್ಜೆ ಸಹಾಯಕ ಬಸವರಾಜ ಚೌಕಿಮಠ, ಡಾ.ಬಸವರಾಜ ಧಾರವಾಡ ಇತರರು ಇದ್ದರು ಎಂದರು.
ಕಳೆದ ಸಾಲಿನಲ್ಲಿ ಆರಂಭವಾದ ಯಡಹಳ್ಳಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಹೆಮ್ಮೆ ತಂದಿದೆ. ಪ್ರತಿಯೊಬ್ಬ ಜನಪ್ರತಿನಿಧಿ ತಮ್ಮ ಊರು ತಮ್ಮ ಪ್ರದೇಶದಲ್ಲಿ ಯಡಹಳ್ಳಿಯಂತಹ ಹೈಟೆಕ್ ಶಾಲೆಯನ್ನು ನಿರ್ಮಿಸಿದರೆ ರಾಜ್ಯದಾದ್ಯಂತ ಗುಣಮಟ್ಟದ ಶಿಕ್ಷ ಣವನ್ನು ನೀಡುವಲ್ಲಿ ಸರಕಾರಿ ಶಾಲೆಗಳು ಹಿಂದೆ ಬೀಳಲಾರವು.