ಸರಳ ಜೀವಿ
ಸಾಮಾನ್ಯರಂತೆ ಸರಳ ಜೀವಿಯಾಗಿರುವ ಅವರು ರಾಜ್ಯ ರಾಷ್ಟ್ರಮಟ್ಟದಲ್ಲಿ ಗುರ್ತಿಸಿಕೊಂಡು ಬೆಳೆದಿದ್ದಾರೆ. 25 ವರ್ಷಗಳ ಕಾಲ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಉಳಿಸಿಕೊಂಡಿದ್ದಾರೆ.
ಸಚಿವ ಸ್ಥಾನ ಗ್ಯಾರಂಟಿ: ರನ್ನ ನಾಡಿನ ಮತ ಕ್ಷೇತ್ರದಿಂದ ಆಯ್ಕೆಯಾದ ಶಾಸಕರು ಯಾವುದೇ ಸರಕಾರವಿರಲಿ ಅವರಿಗೆ ಸಚಿವ ಸ್ಥಾನ ಗ್ಯಾರಂಟಿ ಎಂಬ ಮಾತು ಈಗ ಮತ್ತೊಮ್ಮೆ ಸಾಬಿತುವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ್, ಕುಮಾರಸ್ವಾಮಿ ಸರಕಾರದಲ್ಲಿಯೂ ಗೋವಿಂದ ಕಾರಜೋಳರಿಗೆ ಹಾಗೂ 2019 ರಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಸಚಿವ ಸ್ಥಾನ ದೊರಕಿದೆ. ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಎಲ್ಲಿಲ್ಲದ ಸಂಭ್ರಮ ಮನೆಮಾಡಿದೆ.
ಮೊದಲ ಸಚಿವ: ಕ್ಷೇತ್ರದಿಂದ 2001 ರಲ್ಲಿ ಎಸ್.ಎಂ.ಕೃಷ್ಣಾ ಸರಕಾರದಲ್ಲಿ ಆರ್.ಬಿ.ತಿಮ್ಮಾಪೂರ ಮೊದಲ ಬಾರಿಗೆ ಸಚಿವರಾಗಿ ಐತಿಹಾಸಿಕ ದಾಖಲೆ ಬರೆದವರು. ಸತತ ಸೋಲಿನಲ್ಲಿ ಸಾಕಷ್ಟು ರಾಜಕೀಯ ಏಳು ಬಿಳುಗಳ ಮಧ್ಯಯೂ ಸಿದ್ಧರಾಮಯ್ಯ ಸರಕಾರದಲ್ಲಿ ಅಬಕಾರಿ ಹಾಗೂ ಸಕ್ಕರೆ ಸಚಿವರಾಗಿ, ಬಾಗಲಕೋಟೆಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ತಮ್ಮದೇ ಆದ ಪ್ರಭಾವ ಹೆಚ್ಚಿಸಿಕೊಂಡಿದ್ದರು.
ಪಕ್ಷ ದ ಸಂಘಟಕ : ಸಚಿವ ಗೋವಿಂದ ಕಾರಜೋಳರು ಬಿಜೆಪಿ ಸರಕಾರವಿಲ್ಲದೇ ಇರುವಾಗ ರಾಜ್ಯದೆಲ್ಲೆಡೆ ಸುತ್ತಾಡಿ ಪಕ್ಷ ದ ಸಂಘಟನೆಗೆ ಶ್ರಮಪಟ್ಟಿದ್ದರು. ರಾಜ್ಯ, ರಾಷ್ಟ್ರಮಟ್ಟದ ನಾಯಕರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮೀತ ಶಹಾ, ಮುಖ್ಯಮಂತ್ರಿ ಯಡಿಯೂರಪ್ಪವರ ಜತೆ ಚುನಾವಣೆ ಸ್ಟಾರ್ ಪ್ರಚಾರಕರಾಗಿ ಗುರ್ತಿಸಿಕೊಂಡವರು. ಗೋವಿಂದ ಕಾರಜೋಳರಿಗೆ ರಾಜ್ಯದ ಮೂಲೆ ಮೂಲೆಗಳಲ್ಲಿ ರಾಜಕೀಯ ನೆಂಟಸ್ಥಿತಿಕೆಯಿದೆ. ಹಿಂದಿನ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಮೌಲ್ಯಾಧಾರಿತ ರಾಜಕೀಯ ಗರಡಿಯಲ್ಲಿ ಬೆಳೆದು ಬಂದ ಅವರಿಗೆ ರಾಜಕೀಯ ಅಧಿಕಾರದ ಯೋಗ ದೊರಕಿರುವುದನ್ನು ಅವರ ಸ್ನೇಹಿತರು ನೆನಪಿಸಿಕೊಳ್ಳುತ್ತಾರೆ