ಬಾಗಲಕೋಟೆ: ರೈಲು ಬರುತ್ತಿದ್ದ ವೇಳೆಯೇ ರೈಲ್ವೆ ಗೇಟ್ ದಾಟಲು ಹೋಗಿ ಇನ್ನೇನು ರೈಲ್ವೆಗೆ ಸಿಲುಕಲಿದ್ದ ವೃದ್ಧನೊಬ್ಬ, ಚಾಣಾಕ್ಷ್ಯತನ ಮೆರೆದು ರೈಲು ಹಳಿಗಳ ಮಧ್ಯೆ ಮಲಗಿ ಪ್ರಾಣ ಉಳಿಸಿಕೊಂಡ ಪ್ರಸಂಗ ನಗರದ ಶಿರೂರ ರೈಲ್ವೆ ಗೇಟ್ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ದೃಶ್ಯಾ ವಳಿಯ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ನಗರಕ್ಕೆ ಬಂದಿದ್ದ ಹಳ್ಳಿಯೊಂದರ ವೃದ್ಧ ಸಂಜೆ, ಮರಳಿ ತಮ್ಮೂರಿಗೆ ತೆರಳುವ ವೇಳೆ ಶಿರೂರ ರೈಲ್ವೆ ಗೇಟ್ ಹಾಕಲಾಗಿತ್ತು. ಆ ವೇಳೆ ರೈಲು ಬರುವುದು ತಡವಾಗಬಹುದು ಎಂದು ಭಾವಿಸಿ ರೈಲ್ವೆ ಗೇಟ್ ದಾಟಲು ಹೊರಟಿದ್ದರು. ಅಷ್ಟೊತ್ತಿಗೆ ಗೂಡ್ಸ್ ರೈಲು ವೇಗವಾಗಿ ಬರುತ್ತಿರುವುದು ಕಂಡು, ಅತ್ತ ಗೇಟ್ ದಾಟಲಾಗದೆ ರೈಲ್ವೆ ಹಳಿಗಳ ಮಧ್ಯೆ ಮಲಗಿದ್ದಾರೆ. ಈ ರೀತಿ ಮಲಗಿಕೊಂಡು ಜೀವ ಉಳಿಸಿಕೊಳ್ಳಲು ಅಲ್ಲಿದ್ದ ಸಾರ್ವಜನಿ ಕರು ವೃದ್ಧನಿಗೆ ಕೂಗಿ ಹೇಳಿದ್ದು, ಅವರು ಹೇಳಿದಂತೆ ವೃದ್ಧ ರೈಲು ಹಳಿಗಳ ಮಧ್ಯೆ ಮಲಗಿಕೊಂಡಿದ್ದಾರೆ. ವೃದ್ಧ ರೈಲು ಹಳಿಗಳ ಮಧ್ಯೆ ಮಲಗಿರುವುದು ಗೂಡ್ಸ್ ರೈಲ್ವೆ ಚಾಲಕನ ಗಮನಕ್ಕೆ ಬಂದಿದ್ದು ರೈಲು ನಿಲ್ಲಿಸಿದ್ದಾನೆ. ರೈಲು ನಿಂತ ಬಳಿಕ ವೃದ್ಧ ಹೊರ ಬಂದಿದ್ದು, ಈ ಎಲ್ಲ ದೃಶ್ಯಗಳನ್ನು ಯುವಕರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.