ಮಿಂಟೋ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಕರವೇ ಯಿಂದ ಹಲ್ಲೆ ಆಯಿತೆಂದು ಎಲ್ಲ ವೈದ್ಯರು ಸೇರಿ ಮೊನ್ನೆಯಿಂದ ಮುಷ್ಕರ ನಡೆಸುತ್ತಿದ್ದಾರೆ. ಹಲವಾರು ಮಾಧ್ಯಮಗಳೂ ಕೂಡ ಇವರನ್ನೇ ಬೆಂಬಲಿಸುತ್ತಿದ್ದಾವೆ ಯಾಕೆ ಅಂತ ಅರ್ಥ ಆಗಲಿಲ್ಲ
■ಪ್ರಶ್ನೆಗಳು■
● ಉಚಿತ ಚಿಕಿತ್ಸೆ ಅಂತ 22 ಜನರ ಕಣ್ಣು ಕಿತ್ತುಕೊಂಡಿದ್ದು ಎಷ್ಟು ನ್ಯಾಯ
●ನಿಮ್ಮ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲ ಆಗಲೆಂದು ಉಚಿತ ಚಿಕಿತ್ಸೆಯ ನೆಪದಲ್ಲಿ ಆ ಮುಗ್ದರನ್ನು ಪ್ರಾಯೋಗಿಕ ವಸ್ತುವಾಗಿ ಬಳಸಿದ್ರಾ?
●ನಿಮ್ಮಿಂದ ತಪ್ಪು ಆಗಿದ್ದೆ ಅನ್ನೋದು ಗೊತ್ತಿದ್ರು ನೀವ್ಯಾಕೆ ದೃಷ್ಟಿ ಕಳೆದುಕೊಂಡ ಆ 22 ಜನರ ಸಹಾಯಕ್ಕೆ ತೆರಳಲಿಲ್ಲ?
●ನಿಮಗೆ ಜನರ ಮೇಲೆ ಅಷ್ಟೊಂದು ಕರುಣೆ ಇದ್ದರೆ ಆಸ್ಪತ್ರೆಗಳನ್ನು ಬಂದ್ ಮಾಡಿ ಸಾಮಾನ್ಯ ಜನರಿಗೆ ಕಷ್ಟ ಕೊಟ್ಟು ಬಂದ್ ಮಾಡುವ ಅವಶ್ಯಕತೆ ಇತ್ತಾ..?
●ನಮ್ಮ ಸಮಾಜದಲ್ಲಿ ಮಾಧ್ಯಮಗಳನ್ನು ನಾಲ್ಕನೆಯ ಅಂಗ ಅಂತ ಸಾಮಾನ್ಯ ಜನ ನಂಬಿದ್ದಾರೆ ಹಾಗೆಯೇ ಮೇಲಿನ ಎಲ್ಲ ವಿಷಯಗಳು ಮಾಧ್ಯಮಗಳಿಗೂ ಗೊತ್ತು ಆದರೂ ಆಸ್ಪತ್ರೆಯನ್ನು ಬೆಂಬಲಿಸುತ್ತಿರುವುದು ಏಕೆ?
【ಸವಾಲು】
● ಕರವೇ ಯಿಂದ ನಿಜವಾಗಲೂ ಹಲ್ಲೆ ಆಗಿದ್ರೆ ಅದನ್ನು ಸಾಬೀತುಪಡಿಸಿ ಅಥವಾ ಸಾಬೀತಿಗೆ
ಸಾಕ್ಷ್ಯಗಳನ್ನು ನಿಮ್ಮನ್ನು ಬೆಂಬಲಿಸುವ ಮಾಧ್ಯಮಗಳ ಮೂಲಕವೇ ಪ್ರದರ್ಶಿಸಿ & ನ್ಯಾಯಾಂಗ ತನಿಖೆ ಆಗಲಿ
● ನೀವ್ ಹೇಳೋ ಹಾಗೆ ಕರವೆಯಿಂದ ಆಗಿದ್ದು ಹಲ್ಲೆ ಆದ್ರೆ ಆ 22 ಜನರ ದೃಷ್ಟಿ ಕಳೆದುಕೊಳ್ಳುವ ಹಾಗೆ ಆಗಿದೆ ಹಾಗಾದ್ರೆ ನೀವ್ ಮಾಡಿದ್ದೇನು?
ಕೊನೆಯ ಮಾತು
ನಮ್ಮ ಸಮಾಜ ವೈದ್ಯರೆಂದರೆ ತುಂಬಾನೇ ಗೌರವ ಕೊಡುತ್ತೆ ನಿಮ್ಮ ತೇವಲಿಗೆ ಸಾಮಾನ್ಯ ಜನರ ಜೀವನ ಬಲಿ ಕೊಡಬೇಡಿ. ನನ್ನ ಜನರಿಗೆ ನನ್ನದೊಂದು ಮನವಿ ಯಾವುದೇ ಆಸ್ಪತ್ರೆ ಆಗಲಿ ತನ್ನೊಂದಿಗೆ ವೈದ್ಯಕೀಯ ಶಿಕನವನ್ನು ನೀಡುತ್ತಾ ಸಾಮಾನ್ಯ ಜನರಿಗೆ ಉಚಿತ ಚಿಕಿತ್ಸೆ ಅಂದ್ರೆ ದಯವಿಟ್ಟು ಹೋಗಬೇಡಿ.